ಆರ್ಯನ್​ ಖಾನ್​ ಡ್ರಗ್​ ಕೇಸ್​ ಬಗ್ಗೆ ಕೇಳಿ ಬಂತು ಹೊಸ ಅಪ್​ಡೇಟ್

| Updated By: ರಾಜೇಶ್ ದುಗ್ಗುಮನೆ

Updated on: Mar 29, 2022 | 6:00 AM

ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ವರದಿ ಆಗಿತ್ತು. ಶಾರುಖ್ ಪುತ್ರ ಆರ್ಯನ್ ಅವರನ್ನು ಬಂಧಿಸಿದ್ದ ಕಾರ್ಡೆಲಿಯಾ ಕ್ರೂಸ್ ಶಿಪ್ ಮೇಲಿನ ದಾಳಿ ಪ್ರಕರಣದಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ವರದಿ ಆಗಿತ್ತು.

ಆರ್ಯನ್​ ಖಾನ್​ ಡ್ರಗ್​ ಕೇಸ್​ ಬಗ್ಗೆ ಕೇಳಿ ಬಂತು ಹೊಸ ಅಪ್​ಡೇಟ್
ಆರ್ಯನ್ ಖಾನ್, ಶಾರುಖ್ ಖಾನ್
Follow us on

ಆರ್ಯನ್​ ಖಾನ್ (Aryan Khan) ಅವರು​ ಡ್ರಗ್​ ಕೇಸ್​ನಲ್ಲಿ ಸಿಲುಕಿದ್ದ ಪ್ರಕರಣ ಸಾಕಷ್ಟು ಸೆನ್ಸೇಷನ್​ ಕ್ರಿಯೇಟ್​ ಮಾಡಿತ್ತು. ಈ​ ಪ್ರಕರಣ ನಡೆದು ಬರೋಬ್ಬರಿ 6 ತಿಂಗಳು ಕಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಮಂಡಳಿಯು (ಎನ್​ಸಿಬಿ) ಕೋರ್ಟ್​ಗೆ ಏಪ್ರಿಲ್​ 2ರ ಒಳಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಬೇಕಿತ್ತು. ಆದರೆ, ದೋಷಾರೋಪ (Chargesheet) ಪಟ್ಟಿ ಸಲ್ಲಿಸಲು ಇನ್ನೂ ಮೂರು ತಿಂಗಳು ಹೆಚ್ಚಿನ ಕಾಲಾವಕಾಶ ನೀಡುವಂತೆ ಎನ್​ಸಿಬಿಯ ವಿಶೇಷ ತನಿಖಾ ತಂಡ ಮುಂಬೈ ಸೆಷನ್​ ಕೋರ್ಟ್​ಗೆ (Mumbai Session Court) ಮನವಿ ಮಾಡಿದೆ.

ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ವರದಿ ಆಗಿತ್ತು. ಶಾರುಖ್ ಪುತ್ರ ಆರ್ಯನ್ ಅವರನ್ನು ಬಂಧಿಸಿದ್ದ ಕಾರ್ಡೆಲಿಯಾ ಕ್ರೂಸ್ ಶಿಪ್ ಮೇಲಿನ ದಾಳಿ ಪ್ರಕರಣದಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ವರದಿ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಸ್​ಐಟಿ, ಆರ್ಯನ್ ವಿರುದ್ಧ ಸಾಕ್ಷ್ಯಗಳಿಲ್ಲ ಎನ್ನುವುದನ್ನು ಅಲ್ಲಗಳೆದಿತ್ತು. ಮತ್ತು ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈಗ ಎಸ್​ಐಟಿ ಈ ಪ್ರಕರಣದಲ್ಲಿ ಸಾಕ್ಷ್ಯ ಹುಡುಕಾಟದಲ್ಲಿ ತೊಡಗಿದೆ. ಈ ಕಾರಣಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ಕೇಳಿದೆ.

ಷರತ್ತು ಸಡಿಲಗೊಳಿಸಿದ್ದ ಕೋರ್ಟ್

ಮುಂಬೈ ಕ್ರೂಸ್ ಶಿಪ್​​ನಲ್ಲಿ ಡ್ರಗ್ ಸಿಕ್ಕಿದೆ ಎಂದು ಕಳೆದ ಅಕ್ಟೋಬರ್​ ತಿಂಗಳಲ್ಲಿ ಆರ್ಯನ್​ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಹಲವು ವಾರಗಳ ಕಾಲ ಜೈಲಿನಲ್ಲೇ ಇದ್ದರು. ನಂತರ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು ಬಾಂಬೆ ಹೈಕೋರ್ಟ್​. ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಎನ್​ಸಿಬಿಗೆ ಹಾಜರಾಗಬೇಕು ಎಂದು ಷರತ್ತು ಹಾಕಿತ್ತು. ಆ ಬಳಿಕ ಜಾಮೀನು ಷರತ್ತನ್ನು ಮಾರ್ಪಡಿಸಲು ಆರ್ಯನ್‌ ಖಾನ್‌ ಮನವಿ ಮಾಡಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಪುರಸ್ಕರಿಸಿತ್ತು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಅದು ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣ: ಆರೋಪಿಗಳ ಸಂಚು ನಿರೂಪಿಸುವ ಪುರಾವೆ ಇಲ್ಲ ಎಂದ ಬಾಂಬೆ ಹೈಕೋರ್ಟ್

Aryan Khan: ಕ್ರೂಸ್ ಶಿಪ್ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂಬ ವರದಿ ಅಲ್ಲಗಳೆದ ಎಸ್​ಐಟಿ