ಜನರಿಗೆ ಮೋಸ ಮಾಡಲು ಅತಿ ಹೆಚ್ಚು ಬಳಕೆ ಆಯ್ತು ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಹೆಸರು

|

Updated on: Oct 14, 2024 | 4:06 PM

ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್​ ಮುಂತಾದ ಸೆಲೆಬ್ರಿಟಿಗಳ ಜೊತೆ ತುಂಬ ಆಪ್ತವಾಗಿ ನಿಂತು ಫೋಟೋ ತೆಗೆಸಿಕೊಳ್ಳುವ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಹೆಸರನ್ನು ಸೈಬರ್​ ವಂಚಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಯಾಮಾರಿಸಲು ಒರಿ ಹೆಸರು ಹೆಚ್ಚಾಗಿ ಬಳಕೆ ಆಗಿದೆ ಎಂಬ ವಿಚಾರ ಬಹಿರಂಗವಾಗಿದೆ.

ಜನರಿಗೆ ಮೋಸ ಮಾಡಲು ಅತಿ ಹೆಚ್ಚು ಬಳಕೆ ಆಯ್ತು ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಹೆಸರು
ಒರ್ಹಾನ್​ ಅವತ್ರಮಣಿ
Follow us on

ಇತ್ತೀಚಿನ ವರ್ಷಗಳಲ್ಲಿ ಒರಿ ಹೆಸರು ಸಿಕ್ಕಾಪಟ್ಟೆ ಚಾಲ್ತಿಗೆ ಬಂತು. ಒರ್ಹಾನ್ ಅವತ್ರಮಣಿ ಎಂಬುದು ಈ ವ್ಯಕ್ತಿಯ ಪೂರ್ಣ ಹೆಸರು. ಬಾಲಿವುಡ್​ ಮಂದಿಯ ಎಲ್ಲ ಪಾರ್ಟಿಗಳನ್ನೂ ಒರಿ ಕಾಣಿಸಿಕೊಳ್ಳಲು ಆರಂಭಿಸಿದರು. ಬಿ-ಟೌನ್ ಬೆಡಗಿ ಜಾನ್ವಿ ಕಪೂರ್​ ಅವರಿಂದ ಹಿಡಿದು ಇಂಟರ್​ನ್ಯಾಷನಲ್​ ಸೆನ್ಸೇಷನ್​ ರಿಯಾನಾ ತನಕ ಎಲ್ಲರ ಜೊತೆಗೂ ಒರಿ ಆಪ್ತವಾಗಿ ಫೋಟೋ ಕ್ಲಿಕ್ಕಿಸಿಕೊಂಡು ಜನಪ್ರಿಯತೆ ಗಳಿಸಿದರು. ಆದರೆ ಅವರ ಹೆಸರನ್ನು ಬಳಸಿಕೊಂಡು ಜನರಿಗೆ ಮೋಸ ಮಾಡುವ ದೊಡ್ಡ ಜಾಲವೇ ನಡೆದಿದೆ. ಆ ಬಗ್ಗೆ ಒಂದು ಅಚ್ಚರಿಯ ಮಾಹಿತಿ ಬಹಿರಂಗ ಆಗಿದೆ.

ಸೋಶಿಯಲ್​ ಮೀಡಿಯಾಗೆ ಜನರು ಅಡಿಕ್ಟ್​ ಆಗಿದ್ದಾರೆ. ಸದಾ ಕಾಲ ಇಂಟರ್​ನೆಟ್​ ಬಳಕೆಯಲ್ಲಿ ಬಹುತೇಕರು ಮುಳುಗಿರುತ್ತಾರೆ. ಹಾಗಾಗಿ ವಂಚಕರು ಕೂಡ ಇದೇ ಜಾಲವನ್ನು ಬಳಸುತ್ತಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರನ್ನು ಬಳಸಿಕೊಂಡು ಜನರಿಗೆ ಮೋಸ ಮಾಡುವ ಸೈಬರ್​ ಖದೀಮರು ಸಕ್ರಿಯವಾಗಿದ್ದಾರೆ. ಅಚ್ಚರಿ ಏನೆಂದರೆ, ಸೈಬರ್​ ವಂಚಕರು ಅತಿ ಹೆಚ್ಚು ಬಳಕೆ ಮಾಡಿರುವ ಹೆಸರು ಒರಿ ಅವರದ್ದು!

ಖಾಸಗಿ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬಹಿರಂಗ ಆಗಿದೆ. ಸೈಬರ್​ ಖದೀಮರು ಬಳಸಿದ ಟಾಪ್​ 10 ಸೆಲೆಬ್ರಿಟಿಗಳ ಹೆಸರಿನ ಪೈಕಿ ಒರಿ ಹೆಸರು ನಂಬರ್​ 1 ಸ್ಥಾನದಲ್ಲಿದೆ. ಗಾಯಕ-ನಟ ದಿಲ್​ಜಿತ್​ ದೋಸಾಂಜ್​ ಹೆಸರು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ನಟಿ ಆಲಿಯಾ ಭಟ್​, 4ನೇ ಸ್ಥಾನದಲ್ಲಿ ನಟ ರಣವೀರ್​ ಸಿಂಗ್​ ಹೆಸರು ಇದೆ. ಅಲ್ಲದೇ ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳ ಹೆಸರು ಕೂಡ ಬಳಕೆ ಆಗಿದೆ.

ಇದನ್ನೂ ಓದಿ: ಅಂಬಾನಿ ಮಗನ ಪ್ರೀ-ವೆಡ್ಡಿಂಗ್ ಊಟದಲ್ಲಿ ಸಿಕ್ತು ಕೂದಲು; ಒರಿ ಮಾಡಿದ ವಿಡಿಯೋ ವೈರಲ್

5ನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಹೆಸರು ಇದೆ. 6ನೇ ಸ್ಥಾನದಲ್ಲಿ ಸಚಿನ್​ ತೆಂಡೂಲ್ಕರ್​ ಹೆಸರು, 7ನೇ ಸ್ಥಾನದಲ್ಲಿ ಶಾರುಖ್​ ಖಾನ್​ ಹೆಸರು, 8ನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಹೆಸರು, 9ನೇ ಸ್ಥಾನದಲ್ಲಿ ಆಮಿರ್​ ಖಾನ್ ಹೆಸರು ಹಾಗೂ 10ನೇ ಸ್ಥಾನದಲ್ಲಿ ಎಂಎಸ್​ ಧೋನಿ ಹೆಸರು ಇದೆ. ಇಂಥ ಘಟಾನುಘಟಿ ಸೆಲೆಬ್ರಿಟಿಗಳ ಹೆಸರಗಳನ್ನೂ ಮೀರಿಸಿ ಒರಿ ಹೆಸರನ್ನು ಸೈಬರ್​ ವಂಚಕರು ಹೆಚ್ಚಾಗಿ ಬಳಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.