ಟಿಆರ್ಪಿ ರೇಸ್ನಲ್ಲಿ ‘ಗಟ್ಟಿಮೇಳ-ಸೀತಾರಾಮ’ ಮಧ್ಯೆ ಭರ್ಜರಿ ಪೈಪೋಟಿ; ಇಲ್ಲಿದೆ ವಿವರ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹಲವು ಧಾರಾವಾಹಿಗಳ ಟಿಆರ್ಪಿಯಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಯಾವ ಧಾರಾವಾಹಿಯ ಟಿಆರ್ಪಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಸೀರಿಯಲ್ ಟಿಆರ್ಪಿ ಲಿಸ್ಟ್ ಹೊರಬಿದ್ದಿದೆ. ಎಲ್ಲಾ ಧಾರಾವಾಹಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ಉಮಾಶ್ರೀ ಮೊದಲಾದವರು ಮುಖ್ಯಭೂಮಿಕೆಯಲ್ಲಿರುವ ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹಲವು ಧಾರಾವಾಹಿಗಳ ಟಿಆರ್ಪಿಯಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಯಾವ ಧಾರಾವಾಹಿಯ ಟಿಆರ್ಪಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
‘ಪುಟ್ಟಕ್ಕನ ಮಕ್ಕಳು’
‘ಪುಟ್ಟಕ್ಕನ ಮಕ್ಕಳು’ ಕಳೆದ ಕೆಲವು ತಿಂಗಳಿಂದ ಮೊದಲ ಸ್ಥಾನದಲ್ಲಿದೆ. ಕನ್ನಡದ ಎಲ್ಲಾ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳದ್ದೇ ಮೇಲುಗೈ. ಈ ಧಾರಾವಾಹಿ ನಗರ ಭಾಗದಲ್ಲೂ ಮೊದಲ ಸ್ಥಾನದಲ್ಲಿದೆ ಅನ್ನೋದು ವಿಶೇಷ. ಹಳ್ಳಿ ಕಥೆಯನ್ನು ಜನರು ಇಷ್ಟಪಡುತ್ತಿದ್ದಾರೆ.
ಸೀತಾ ರಾಮ
‘ಸೀತಾ ರಾಮ’ ಧಾರಾವಾಹಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗುತ್ತಿದೆ. ಈ ಧಾರಾವಾಹಿ 50 ಎಪಿಸೋಡ್ಗಳನ್ನು ಪೂರೈಸಿದೆ. ಈ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದೆ. ನಗರ ವಿಭಾಗದಲ್ಲಿ ಈ ಧಾರಾವಾಹಿ ಎರಡನೇ ಸ್ಥಾನ ಕಾಪಾಡಿಕೊಂಡಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಗಟ್ಟಿಮೇಳ
‘ಗಟ್ಟಿಮೇಳ’ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಟಿಆರ್ಪಿ ಪರಿಗಣಿಸಿದರೆ ‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿ ಸಮನಾಗಿದೆ. ಆದರೆ, ನಗರ ವಿಭಾಗದಲ್ಲಿ ಸೀತಾ ರಾಮ ಧಾರಾವಾಹಿ ಮೇಲುಗೈ ಸಾಧಿಸಿದೆ.
ಅಮೃತಧಾರೆ
‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಮದುವೆ ಎಪಿಸೋಡ್ ಹೈಲೈಟ್ ಆಗಿದೆ. ಈ ಕಾರಣದಿಂದ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್ಪಿ
ಸತ್ಯ-ಶ್ರೀರಸ್ತು ಶುಭಮಸ್ತು
‘ಸತ್ಯ’ ಹಾಗೂ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಐದು ಹಾಗೂ ಆರನೇ ಸ್ಥಾನದಲ್ಲಿದೆ. ಈ ಧಾರಾವಾಹಿಗಳಿಗೆ ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಉಳಿದ ಧಾರಾವಾಹಿಗಳೊಂದಿಗೆ ಇವು ಫೈಟ್ ನೀಡುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ