‘ರಾಮಾಯಣ’ದ ನಡುವೆಯೂ ಮಿಂಚುತ್ತಿದೆ ಸಣ್ಣ ಬಜೆಟ್ ಸಿನಿಮಾ ‘ಪೈರ್’

ಸಣ್ಣ ಬಜೆಟ್ ಸಿನಿಮಾ ‘ಹನುಮಾನ್ ಅಂಶ್’, ‘ಟಾಕ್ಸಿಕ್’ ಸೇರಿದಂತೆ ಇನ್ನೂ ಕೆಲ ದೊಡ್ಡ ಸಿನಿಮಾಗಳ ಮುಂದೆ ಸೆಣಸಾಡಿ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಯ ಗಳಿಕೆ ಮಾಡಿ ಇತಿಹಾಸ ಸೇರಿದೆ. ಇದೀಗ ಮತ್ತೆ ಅಂಥಹದ್ದೇ ಒಂದು ಸಣ್ಣ ಬಜೆಟ್ ಸಿನಿಮಾ ‘ರಾಮಾಯಣ’ದಂಥಹಾ ದೊಡ್ಡ ಸಿನಿಮಾದ ಎದುರು ಮಿಂಚುತ್ತಿದೆ. ಅದುವೇ ‘ಪೈರ್’ (ಚಿತಾ). ಸಣ್ಣ ಬಜೆಟ್​​ನ ಯಾವ ದೊಡ್ಡ ಸ್ಟಾರ್ ನಟ-ನಟಿಯರೂ ಇಲ್ಲದ ಕೇವಲ ಕತೆಯನ್ನೇ ನೆಚ್ಚಿಕೊಂಡಿರುವ ಈ ಸಿನಿಮಾ ‘ರಾಮಾಯಣ’ದ ಎದುರು ತೊಡೆತಟ್ಟಿದೆ.

‘ರಾಮಾಯಣ’ದ ನಡುವೆಯೂ ಮಿಂಚುತ್ತಿದೆ ಸಣ್ಣ ಬಜೆಟ್ ಸಿನಿಮಾ ‘ಪೈರ್’
Ramayana Pyre

Updated on: Nov 13, 2026 | 6:13 PM

ಮುಖ್ಯಾಂಶಗಳು

  • ‘ರಾಮಾಯಣ’ದ ವಿರುದ್ಧ ತೊಡೆತಟ್ಟಿದ ಸಣ್ಣ ಸಿನಿಮಾ
  • ‘ರಾಮಾಯಣ’ದ ವಿರುದ್ಧ ತಲೆ ಎತ್ತಿದ ‘ಪೈರ್’ ಸಿನಿಮಾ
  • ‘ಪೈರ್’ ಸಿನಿಮಾದ ಕತೆ ಏನು?

ಸಣ್ಣ ಬಜೆಟ್ ಸಿನಿಮಾ ‘ಹನುಮಾನ್ ಅಂಶ್’, ‘ಟಾಕ್ಸಿಕ್’ ಸೇರಿದಂತೆ ಇನ್ನೂ ಕೆಲ ದೊಡ್ಡ ಸಿನಿಮಾಗಳ ಮುಂದೆ ಸೆಣಸಾಡಿ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಯ ಗಳಿಕೆ ಮಾಡಿ ಇತಿಹಾಸ ಸೇರಿದೆ. ಇದೀಗ ಮತ್ತೆ ಅಂಥಹದ್ದೇ ಒಂದು ಸಣ್ಣ ಬಜೆಟ್ ಸಿನಿಮಾ ‘ರಾಮಾಯಣ’ದಂಥಹಾ ದೊಡ್ಡ ಸಿನಿಮಾದ ಎದುರು ಮಿಂಚುತ್ತಿದೆ. ಅದುವೇ ‘ಪೈರ್’ (ಚಿತಾ). ಸಣ್ಣ ಬಜೆಟ್​​ನ ಯಾವ ದೊಡ್ಡ ಸ್ಟಾರ್ ನಟ-ನಟಿಯರೂ ಇಲ್ಲದ ಕೇವಲ ಕತೆಯನ್ನೇ ನೆಚ್ಚಿಕೊಂಡಿರುವ ಈ ಸಿನಿಮಾ ‘ರಾಮಾಯಣ’ದ ಎದುರು ತೊಡೆತಟ್ಟಿದೆ.

ಉತ್ತರಾಖಂಡದ ಅರಣ್ಯ ಪ್ರದೇಶದ ಸಣ್ಣ ಹಳ್ಳಿಯಲ್ಲಿ ವಾಸಿಸುವ ವೃದ್ಧ ದಂಪತಿಯ ಕತೆಯನ್ನು ‘ಪೈರ್’ ಸಿನಿಮಾ ಒಳಗೊಂಡಿದೆ. ಅದ್ಭುತವಾದ ಸಿನಿಮಾಟೊಗ್ರಫಿ, ಸಂಗೀತ ಮತ್ತು ಮನಮುಟ್ಟುವ ಚಿತ್ರಕತೆ ಹಾಗೂ ಸಂಭಾಷಣೆಯ ಕಾರಣದಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ‘ರಾಮಾಯಣ’ ಸಿನಿಮಾ ಬಿಡುಗಡೆ ಆಗುವ ಕೆಲವೇ ದಿನಗಳ ಮುಂಚೆ ಅಂದರೆ ಅಕ್ಟೋಬರ್ 30 ರಂದು ಯಾವುದೇ ಪ್ರಚಾರವಿಲ್ಲದೆ ಬಿಡುಗಡೆ ಆದ ಈ ಸಿನಿಮಾ ಜನಪ್ರೀತಿ ಗಳಿಸಿಕೊಂಡು ಮುನ್ನುಗ್ಗುತ್ತಾ ಸ್ಕ್ರೀನ್​​ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವಾಗಲೇ ‘ರಾಮಾಯಣ’ ಸಿನಿಮಾ ಬಿಡುಗಡೆ ಆಯ್ತು.

Loading...

‘ರಾಮಾಯಣ’ ಸಿನಿಮಾವು ‘ಪೈರ್​’ಗೆ ಇದ್ದ ಕೆಲವು ಸ್ಕ್ರೀನ್​​ಗಳನ್ನು ಸಹ ಮೊದಲ ವಾರ ಕಸಿದುಕೊಂಡಿತ್ತು. ಆದರೆ ಎರಡನೇ ವಾರ ಅಂದರೆ ಕಳೆದ ಒಂದೆರಡು ದಿನಗಳಲ್ಲಿ ‘ಪೈರ್’ ಸಿನಿಮಾ ಮತ್ತೆ ಮುನ್ನೆಲೆಗೆ ಬಂದಿದ್ದು, ಸಿನಿಮಾ ಹೆಚ್ಚುವರಿಯಾಗಿ 200 ಶೋಗಳನ್ನು ಸೇರ್ಪಡೆಗೊಳಿಸಿಕೊಂಡಿದೆ. ‘ರಾಮಾಯಣ’ಸಿನಿಮಾ ಬಿಡುಗಡೆ ಆಗುವ ವೇಳೆಗೆ ‘ಪೈರ್’ (ಚಿತಾ) ಸಿನಿಮಾದ ಸುಮಾರು 400 ಶೋಗಳಿದ್ದವು. ‘ರಾಮಾಯಣ’ ಕಾರಣಕ್ಕೆ ಶೋಗಳ ಸಂಖ್ಯೆ 100ಕ್ಕೆ ಕುಸಿದಿತ್ತು. ಈಗ ಮತ್ತೆ ಶೋಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ ಸಿನಿಮಾ.

ಇದನ್ನೂ ಓದಿ:‘ಹನುಮಾನ್ ಅಂಶ್‌’ ಓಟ ಬಹುತೇಕ ಅಂತ್ಯ; ಅಂತಿಮವಾಗಿ ಸಿನಿಮಾ ಗಳಿಸಿದ್ದೆಷ್ಟು?

‘ರಾಮಾಯಣ’ ಸಿನಿಮಾದ ಕಾರಣಕ್ಕೆ ‘ಪೈರ್’ ಸಿನಿಮಾದ ಶೋಗಳ ಸಂಖ್ಯೆಯಲ್ಲಿ ಕಡಿತಗೊಳಿಸಿದಾಗ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಈ ಸಣ್ಣ ಸಿನಿಮಾದ ಬೆಂಬಲಕ್ಕೆ ನಿಂತು ಶೋಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿ ಮಾಡಿತ್ತು. ಅದರ ಬೆನ್ನಲ್ಲೆ ಇದೀಗ ಸಿನಿಮಾಕ್ಕೆ 200 ಶೋಗಳು ಹೆಚ್ಚುವರಿಯಾಗಿ ದೊರಕಿವೆ. ಆ ಮೂಲಕ ಸಿನಿಮಾ ಮತ್ತೆ ಉಸಿರಾಡುವಂತಾಗಿದೆ.

‘ಪೈರ್’ ಸಿನಿಮಾ ನೋಡಿದವರೆಲ್ಲ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಗುಡ್ಡವೊಂದರ ಮೇಲೆ ವಾಸಿಸುವ 80 ವರ್​ಷದ ವೃದ್ಧ ದಂಪತಿಗಳಿಬ್ಬರ ಜೀವನದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಊರ ಜನರೆಲ್ಲ ಹಳ್ಳಿ ಬಿಟ್ಟು ತೆರಳುವಾಗ ಇಬ್ಬರು ದಂಪತಿಗಳು ಏನು ಮಾಡುತ್ತಾರೆ. ಮನೆಯ ಮುಂದೆ ಅವರು ನಿರ್ಮಿಸುತ್ತಿರುವ ಚಿತೆಯ ಮೇಲೆ ಯಾರು ಮಲಗುತ್ತಾರೆ. ಅದಕ್ಕೆ ಬೆಂಕಿ ಯಾರಿಡುತ್ತಾರೆ. ಇನ್ನೂ ಹಲವು ಕುತೂಹಲಕಾರಿ ಪ್ರಶ್ನೆಗಳು ಸಹ ಸಿನಿಮಾನಲ್ಲಿವೆ. ಬೆಂಗಳೂರಿನಲ್ಲಿ ಸಹ ಸಿನಿಮಾಕ್ಕೆ ಆರು ಶೋಗಳು ಪ್ರದರ್ಶನಗೊಳ್ಳುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us