ಮುಂಬೈ: ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಆರೋಪಿಯಾಗಿರುವ ಉದ್ಯಮಿ ರಾಜ್ ಕುಂದ್ರಾ (ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ) ಈಗಾಗಲೇ ಜಾಮೀನು ಕೋರಿ ಮುಂಬೈ ಕೋರ್ಟ್ವೊಂದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಶ್ಲೀಲ ಸಿನಿಮಾ ದಂಧೆ ಸಂಬಂಧ ಪ್ರಕರಣದಲ್ಲಿ ನನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಕೇಸ್ನಲ್ಲಿ ನನ್ನ ವಿರುದ್ಧ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ನಾನು ಆರೋಪಿ ಎಂಬುದಕ್ಕೆ ಒಂದೇ ಒಂದು ಸ್ಪಷ್ಟ ಸಾಕ್ಷ್ಯಾಧಾರವೂ ಇಲ್ಲ ಎಂದು ರಾಜ್ ಕುಂದ್ರಾ ಪ್ರತಿಪಾದಿಸಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಉದ್ಯಮಿ ರಾಜ್ ಕುಂದ್ರಾ ಸೇರಿ ನಾಲ್ವರನ್ನು ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದ್ದಾರೆ. ಸದ್ಯ ಪ್ರಕರಣವನ್ನು ಮುಂಬೈ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸುತ್ತಿದೆ. ಇದೀಗ ರಾಜ್ಕುಂದ್ರಾ ತಮ್ಮ ವಕೀಲರಾದ ಪ್ರಶಾಂತ್ ಪಾಟೀಲ್ ಮೂಲಕ ಮುಂಬೈ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹಾಟ್ಶಾಟ್ಸ್ ಎಂಬ ಆ್ಯಪ್ ಮೂಲಕ ಅಶ್ಲೀಲ ಚಿತ್ರಗಳ ಅಪ್ಲೋಡ್ ಮಾಡುತ್ತಿದ್ದೆ ಎಂದು ಆರೋಪಿಸಲಾಗಿದೆ. ಆದರೆ ನನ್ನ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ನಲ್ಲಿ ಅದಕ್ಕೆ ಪೂರಕವಾಗಿ ಒಂದೂ ಸಾಕ್ಷಿಗಳಿಲ್ಲ. ಬರೀ ಅಷ್ಟೇ ಅಲ್ಲ, ಪೊರ್ನೋಗ್ರಾಫಿಕ್ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದೆ ಎಂಬ ಬಗ್ಗೆಯೂ ಯಾವುದೇ ಸಾಕ್ಷ್ಯಾಧಾರಗಳನ್ನು ಚಾರ್ಜ್ಶೀಟ್ನಲ್ಲಿ ತೋರಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಕೋರ್ಟ್ ಮುಂದೂಡಿದೆ.
ರಾಜ್ ಕುಂದ್ರಾ ವಿರುದ್ಧ ಯಾವೆಲ್ಲಾ ಪ್ರಕರಣ ದಾಖಲಿಸಲಾಗಿದೆ?
ರಾಜ್ ಕುಂದ್ರಾ ಸಾಕ್ಷಿ ನಾಶಕ್ಕೂ ಪ್ರಯತ್ನಿಸಿದ್ದರು. ವಾಟ್ಸಾಪ್ ಕರೆಗಳು, ಇಮೈಲ್ ಗಳನ್ನು ಅವರ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳಿಂದ ಡಿಲೀಟ್ ಮಾಡಲಾಗಿತ್ತು. ಅದಾದ ಬಳಿಕ ರಾಜ್ ಕುಂದ್ರಾ ಅರೆಸ್ಟ್ ಆಗುತ್ತಿದ್ದಂತೆ ಕೆಲವು ನಟಿಯರು ಮುಂದೆ ಬಂದು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಸದ್ಯ ಲೈಂಗಿಕ ದೌರ್ಜನ್ಯ, ವಂಚನೆ, ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸುವುದು, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ- ಮೊದಲಾದ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್’ ಸಿನಿಮಾ ನಟಿ; ವಿಡಿಯೋ ವೈರಲ್
IPL 2021: ದೆಹಲಿಯ 14 ವರ್ಷಗಳ ವನವಾಸ ಅಂತ್ಯಗೊಳಿಸ್ತಾರಾ ರಿಷಭ್ ಪಂತ್: ಇಲ್ಲಿದೆ ಅವರ ಸಂಪೂರ್ಣ ವೇಳಾಪಟ್ಟಿ
Published On - 4:59 pm, Sat, 18 September 21