‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು

ಪ್ರಭಾಸ್ ಅಭಿನಯದ 'ಸ್ಪಿರಿಟ್' ಸಿನಿಮಾದಿಂದ ನಟಿ ದೀಪಿಕಾ ಪಡುಕೋಣೆ ಹೊರಬಿದ್ದಿದ್ದಾರೆ. ಅಧಿಕ ಸಂಭಾವನೆ ಮತ್ತು ಶೇಕಡಾ 10 ಲಾಭದ ಪಾಲಿನ ಬೇಡಿಕೆಯೇ ಇದಕ್ಕೆ ಮುಖ್ಯ ಕಾರಣ. ನಿರ್ದೇಶಕ ಸಂದೀಪ್ ವಂಗಾ ಈಗ ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದು, ಹೊಸ ಜೋಡಿ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು
ಸಂದೀಪ್-ದೀಪಿಕಾ

Updated on: Aug 21, 2026 | 7:36 AM

ಮುಖ್ಯಾಂಶಗಳು

  • ಸ್ಪಿರಿಟ್‌ನಿಂದ ದೀಪಿಕಾ ಹೊರ ಹೋಗಲು ಅಸಲಿ ಕಾರಣ ರಿವೀಲ್
  • ಶೇಕಡಾ 10 ಲಾಭದ ಪಾಲು: ಸಂದೀಪ್ ವಂಗಾ ಗರಂ
  • ಪ್ರಭಾಸ್ ಜೊತೆ ತೃಪ್ತಿ ಡಿಮ್ರಿ: ವೈರಲ್ ಆಯ್ತು ಹೊಸ ಲುಕ್

ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ನಾಯಕಿ ಆಯ್ಕೆ ವಿಚಾರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪ್ರಭಾಸ್ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಬೇಕಿತ್ತು. ಆದರೆ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ. ಇದಕ್ಕೆ ಸಾಕಷ್ಟು ಕಾರಣಗಳು ಹರಿದಾಡಿದ್ದವು. ಆದರೆ, ಈ ಮಹತ್ವದ ನಿರ್ಧಾರದ ಹಿಂದಿನ ನಿಜವಾದ ಕಾರಣವನ್ನು ನಿರ್ಮಾಪಕರು ಈಗ ಬಹಿರಂಗಪಡಿಸಿದ್ದಾರೆ.

ದೀಪಿಕಾ ಔಟ್ ಆಗಿದ್ದೇಕೆ?

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹೋದರ ಪ್ರಣಯ್ ವಂಗಾ ಈ ಬಗ್ಗೆ ಮಾತನಾಡಿದ್ದಾರೆ. ಅವರು ದೀಪಿಕಾ ಜೊತೆ ಸುಮಾರು ಒಂದೂವರೆ ವರ್ಷ ಚರ್ಚೆ ನಡೆಸಿದ್ದರು. ಆದರೆ ದೀಪಿಕಾ ನೀಡಿದ ಕೆಲವೇ ಕೆಲವು ಕಠಿಣ ಷರತ್ತುಗಳಿಂದಾಗಿ ಮಾತುಕತೆ ಮುರಿದುಬಿದ್ದಿದೆ. ‘ದೀಪಿಕಾ ಅಧಿಕ ಸಂಭಾವನೆ ಕೇಳಿದ್ದರು. ಜೊತೆಗೆ ಚಿತ್ರದ ಲಾಭದಲ್ಲಿ ಶೇಕಡಾ 10ರಷ್ಟು ಪಾಲು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಡೇಟ್ಸ್ ಸಮಸ್ಯೆ ಕೂಡ ಇತ್ತು’ ಎಂದು ಪ್ರಣಯ್ ಹೇಳಿದ್ದಾರೆ.

ನಿರ್ದೇಶಕರ ಕೋಪ ಮತ್ತು ಹೊಸ ನಾಯಕಿ

ಈ ಅನಗತ್ಯ ಬೇಡಿಕೆಗಳಿಂದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತೀವ್ರ ಅಸಮಾಧಾನಗೊಂಡರು. ತಕ್ಷಣವೇ ದೀಪಿಕಾ ಅವರನ್ನು ಯೋಜನೆಯಿಂದ ತೆಗೆದುಹಾಕಲು ನಿರ್ಧರಿಸಿದರು. ಈಗ ಅವರ ಜಾಗಕ್ಕೆ ತೃಪ್ತಿ ದಿಮ್ರಿ ಬಂದಿದ್ದಾರೆ. ಪ್ರಭಾಸ್ ಹಾಗೂ ತೃಪ್ತಿ ಡಿಮ್ರಿ ಅವರ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ. ಅಭಿಮಾನಿಗಳು ಈ ಹೊಸ ಜೋಡಿಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಸಂಸ್ಕೃತಿ ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು’; ದೀಪಿಕಾ ಪಡುಕೋಣೆಗೆ ಕೌಂಟರ್

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ನಿರ್ಮಾಪಕರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು ನಿರ್ಮಾಪಕರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು ಸಿನಿಮಾ ರಂಗದಲ್ಲಿ ಇಂತಹ ಬೇಡಿಕೆಗಳು ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ದೀಪಿಕಾ ಪಡುಕೋಣೆ ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ‘ಕಲ್ಕಿ 2898 ಸೀಕ್ವೆಲ್

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us