ಪ್ರೀತಿ ಜಿಂಟಾ (Preity Zinta) ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅವರು ಪತಿಯ ಜೊತೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಐಪಿಎಲ್ ಕಾರಣಕ್ಕೆ ಆಗಾಗ ಭಾರತಕ್ಕೆ ಬರುತ್ತಾರೆ. ಸದ್ಯ ಐಪಿಎಲ್ ನಡೆಯುತ್ತಿದ್ದು, ಇದಕ್ಕಾಗಿ ಅವರು ಭಾರತದಲ್ಲೇ ಇದ್ದಾರೆ. ವಿಶೇಷ ಎಂದರೆ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಈ ಮೂಲಕ ಆರು ವರ್ಷಗಳ ಬಳಿಕ ಅವರು ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ. ಅಷ್ಟಕ್ಕೂ ಅವರು ನಟಿಸುತ್ತಿರೋ ಸಿನಿಮಾ ಯಾವುದು? ನಿರ್ಮಾಪಕರು ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಲಾಹೋರ್ 1947’ ಸಿನಿಮಾದಲ್ಲಿ ಪ್ರೀತಿ ಜಿಂಟಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಜ್ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ‘ಗದರ್ 2’ ಮೂಲಕ ದೊಡ್ಡ ಮಟ್ಟದ ಹಿಟ್ ಕಂಡ ಸನ್ನಿ ಡಿಯೋಲ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಚಿತ್ರದ ಸೆಟ್ನ ಫೋಟೋಗಳನ್ನು ಪ್ರೀತಿ ಹಂಚಿಕೊಂಡಿದ್ದಾರೆ. ಈಚಿತ್ರವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಪ್ರೀತಿ ಜಿಂಟಾ ಹಾಗೂ ಸನ್ನಿ ಡಿಯೋಲ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಮೊದಲು ‘ಹೀರೋ: ಲವ್ ಸ್ಟೋರಿ ಆಫ್ ಸ್ಪೈ, ‘ಫರ್ಜ್’, ‘ಭಯ್ಯಾಜಿ ಸೂಪರ್ಹಿಟ್’ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ‘ಭಯ್ಯಾಜಿ ಸೂಪರ್ಹಿಟ್’ 2018ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಪ್ರೀತಿ ನಟನೆಗೆ ಕಂಬ್ಯಾಕ್ ಮಾಡಿರಲಿಲ್ಲ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಸನ್ನಿ ಡಿಯೋಲ್ಗೆ ಮರು ಹುಟ್ಟು ನೀಡಿದ್ದು ‘ಗದರ್ 2’ ಸಿನಿಮಾ. ಈ ಚಿತ್ರದಿಂದ ಅವರ ಬದುಕು ಬದಲಾಗಿದೆ. ಈ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಆಮಿರ್ ಹಾಗೂ ಸನ್ನಿ ಭೇಟಿ ಆಗಿದ್ದರು. ಆ ಬಳಿಕ ಹೊಸ ಸಿನಿಮಾ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ ಇಬ್ಬರೂ ಸಿನಿಮಾ ಮಾಡಲು ಮುಂದೆ ಬಂದರು. ಆಗ ಸೆಟ್ಟೇರಿದ್ದು ‘ಲಾಹೋರ್ 1947’ ಚಿತ್ರ.
ಇದನ್ನೂ ಓದಿ: ಗದರ್ 2: ಮತ್ತೆ ಲಾಹೋರ್ಗೆ ನುಗ್ಗಿದ ತಾರಾ ಸಿಂಗ್, ಈ ಬಾರಿ ಏನು ಕಿತ್ತೊಗೆಯುತ್ತಾನೆ?
‘ಲಾಹೋರ್ 1947’ ಸಿನಿಮಾ ಸ್ವಾಂತತ್ರ್ಯದ ಕಥೆ ಹೊಂದಿದೆ ಎನ್ನಲಾಗಿದೆ. ಹಿರಿಯ ನಟಿ ಶಬಾನಾ ಆಜ್ಮಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಎಆರ್ ರೆಹಮಾನ್ ಹಾಗೂ ಜಾವೇದ್ ಅಖ್ತರ್ ಕೂಡ ಸಿನಿಮಾದ ಭಾಗವಾಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.