‘ಅವರು ನನ್ನ ಬಗ್ಗೆಯೂ ಮಾತನಾಡಿದ್ದಾರೆ’; ಪ್ರಣಿತ್ ಬಗ್ಗೆ ಕಂಪ್ಲೇಟ್ ಮಾಡಿದ ವರುಣ್ ಧವನ್
ವೀಕೆಂಡ್ ಕಾ ವಾರ್ ಸಂಚಿಕೆ ವೇಳೆ ಪ್ರಣಿತ್ ಮೋರೆ ಅವರು ಬಿಗ್ ಬಾಸ್ ವೇದಿಕೆ ಏರಿದರು. ಸಲ್ಲು ಜೊತೆ ನಿಂತು ಮಾತನಾಡಿದರು. ಈ ರೀತಿ ಮಾತನಾಡುವಾಗ ಪ್ರಣಿತ್ ಮೋರೆಯನ್ನು ನೋಡಿ ಅವರು ತಮ್ಮ ಬಗ್ಗೆ ಮಾಡಿದ ಕಾಮಿಡಿಯನ್ನು ವರುಣ್ ಧವನ್ ನೆನಪಿಸಿಕೊಂಡರು ಮತ್ತು ನೇರವಾಗಿ ಹೇಳಿದರು. ಇವರು ನನ್ನ ಬಗ್ಗೆಯೂ ಕಾಮಿಡಿ ಮಾಡಿದ್ದಾರೆ ಎಂದರು.

ಪ್ರಣಿತ್ ಮೋರೆ ಅವರು ಸ್ಟ್ಯಾಂಡಪ್ ಕಾಮಿಡಿಯನ್. ಅವರು ಈ ಮೊದಲು ಸಲ್ಮಾನ್ ಖಾನ್ ಬಗ್ಗೆ ಟ್ರೋಲ್ ಮಾಡಿದ್ದರು. ಬಿಗ್ ಬಾಸ್ ಶೋ ಬಗ್ಗೆಯೂ ಟೀಕೆ ಮಾಡಿದ್ದರು. ಈ ವಿಚಾರವು ಸಲ್ಮಾನ್ ಖಾನ್ ಕಿವಿಗೂ ಬಿದ್ದಿತ್ತು. ಹೀಗಾಗಿ, ಸಲ್ಲು ಅವರು ಪ್ರಣಿತ್ ಬಿಗ್ ಬಾಸ್ಗೆ ಬಂದಾಗ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಬಿಗ್ ಬಾಸ್ ವೇದಿಕೆ ಏರಿದ ವರುಣ್ ಧವನ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಸಲ್ಲು ಬಳಿ ಕಂಪ್ಲೇಟ್ ಹೇಳಿದ್ದಾರೆ.
ವೀಕೆಂಡ್ ಕಾ ವಾರ್ ಸಂಚಿಕೆ ವೇಳೆ ಪ್ರಣಿತ್ ಮೋರೆ ಅವರು ಬಿಗ್ ಬಾಸ್ ವೇದಿಕೆ ಏರಿದರು. ಸಲ್ಲು ಜೊತೆ ನಿಂತು ಮಾತನಾಡಿದರು. ಈ ರೀತಿ ಮಾತನಾಡುವಾಗ ಪ್ರಣಿತ್ ಮೋರೆಯನ್ನು ನೋಡಿ ಅವರು ತಮ್ಮ ಬಗ್ಗೆ ಮಾಡಿದ ಕಾಮಿಡಿಯನ್ನು ವರುಣ್ ಧವನ್ ನೆನಪಿಸಿಕೊಂಡರು ಮತ್ತು ನೇರವಾಗಿ ಹೇಳಿದರು. ಇವರು ನನ್ನ ಬಗ್ಗೆಯೂ ಕಾಮಿಡಿ ಮಾಡಿದ್ದಾರೆ ಎಂದರು. ‘ಬಾಲಿವುಡ್ನ ಸಂಪೂರ್ಣ ಜೋಕ್ಸ್ ಮರೆತಿದ್ದೇನೆ’ ಎಂದು ಪ್ರಣಿತ್ ಹೇಳಿದ್ದಾರೆ.
ಪ್ರಣಿತ್ ಹೇಳಿದ್ದೇನು?
‘ವರುಣ್ ಧವನ್ ಅವರು ಪತ್ನಿ ಜನ್ಮದಿನಕ್ಕೆ ಪೋಸ್ಟ್ ಹಾಕಿದ್ದರು. ಈ ವೇಳೆ ಪತ್ನಿಗೆ ಕೇರ್ ಟೇಕರ್ ಎಂದು ಬರೆದಿದ್ದಾರೆ. ಹನಿ, ಸ್ವೀಟಾರ್ಟ್ ಏನಾದರು ಬರೆಯಬಹುದಿತ್ತು. ಪತ್ನಿ ಅವರಿಗೆ ನರ್ಸ್ ರೀತಿ ಕಾಣಿಸುತ್ತಾರೆ’ ಎಂದು ಪ್ರಣಿತ್ ಹೇಳಿದ್ದರು. ಈ ವಿಚಾರವನ್ನೇ ಇಟ್ಟುಕೊಂಡು ವರುಣ್ ಧವನ್ ಅವರು ಪ್ರಣಿತ್ನ ನೆನಪಿಸಿಕೊಂಡಿದ್ದಾರೆ.
ಪ್ರಣಿತ್ ಮೋರೆ
View this post on Instagram
ಸಲ್ಲು ನೇರ ಮಾತು
ತಮ್ಮ ಬಗ್ಗೆ ಬಂದ ಆರೋಪದ ಬಗ್ಗೆ ಸಲ್ಮಾನ್ ಖಾನ್ ಅವರು ಈ ಮೊದಲು ನೇರವಾಗಿ ಉತ್ತರ ನೀಡಿದ್ದರು. ‘ನನ್ನ ಹೆಸರು ಹೇಳಿಕೊಂಡು ಯಾರದ್ದಾದರೂ ಜೀವನ ನಡೆಯುತ್ತಿದೆ ಎಂದರೆ ಅದು ನನಗೆ ಖುಷಿ’ ಎಂದು ಹೇಳಿದ್ದರು. ಅವರು ಈ ನೋವನ್ನು ನುಂಗಿಕೊಂಡಿದ್ದಾರೆ ಎಂದು ಅನೇಕರು ಹೇಳಿದ್ದರು. ಈಗ ಸಲ್ಲು ಇದನ್ನು ಫನ್ ಆಗಿಯೇ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ನನ್ನ ಗೇಲಿ ಮಾಡುವುದರಿಂದ ನಿಮಗೆ ಊಟ ಸಿಗುತ್ತಿದೆ ಎಂದರೆ ಖುಷಿ ಪಡ್ತೀನಿ’; ಸಲ್ಮಾನ್ ಖಾನ್
ಪ್ರಣಿತ್ ಮೋರೆ ಬಗ್ಗೆ
ಪ್ರಣಿತ್ ಮೋರೆ ಅವರು ಬಿಗ್ ಬಾಸ್ಗೆ ಬರೋದಕ್ಕೂ ಮೊದಲು ಸಾಕಷ್ಟು ಕಡೆಗಳಲ್ಲಿ ಹಾಸ್ಯ ಶೋಗಳನ್ನು ಮಾಡುತ್ತಾ ಬರುತ್ತಿದ್ದರು. ಈ ವೇಳೆ ಸಲ್ಮಾನ್ ಖಾನ್ ಹಾಗೂ ಬಾಲಿವುಡ್ ವಿಚಾರಗಳನ್ನು ಅವರು ಇಟ್ಟುಕೊಂಡು ಟೀಕೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







