AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಬಿಗ್ ಬಾಸ್​ನಿಂದ ಕೊನೆಗೂ ಹೊರಬಂತು ಕತ್ತೆ

ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ ತರಲಾಗಿದೆ.

ಹಿಂದಿ ಬಿಗ್ ಬಾಸ್​ನಿಂದ ಕೊನೆಗೂ ಹೊರಬಂತು ಕತ್ತೆ
ಬಿಗ್ ಬಾಸ್​ಗೆ ಬಂದ ಕತ್ತೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 15, 2024 | 8:33 AM

Share

‘ಬಿಗ್ ಬಾಸ್ ಹಿಂದಿ ಸೀಸನ್ 18’ ಇತ್ತೀಚೆಗೆ ಆರಂಭ ಆಯಿತು. ಈ ಸೀಸನ್​ಗೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಮಹೇಶ್ ಬಾಬು ಅವರ ಅತ್ತಿಗೆ ಶಿಲ್ಪಾ ಶಿರೋಡ್ಕರ್ ಅವರು ದೊಡ್ಮನೆಗೆ ಬಂದಿದ್ದಾರೆ. ಅದೇ ರೀತಿ ಅನಿರುದ್ಧ್ ಆಚಾರ್ಯ ಕೂಡ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್​ನ ಮನೆಗೆ ಕತ್ತೆ ಕೂಡ ಅತಿಥಿ ಆಗಿ ಬಂದಿತ್ತು. ಈಗ ಈ ಶೋನಿಂದ ಕತ್ತೆಯನ್ನು ಹೊರಕ್ಕೆ ತರಲಾಗಿದೆ.

ಕತ್ತೆಯನ್ನು ಬಿಗ್ ಬಾಸ್​ಗೆ ಏಕೆ ತರಲಾಗಿತ್ತು? ಇದೊಂದು ಪ್ರಯೋಗವೇ ಎನ್ನುವ ಪ್ರಶ್ನೆಯೂ ಮೂಡಿತ್ತು. ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಅನೇಕರು ಈ ವಿಚಾರವಾಗಿ ಧ್ವನಿ ಎತ್ತಿದ್ದರು. ಹೀಗಾಗಿ, ಮ್ಯಾಕ್ಸ್ ಹೆಸರಿನ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಇದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ.

ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಈ ಬಾರಿ ಬಿಗ್ ಬಾಸ್​ನಿಂದ ಹೊರಕ್ಕೆ ಹೋದ ಸ್ಪರ್ಧಿ ಕತ್ತೆಯೇ ಆಗಿದೆ ಅನ್ನೋದು ವಿಶೇಷ.

ಇತ್ತೀಚೆಗೆ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಲಾಯಿತು. ‘ಧನ್ಯವಾದಗಳು ಮೇನಕಾ ಸಂಜಯ್ ಗಾಂಧಿ ಅವರೇ. ಪ್ರಾಣಿಗಳ ಪರವಾಗಿ ಇರುವ ಪಿಎಫ್​ಎನ ಮುಖ್ಯಸ್ಥರಾಗಿ ನೀವು ಕತ್ತೆಯನ್ನು ಹೊರತರುವಲ್ಲಿ ಹೋರಾಡಿದ್ದೀರಿ’ ಎಂದು ಬರೆದುಕೊಳ್ಳಲಾಗಿದೆ.

ಈ ಮೊದಲು ವಾಹಿನಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ‘ಕತ್ತೆಯೂ ಒಂದು ಪ್ರಾಣಿ. ಅದು ಮನರಂಜನೆಗೆ  ಬಳಕೆ ಆಗಬಾರದು. ಅವುಗಳು ಶಬ್ದವನ್ನು ಕಂಡರೆ ಭಯಪಡುತ್ತವೆ. ಹೀಗಾಗಿ, ಇದು ಸರಿ ಅಲ್ಲ. ಸಲ್ಮಾನ್ ಖಾನ್ ಅವರೇ ನಿಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತನ್ನಿ’ ಎಂದು ಆಗ್ರಹಿಸಲಾಗಿತ್ತು.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು

ಸಲ್ಮಾನ್ ಖಾನ್ ಅವರ ವಿಚಾರಕ್ಕೆ ಬರೋದಾದರೆ ಅವರ ಆಪ್ತರು ಎನಿಸಿಕೊಂಡಿರುವ ಬಾಬಾ ಸಿದ್ಧಿಕಿ ಅವರನ್ನು ಇತ್ತೀಚೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಶಾಕಿಂಗ್ ಎನಿಸಿದೆ. ಈ ಘಟನೆಯಿಂದ ಹೊರಕ್ಕೆ ಬರೋಕೆ ಅವರಿಗೆ ಸಾಕಷ್ಟು ಸಮಯ ಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್