AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಜಿಂಟಾಗೆ ಚಿತ್ರರಂಗದ ಬಗ್ಗೆ ವೈರಾಗ್ಯ ಬಂದಿದ್ದೇಕೆ? ಇಲ್ಲಿದೆ ಉತ್ತರ

ಪ್ರೀತಿ ಜಿಂಟಾ ಅವರು ತಮ್ಮ 50ನೇ ಹುಟ್ಟುಹಬ್ಬದಂದು ಚಿತ್ರರಂಗದಿಂದ ದೀರ್ಘಕಾಲದ ವಿರಾಮದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ವೈಯಕ್ತಿಕ ಜೀವನ ಮತ್ತು ಉದ್ಯಮದ ಮೇಲೆ ಕೇಂದ್ರೀಕರಿಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಕ್ಕಳನ್ನು ಹೊಂದುವ ಬಯಕೆ ಮತ್ತು ಮಹಿಳೆಯರಿಗೆ ಎದುರಾಗುವ ಅಸಮಾನತೆಯನ್ನು ಅವರು ಉಲ್ಲೇಖಿಸಿದ್ದಾರೆ.

ಪ್ರೀತಿ ಜಿಂಟಾಗೆ ಚಿತ್ರರಂಗದ ಬಗ್ಗೆ ವೈರಾಗ್ಯ ಬಂದಿದ್ದೇಕೆ? ಇಲ್ಲಿದೆ ಉತ್ತರ
ಪ್ರೀತಿ ಜಿಂಟಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 31, 2025 | 7:59 AM

Share

ನಟಿ ಪ್ರೀತಿ ಜಿಂಟಾ ಅವರಿಗೆ ಇಂದು (ಜನವರಿ 31) ಜನ್ಮದಿನ. ಅವರಿಗೆ ಈಗ 50 ವರ್ಷ. ಈ ವಯಸ್ಸಿನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಅವರು ಸದ್ಯ ‘ಲಾಹೋರ್ 1947’ ಚಿತ್ರದ ಶೂಟ್ ಮಾಡುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಹಲವು ವರ್ಷಗಳ ಬಳಿಕ ಮರಳಿದ್ದಾರೆ. ಅವರು ತಾವು ಇಷ್ಟು ದೀರ್ಘ ಗ್ಯಾಪ್ ತೆಗೆದುಕೊಂಡಿದ್ದು ಏಕೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.

‘ನನಗೆ ಸಿನಿಮಾ ಮಾಡಬೇಕು ಎಂದಿಲ್ಲ. ನಾನು ನನ್ನ ಉದ್ಯಮ, ನನ್ನ ವೈಯಕ್ತಿಕ ಜೀವನದ ಬಗ್ಗೆ ಫೋಕಸ್ ಮಾಡಬೇಕಿತ್ತು. ಮಹಿಳೆಯರನ್ನು ಜನರು ಮರೆಯುತ್ತಾರೆ. ಕಲಾವಿದರಾಗಿ ನಿಮಗೆ ಕಲೆ ಮುಖ್ಯ. ನಾನು ಇಂಡಸ್ಟ್ರಿಯಲ್ಲಿ ಯಾರೊಂದಿಗೂ ಡೇಟ್ ಮಾಡಿಲ್ಲ. ನಾನು ಎಂದಿಗೂ ನಟನೊಂದಿಗೆ ಸುತ್ತಾಡಿಲ್ಲ’ ಎಂದಿದ್ದಾರೆ ಅವರು.

‘ತಾರ್ಕಿಕ ವಿಷಯವೆಂದರೆ ನಾನು ನನ್ನ ಸ್ವಂತ ಕುಟುಂಬವನ್ನು ಹೊಂದಬೇಕಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ನಾನು ಬ್ಯುಸಿ ಇದ್ದೆ. ಹಾಗಂದ ಮಾತ್ರಕ್ಕೆ ನಿಮ್ಮ ಜೀವನವನ್ನು ನೀವು ಮರೆಯಬಾರದು. ಹಾಗಾಗಿ ನಾನು ಮಕ್ಕಳನ್ನು ಹೊಂದಲು ಬಯಸಿದ್ದೆ. ಉದ್ಯಮ ಕೂಡ ಎಗ್ಸೈಟಿಂಗ್ ಆಗಿತ್ತು. ನಾನು ನನ್ನ ವೈಯಕ್ತಿಕ ಜೀವನದ ಮೇಲೆ ಗಮನ ಹರಿಸಲು ಬಯಸುತ್ತೇನೆ. ನಾನು ಏಕಾಂಗಿ ಆಗಿ ಇರಲು ಬಯಸುವುದಿಲ್ಲ’ ಎಂದು ಪ್ರೀತಿ ಹೇಳಿದ್ದರು.

‘ಕೆಲಸ ಮಾಡುವ ಪ್ರತಿ ಮಹಿಳೆಗೆ ಸಮಾನತೆ ಬೇಕು, ಪುರುಷರಂತೆ ಕಷ್ಟಪಟ್ಟು ದುಡಿಯಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಜಗತ್ತು, ಅವರು ಸಮಾನತೆಯನ್ನು ನೀಡುವುದಿಲ್ಲ. ನೀವು ಜೈವಿಕ ಗಡಿಯಾರವನ್ನು ಹೊಂದಿದ್ದೀರಿ. ಪ್ರಕೃತಿಯು ನಿಮಗೆ ಸಮಾನವಾಗಿಲ್ಲ. ಆದ್ದರಿಂದ ನೀವು ಮಾಡುತ್ತಿರುವುದನ್ನು ಬಿಟ್ಟು ಬೇರೆಯದರತ್ತ ಗಮನಹರಿಸಬೇಕು’ ಎಂದಿದ್ದರು. ಮಹಿಳೆಯರಿಗೆ ಬೇಗ ವಯಸ್ಸಾಗುತ್ತದೆ. ಇದರಿಂದ ಅವರು ಸಿನಿಮಾ ಅವಕಾಶ ಕಳೆದುಕೊಳ್ಳುತ್ತಾರೆ ಎಂಬುದು ಇದರ ಅರ್ಥ ಇರಬಹುದು.

ಇದನ್ನೂ ಓದಿ: ‘ನಮ್ಮ ಸಂಸಾರ ಹಾಳಾಗಲು ಪ್ರೀತಿ ಜಿಂಟಾ ಕಾರಣ’; ನೇರವಾಗಿ ಆರೋಪ ಮಾಡಿದ ನಟಿ

‘ಲಾಹೋರ್ 1947’ ಚಿತ್ರವನ್ನು ರಾಜ್​ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್​ಗೆ ಜೊತೆಯಾಗಿ ಪ್ರೀತಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ವಿಶೇಷ. ಈ ಚಿತ್ರ ಇನ್ನೂ ಥಿಯೇಟರ್​ನಲ್ಲಿ ರಿಲೀಸ್ ಆಗಿಲ್ಲ. ಇದಲ್ಲದೆ, ಪ್ರೀತಿ ಜಿಂಟಾ ಅವರು ‘ಪಂಜಾಬ್ ಕಿಂಗ್ಸ್’ ತಂಡವನ್ನು ಹೊಂದಿದ್ದಾರೆ. ಐಪಿಎಲ್​ನಲ್ಲಿ ಈ ತಂಡ ಕಣಕ್ಕೆ ಇಳಿಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ