ಬಾಲಿವುಡ್ನ ಖ್ಯಾತ ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ವಿದೇಶದಲ್ಲೂ ಅವರ ಫ್ಯಾನ್ಸ್ ಇದ್ದಾರೆ. ಎಲ್ಲಿಯೇ ಇದ್ದರೂ ನೋರಾ ಫತೇಹಿ ಅವರನ್ನು ಜನರು ಗುರುತಿಸುತ್ತಾರೆ. ಆದರೆ ಈ ಹಳೇ ಫೋಟೋದಲ್ಲಿ ಅವರು ಗುರುತಿಸುವುದು ಸ್ವಲ್ಪ ಕಷ್ಟ. ಯಾಕೆಂದರೆ, ಈ ಫೋಟೋದಲ್ಲಿ ಅವರ ಲುಕ್ ಸಂಪೂರ್ಣ ಬೇರೆಯಾಗಿದೆ. ನೋರಾ ಫತೇಹಿ ಅವರು ಶಾಲೆಯಲ್ಲಿ ಓದುತ್ತಿದ್ದಾಗ ತೆಗೆದ ಫೋಟೋ ಇದು! ಅದನ್ನು ಅವರೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಖಾತೆಗಳಲ್ಲಿ ಈ ಫೋಟೋ ವೈರಲ್ ಆಗಿದೆ.
ಈ ಫೋಟೋ ಕ್ಲಿಕ್ಕಿಸಿದಾಗ ನೋರಾ ಫತೇಹಿ ಅವರಿಗೆ ಕೇವಲ 17 ವರ್ಷ. ಆದರೆ ಈಗ ಅವರಿಗೆ 32 ವರ್ಷ ವಯಸ್ಸು. ಅಂದರೆ, ಬರೋಬ್ಬರಿ 15 ವರ್ಷಗಳಷ್ಟು ಹಳೆಯ ಫೋಟೋ ಇದು. ಇದನ್ನು ಈಗ ಹಂಚಿಕೊಂಡು ಆ ದಿನಗಳನ್ನು ನೋರಾ ಫತೇಹಿ ಅವರು ನೆನಪಿಸಿಕೊಂಡಿದ್ದಾರೆ. ಇದರಲ್ಲಿ ಎಡಗಡೆಯಿಂದ ಮೊದಲನೇ ಹುಡುಗಿಯೇ ನೋರಾ ಫತೇಹಿ. ಪಕ್ಕದಲ್ಲಿ ಇರುವುದು ಅವರ ಸಹಪಾಠಿಗಳು.
ಇದನ್ನೂ ಓದಿ: ಸೆಲೆಬ್ರಿಟಿಗಳ ಲವ್, ಮದುವೆ ಹಿಂದಿನ ಕರಾಳ ಸತ್ಯ ತೆರೆದಿಟ್ಟ ನೋರಾ ಫತೇಹಿ
‘17ನೇ ವಯಸ್ಸಿನ ನಾನು ನನ್ನ ಕ್ಲಾಸ್ಮೇಟ್ಸ್ ಜೊತೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಲು ಸಿದ್ಧವಾದ ಕ್ಷಣ ಅದು. ಹಲವು ವಾರಗಳ ಕಾಲ ನಾವು ತಾಲೀಮು ಮಾಡಿದ್ದೆವು. ನನಗೆ ಗೊತ್ತಿರುವ ಎಲ್ಲವನ್ನೂ ನಾನು ಅವರಿಗೆ ಕಲಿಸಿದ್ದೆ. ಹಲವು ಹಾಡುಗಳಿಗೆ ನಾವು ಬೆಲ್ಲಿ ಡ್ಯಾನ್ಸ್ ಫ್ಯೂಷನ್ ಮಾಡಿದ್ದೆವು’ ಎಂದು ನೋರಾ ಫತೇಹಿ ಅವರು ನೆನಪಿನ ಪುಟ ತೆಗೆದಿದ್ದಾರೆ. ಅಭಿಮಾನಿಗಳು ಈ ವೈರಲ್ ಫೋಟೋಗೆ ಕಮೆಂಟ್ ಮಾಡಿದ್ದಾರೆ.
ನೋರಾ ಫತೇಹಿ ಹಂಚಿಕೊಂಡ ಈ ಫೋಟೋ ನೋಡಿದ ಬಳಿಕ ಅನೇಕರಿಗೆ ಒಂದು ಅನುಮಾನ ಕಾಡಿದೆ. ಕೆಲವೇ ವರ್ಷಗಳಲ್ಲಿ ನೋರಾ ಫತೇಹಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅದಕ್ಕೆ ಪ್ಲಾಸ್ಟಿಕ್ ಸರ್ಜರಿ ಕಾರಣ ಎಂಬುದು ಕೆಲವರ ಅನಿಸಿಕೆ. ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ನೋರಾ ಫತೇಹಿ ಅವರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.