
ಮುಂಬೈ: ಮುಂಬೈನಲ್ಲಿ ಬಾಲಿವುಡ್ ನಟ, ನಟಿಯರ ಮನೆಗಳ ಮೇಲೆ ಎನ್ಸಿಬಿ ದಾಳಿ ನಡೆಸಿದೆ. ಅದರಲ್ಲಿ ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್ ಖಾನ್ ನಿವಾಸ ‘ಮನ್ನತ್’ಗೆ ತೆರಳಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿರುವ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಸಿಬಿ ಅಧಿಕಾರಿಗಳು ತನಿಖೆಗಾಗಿ ಶೋಧ ನಡೆಸಲು ಶಾರುಖ್ ನಿವಾಸಕ್ಕೆ ತೆರಳಿದ್ದಾರೆ ಎಂದೂ ಇದೇ ವೇಳೆ ಹೇಳಲಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ, ಶಾರುಖ್ ಮನೆಗೆ ಎನ್ಸಿಬಿ ಅಧಿಕಾರಿಗಳು ಪೇಪರ್ ವರ್ಕ್ ಕೆಲಸಕ್ಕಾಗಿ ತೆರಳಿದ್ದರು. ಎನ್ಸಿಬಿಯ ಮತ್ತೊಂದು ತಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಗೆ ತೆರಳಿತ್ತು. ಇದೇ ವೇಳೆ ಎನ್ಸಿಬಿ ಅನನ್ಯಾ ಪಾಂಡೆಗೆ ಸಮನ್ಸ್ ಜಾರಿ ಮಾಡಿದೆ.
‘ಮನ್ನತ್’ಗೆ ತೆರಳುತ್ತಿರುವ ಎನ್ಸಿಬಿ ಅಧಿಕಾರಿಗಳು:
ನಟಿ ಅನನ್ಯಾ ಪಾಂಡೆ ಮನೆಗೆ ಎನ್ಸಿಬಿ ಅಧಿಕಾರಿಗಳು ತೆರಳುತ್ತಿರುವ ದೃಶ್ಯ:
ಇಂದು ಮುಂಜಾನೆ ನಟ ಶಾರುಖ್ ಆರ್ಥರ್ ರೋಡ್ ಜೈಲಿಗೆ ತೆರಳಿ ಆರ್ಯನ್ರನ್ನು ಭೇಟಿಯಾಗಿದ್ದರು. ಪ್ರಸ್ತುತ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದು, ಹೈಕೋರ್ಟ್ನಲ್ಲಿ ಅಕ್ಟೋಬರ್ 26ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಶಾರುಖ್ ಮನೆಯಲ್ಲಿ ಶೋಧ ನಡೆದಿಲ್ಲ: ಮೂಲಗಳ ಮಾಹಿತಿ
ಶಾರುಖ್ ಖಾನ್ ಮನೆಯಲ್ಲಿ ಎನ್ಸಿಬಿ ಶೋಧ ಮಾಡಿಲ್ಲ ಹಾಗೂ ಶಾರುಖ್ ಖಾನ್ಗೆ ಯಾವುದೇ ಸಮನ್ಸ್ ಕೂಡ ನೀಡಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ. ಕೇವಲ ಪೇಪರ್ ವರ್ಕ್ಗಾಗಿ ಶಾರುಖ್ ಮನೆಗೆ ಭೇಟಿ ನೀಡಿ, ಎನ್ಸಿಬಿ ಅಧಿಕಾರಿಗಳು ವಾಪಸ್ಸಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ:
Shah Rukh Khan: ಕೊನೆಗೂ ‘ಮನ್ನತ್’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ
ಆರ್ಯನ್ಗೆ ಜಾಮೀನು ನೀಡೋಕೆ ಸಾಧ್ಯವೇ ಇಲ್ಲ ಎಂದ ಎನ್ಡಿಪಿಎಸ್ ಕೋರ್ಟ್
Published On - 12:46 pm, Thu, 21 October 21