ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Parineeti Chopra) ಹಾಗೂ ರಾಘವ್ ಚಡ್ಡಾ ಭಾನುವಾರ (ಸೆಪ್ಟೆಂಬರ್ 24) ಉದಯಪುರದಲ್ಲಿ ಮದುವೆ ಆಗಲಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 22) ಈ ಜೋಡಿ ಉದಯಪುರ ತಲುಪಿದೆ. ಮದುವೆ ನಡೆಯುವ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಭರ್ಜರಿ ಸೆಕ್ಯುರಿಟಿ ನಿಯೋಜನೆ ಮಾಡಲಾಗಿದೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆಯಲಿದೆ. ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಮದುವೆಗೆ ಹಾಜರಿ ಹಾಕುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ಮದುವೆ ನಡೆಯುವ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಮದುವೆ ನಡೆಯುವ ಸ್ಥಳ ಇರುವುದು ಸರೋವರದ ಮಧ್ಯೆ. ಹೀಗಾಗಿ, ಸರೋವರದಲ್ಲಿ ಬೋಟ್ ಮೂಲಕ ಭದ್ರತೆ ನೀಡಲು ನಿರ್ಧರಿಸಲಾಗಿದೆ. ಮದುವೆ ನಡೆಯುವ ಸ್ಥಳಕ್ಕೆ ಅತಿಥಿಗಳು ಬೋಟ್ ಮೂಲಕವೇ ಹೋಗಲಿದ್ದಾರೆ.
ಮದುವೆ ತುಂಬಾನೇ ಖಾಸಗಿಯಾಗಿ ನಡೆಯಲಿದೆ. ಈ ಕಾರಣದಿಂದ ವಿಶೇಷ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ. ಹೋಟೆಲ್ ಒಳಗೆ ಇರುವ ಸಿಬ್ಬಂದಿ ಮದುವೆ ಮುಗಿಯುವವರೆಗೆ ಅಲ್ಲಿಯೇ ಇರಬೇಕು. ಅವರು ಮೊಬೈಲ್ ಬಳಕೆ ಮಾಡುವಂತಿಲ್ಲ. ಹೊರಗಿನಿಂದ ಯಾರೇ ಹೊಸಬರು ಬಂದರೂ ಹೋಟೆಲ್ ಒಳಗೆ ಬಿಟ್ಟುಕೊಳ್ಳಬಾರದು ಎನ್ನುವ ಕಂಡಿಷನ್ ಹಾಕಲಾಗಿದೆ. ಮೂರು ದಿನಗಳ ಕಾಲ ಹೋಟೆಲ್ ಬುಕ್ ಆಗಿದೆ.
ಇನ್ನು, ಮೊಬೈಲ್ ಹಾಗೂ ಕ್ಯಾಮೆರಾ ಬಳಕೆ ಸಂಪೂರ್ಣವಾಗಿ ನಿಷೇಧಗೊಂಡಿದೆ. ಇಂದಿನಿಂದ (ಸೆಪ್ಟೆಂಬರ್ 23) ಮದುವೆ ಕಾರ್ಯ ನಡೆಯಲಿದೆ. ಮೆಹೆಂದಿ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಇನ್ನು ಪರಿಣೀತಿ ಅವರ ದೆಹಲಿ ಮನೆಯಲ್ಲೂ ಭರ್ಜರಿ ರಿಸೆಪ್ಷನ್ ಆಯೋಜನೆಗೊಂಡಿದೆ.
ಇದನ್ನೂ ಓದಿ: ತಂಗಿ ಮದುವೆಗೆ ದೂರದಿಂದಲೇ ವಿಶ್ ಮಾಡಿ ಸುಮ್ಮನಾದ ಪ್ರಿಯಾಂಕಾ ಚೋಪ್ರಾ
ಇನ್ನು, ಮದುವೆಗೆ ಪ್ರಿಯಾಂಕಾ ಚೋಪ್ರಾ ಅವರು ಹಾಜರಿ ಹಾಕುತ್ತಿಲ್ಲ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಪರಿಣೀತಿ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಪರಿಣೀತಿ ಹಾಗೂ ರಾಘವ್ ಚಡ್ಡಾ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಹಲವು ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ