ಜಾನಕಿ ಬೋಡಿಬಾಲಾ, ಅಜಯ್ ದೇವಗನ್ (Ajay Devgn), ಜ್ಯೋತಿಕಾ, ಆರ್. ಮಾಧವನ್ ನಟನೆಯ ‘ಶೈತಾನ್’ ಸಿನಿಮಾ ಹಿಟ್ ಆಗಲಿದೆ ಎಂದು ರಿಲೀಸ್ಗೂ ಮೊದಲೇ ಭವಿಷ್ಯ ನುಡಿಯಲಾಗಿತ್ತು. ಹಾರರ್ ಕಹಾನಿ ಇರುವ ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಮೊದಲ ಮೂರು ದಿನ ‘ಶೈತಾನ್’ (Shaitan) ಚಿತ್ರಕ್ಕೆ ಬಹುಕೋಟಿ ರೂಪಾಯಿ ಹಣ ಹರಿದು ಬಂತು. ಆದರೆ ಸೋಮವಾರದ ಪರೀಕ್ಷೆಯಲ್ಲಿ ಈ ಸಿನಿಮಾ ಸ್ವಲ್ಪ ಡಲ್ ಆಗಿದೆ. ನಾಲ್ಕನೇ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ (Shaitan Collection) ಒಂದಂಕಿಗೆ ಕುಸಿದಿದೆ. ಇದರಿಂದ ಚಿತ್ರತಂಡಕ್ಕೆ ಸ್ವಲ್ಪ ಚಿಂತೆ ಆಗಿದೆ.
ಮಾರ್ಚ್ 8ರಂದು ಬಿಡುಗಡೆಯಾದ ‘ಶೈತಾನ್’ ಸಿನಿಮಾ ಮೊದಲ ದಿನ 15.21 ಕೋಟಿ ರೂ. ಕಲೆಕ್ಷನ್ ಮಾಡಿತು. ಮೊದಲ ಶೋ ನೋಡಿದವರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿತು. ಅದರ ಪರಿಣಾಮವಾಗಿ ಎರಡನೇ ದಿನ ಕೂಡ ಕಲೆಕ್ಷನ್ ಹೆಚ್ಚಾಯಿತು. ಮಾರ್ಚ್ 9ರಂದು ‘ಶೈತಾನ್’ ಗಳಿಸಿದ್ದು 19.18 ಕೋಟಿ ರೂಪಾಯಿ. 3ನೇ ದಿನ 20.74 ಕೋಟಿ ರೂಪಾಯಿ ಹರಿದು ಬಂತು. ಆದರೆ ನಾಲ್ಕನೇ ದಿನ 7.81 ಕೋಟಿ ರೂಪಾಯಿಗೆ ಕಲೆಕ್ಷನ್ ಕುಸಿಯಿತು.
ಇದನ್ನೂ ಓದಿ: ‘ನನಗೂ ದೆವ್ವದ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್ ದೇವಗನ್
ಯಾವುದೇ ಸಿನಿಮಾಗೆ ಸೋಮವಾರದ ಬಿಸ್ನೆಸ್ ತುಂಬ ಮುಖ್ಯವಾಗುತ್ತದೆ. ಮೊದಲ 3 ದಿನ ಹೌಸ್ಫುಲ್ ಪ್ರದರ್ಶನ ಆಗಿದ್ದರೂ 4ನೇ ದಿನವಾದ ಸೋಮವಾರ ಕಲೆಕ್ಷನ್ ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ. ‘ಶೈತಾನ್’ ವಿಚಾರದಲ್ಲೂ ಹಾಗೆಯೇ ಆಗಿದೆ. ಈಗ ರಂಜಾನ್ ಮಾಸ ಆರಂಭ ಆಗಿದೆ. ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವವರ ಸಂಖ್ಯೆ ಕೂಡ ಇಳಿಮುಖ ಆಗಲಿದೆ. ಅದರಿಂದ ‘ಶೈತಾನ್’ ಗಳಿಕೆ ಮೇಲೆ ಪರಿಣಾಮ ಬೀರಲಿದೆ.
After scoring an excellent total in its opening weekend, #Shaitaan posts a strong number on the make-or-break Day 4 [Mon]… Fri 15.21 cr, Sat 19.18 cr, Sun 20.74 cr, Mon 7.81 cr. Total: ₹ 62.94 cr. #India biz. #Boxoffice#Shaitaan is eyeing ₹ 82 cr [or thereabouts] total in… pic.twitter.com/X39WBHXaDV
— taran adarsh (@taran_adarsh) March 12, 2024
‘ಶೈತಾನ್’ ಸಿನಿಮಾದ ಕಲೆಕ್ಷನ್ ಬಗ್ಗೆ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 4 ದಿನಕ್ಕೆ ಈ ಸಿನಿಮಾದ ಒಟ್ಟು ಕಲೆಕ್ಷನ್ 62.94 ಕೋಟಿ ರೂಪಾಯಿ ಆಗಿದೆ. ಒಂದು ವಾರ ಪೂರ್ಣಗೊಳ್ಳುವುದರೊಳಗೆ ಈ ಸಿನಿಮಾ 82 ಕೋಟಿ ರೂಪಾಯಿ ಗಳಿಸಬಹುದು ಎಂದು ಅವರು ಅಂದಾಜಿಸಿದ್ದಾರೆ. 2ನೇ ವೀಕೆಂಡ್ ವೇಳೆಗೆ 100 ಕೋಟಿ ರೂಪಾಯಿ ಗಡಿ ಮುಟ್ಟಬಹುದು ಎಂಬ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.