‘4 ವರ್ಷಗಳ ಹಿಂದೆ ಹೇಳಿದ್ದರೆ ಬದಲಾವಣೆ ಆಗುತ್ತಿತ್ತು’; ಪಿಎಂ ಮೋದಿ ಸೂಚನೆಗೆ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ

| Updated By: ರಾಜೇಶ್ ದುಗ್ಗುಮನೆ

Updated on: Jan 20, 2023 | 1:04 PM

ಪಿಎಂ ಮೋದಿ ಹೇಳಿಕೆಗೆ ಸಂಬಂಧಿಸಿ ಅನುರಾಗ್ ಕಶ್ಯಪ್ ಅವರು ಮಾತನಾಡಿದ್ದಾರೆ. ಈ ಸೂಚನೆಯನ್ನು ನರೇಂದ್ರ ಮೋದಿ ಅವರು ನಾಲ್ಕು ವರ್ಷಗಳ ಹಿಂದೆ ನೀಡಬೇಕಿತ್ತು ಎಂದು ಹೇಳಿದ್ದಾರೆ.  

‘4 ವರ್ಷಗಳ ಹಿಂದೆ ಹೇಳಿದ್ದರೆ ಬದಲಾವಣೆ ಆಗುತ್ತಿತ್ತು’; ಪಿಎಂ ಮೋದಿ ಸೂಚನೆಗೆ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ
ಅನುರಾಗ್ ಕಶ್ಯಪ್​-ಪಿಎಂ ಮೋದಿ
Follow us on

ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap) ಅವರು ಸಿನಿಮಾ ಜತೆಗೆ ಸಮಾಜದ ಆಗುಹೋಗುಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಅನೇಕ ಬಾರಿ ಅವರು ಸರ್ಕಾರವನ್ನು ಟೀಕಿಸಿ ಸುದ್ದಿ ಆಗಿದ್ದಿದೆ. ಈಗ ಅವರು ಮತ್ತೆ ಚರ್ಚೆ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಸೂಚನೆ ವಿಚಾರವನ್ನು ಅನುರಾಗ್ ಕಶ್ಯಪ್ ಟೀಕಿಸಿದ್ದಾರೆ. ಅನುರಾಗ್ ಕಶ್ಯಪ್ ನೀಡಿದ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದ ಮೋದಿ ಅವರು ಕಾರ್ಯಕರ್ತರಿಗೆ ಸೂಚನೆ ಒಂದನ್ನು ನೀಡಿದ್ದರು ಎಂದು ವರದಿ ಆಗಿತ್ತು. ‘ಸಂಬಂಧ ಇಲ್ಲದ ಅದರಲ್ಲೂ ಮುಖ್ಯವಾಗಿ ಸಿನಿಮಾಗೆ ಸಂಬಂಧಿಸಿ ಹೇಳಿಕೆ ನೀಡಬೇಡಿ. ಇದರಿಂದ ಅಭಿವೃದ್ಧಿ ಅಜೆಂಡಾ ಹಿಂದೆ ಸರಿಯುತ್ತದೆ’ ಎಂದು ಕಾರ್ಯಕರ್ತರಿಗೆ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಅನುರಾಗ್ ಕಶ್ಯಪ್ ಅವರು ಮಾತನಾಡಿದ್ದಾರೆ. ಈ ಸೂಚನೆಯನ್ನು ನರೇಂದ್ರ ಮೋದಿ ಅವರು ನಾಲ್ಕು ವರ್ಷಗಳ ಹಿಂದೆ ನೀಡಬೇಕಿತ್ತು ಎಂದು ಹೇಳಿದ್ದಾರೆ.

‘ನಾಲ್ಕು ವರ್ಷಗಳ ಹಿಂದೆ ಅವರು ಇದನ್ನು ಹೇಳಿದ್ದರೆ, ಅದರಿಂದ ವ್ಯತ್ಯಾಸ ಉಂಟಾಗುತ್ತಿತ್ತು. ಈಗ, ಅವರ ಹೇಳಿಕೆಯಿಂದ ಬದಲಾವಣೆ ಆಗುತ್ತದೆ ಎಂದು ನನಗೆ ಅನ್ನಿಸುವುದಿಲ್ಲ.  ಈಗ ಎಲ್ಲವೂ ಕೈ ಮೀರಿ ಹೋಗಿವೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ’ ಎಂದು ಅನುರಾಗ್​ ಕಶ್ಯಪ್​ ಅವರು ಹೇಳಿದ್ದಾರೆ. ‘ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಾಬತ್’ ಚಿತ್ರದ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.  ಈ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ಇದನ್ನು ಒಪ್ಪಿಲ್ಲ.

ಇದನ್ನೂ ಓದಿ: ಕಾಂತಾರ& ಚಿತ್ರದ ಯಶಸ್ಸಿನ ಬಳಿಕ ಆ ಒಂದು ತಪ್ಪು ಮಾಡಬೇಡಿ; ರಿಷಬ್​ ಶೆಟ್ಟಿಗೆ ಸಲಹೆ ನೀಡಿದ ಅನುರಾಗ್ ಕಶ್ಯಪ್

ಬಿಜೆಪಿಯ ಅನೇಕ ನಾಯಕರು ‘ಪಠಾಣ್​’ ಸಿನಿಮಾ ಬಗ್ಗೆ ಹೇಳಿಕೆ ನೀಡುತ್ತಲೇ ಇದ್ದಾರೆ. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಈ ವಿಚಾರದಲ್ಲಿ ಅನೇಕ ಬಿಜೆಪಿ ನಾಯಕರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ