Ananya Pandey: ಚಿತ್ರರಂಗದಲ್ಲಿ ಬೆಳೆಯುವುದಕ್ಕೂ ಮುನ್ನವೇ ಕುಖ್ಯಾತಿ ಪಡೆದ ಅನನ್ಯಾ ಪಾಂಡೆಗೆ ಆರ್ಯನ್​​​ ಜತೆ ಏನು ನಂಟು?

| Updated By: ಮದನ್​ ಕುಮಾರ್​

Updated on: Oct 21, 2021 | 1:48 PM

NCB raid: ಎನ್​ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮೊಬೈಲ್​ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇಂದು (ಅ.21) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕರೆ ಬಂಧನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Ananya Pandey: ಚಿತ್ರರಂಗದಲ್ಲಿ ಬೆಳೆಯುವುದಕ್ಕೂ ಮುನ್ನವೇ ಕುಖ್ಯಾತಿ ಪಡೆದ ಅನನ್ಯಾ ಪಾಂಡೆಗೆ ಆರ್ಯನ್​​​ ಜತೆ ಏನು ನಂಟು?
ಅನನ್ಯಾ ಪಾಂಡೆ, ಶಾರುಖ್​ ಖಾನ್​, ಆರ್ಯನ್​ ಖಾನ್​
Follow us on

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಅವರಿಗೆ ಸದ್ಯಕ್ಕಂತೂ ಸಂಕಷ್ಟ ತಪ್ಪಿಲ್ಲ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಅವರಿಗೆ ಜಾಮೀನು ಸಿಗುತ್ತಿಲ್ಲ. ಅದರ ಜತೆಗೆ ಎನ್​ಸಿಬಿ ಅಧಿಕಾರಿಗಳು ತನಿಖೆ ಇನ್ನಷ್ಟು ಚುರುಕುಗೊಳಿಸಿದ್ದಾರೆ. ಶಾರುಖ್​ ಖಾನ್​ ಮನೆ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೇ ಉದಯೋನ್ಮುಖ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೂ ದಾಳಿ ನಡೆದಿದ್ದು, ಡ್ರಗ್ಸ್​ ಕೇಸ್​ ಸುಳಿಯಲ್ಲಿ ಅವರೂ ಸಿಕ್ಕಿಕೊಂಡಿದ್ದಾರೆ. ಡ್ರಗ್ಸ್​ ವ್ಯವಹಾರದಲ್ಲಿ ಅನನ್ಯಾ ಪಾತ್ರ ಏನು ಎಂಬ ಪ್ರಶ್ನೆ ಈಗ ಮೂಡಿದೆ.

ಬಾಲಿವುಡ್​ನ ಖ್ಯಾತ ನಟ ಚಂಕಿ ಪಾಂಡೆ ಅವರ ಪುತ್ರಿಯೇ ಅನನ್ಯಾ ಪಾಂಡೆ. ನೂರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಚಂಕಿ ಪಾಂಡೆ ಅವರಿಗೆ ಸಲ್ಲುತ್ತದೆ. ಆದರೆ ಅವರ ಮಗಳು ಅನನ್ಯಾ ಈಗ ತಾನೇ ಬಾಲಿವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಿನ್ನೂ ಅವರಿಗೆ 22ರ ಪ್ರಾಯ. 2019ರಲ್ಲಿ ತೆರೆಕಂಡ ‘ಸ್ಟೂಡೆಂಟ್​ ಆಫ್​ ದಿ ಇಯರ್​ 2’ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟ ಅವರಿಗೆ ಮೊದಲ ಸಿನಿಮಾದಲ್ಲೇ ಫಿಲ್ಮ್​ ಫೇರ್​ ಪ್ರಶಸ್ತಿ ಸಿಕ್ಕಿತು. ‘ಪತಿ ಪತ್ನಿ ಔರ್​ ವೋ’, ‘ಖಾಲಿ ಪೀಲಿ’ ಸಿನಿಮಾದಲ್ಲಿ ಅವರು ನಟಿಸಿದರು. ಸದ್ಯ ವಿಜಯ್​ ದೇವರಕೊಂಡ ಜೊತೆ ‘ಲೈಗರ್​’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟರಲ್ಲಾಗಲೇ ಅವರ ಹೆಸರು ಡ್ರಗ್ಸ್​ ಜಾಲದ ಜೊತೆ ತಳುಕು ಹಾಕಿಕೊಂಡಿದೆ.

ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಮಾತು ಅನೇಕ ಬಾರಿ ಸಾಬೀತಾಗಿದೆ. ಖಚಿತ ಮಾಹಿತಿ ಮೇರೆಗೆ ಎನ್​ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ಮಾಡಿದ್ದಾರೆ. ಏಕಕಾಲಕ್ಕೆ ಶಾರುಖ್​ ಖಾನ್​ ಮತ್ತು ಅನನ್ಯಾ ಪಾಂಡೆ ನಿವಾಸದ ಮೇಲೆ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣ ಆಗಿದೆ. ಶಾರುಖ್​ ಪುತ್ರ ಆರ್ಯನ್​ ಖಾನ್​ ಮತ್ತು ಅನನ್ಯಾ ನಡುವೆ ಡ್ರಗ್ಸ್​ ವಿಚಾರದಲ್ಲಿ ವ್ಯವಹಾರ ಇತ್ತಾ? ವಿಚಾರಣೆ ವೇಳೆ ಈ ವಿಷಯವನ್ನು ಆರ್ಯನ್​ ಖಾನ್​ ಬಾಯಿ ಬಿಟ್ಟಿರಬಹುದೇ ಎಂಬ ಪ್ರಶ್ನೆ ಈಗ ಮೂಡಿದೆ.

ಸದ್ಯ ಎನ್​ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮೊಬೈಲ್​ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇಂದು (ಅ.21) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕರೆ ಬಂಧನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ:

ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್​ ಖಾನ್​ಗೆ ಮಕ್ಕಳ ಶಾಲೆ ಫೀಸ್​ ಕಟ್ಟಲು ದುಡ್ಡಿಲ್ಲ; ಯಾರಿದು?

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ