ಸಮಚಿತ್ತ, ಏಕಾಗ್ರತೆ ಹೊಂದೋದು ಹೇಗೆ? ಅಭಿಮಾನಿಗಳಿಗೆ ಟಿಪ್ಸ್​ ನೀಡಿದ ಶಿಲ್ಪಾ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Sep 13, 2021 | 6:56 PM

ರಾಜ್​ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಒಂದು ತಿಂಗಳು ಸಂಪೂರ್ಣ ಸೈಲೆಂಟ್​ ಆಗಿದ್ದರು. ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಅವರು.

ಸಮಚಿತ್ತ, ಏಕಾಗ್ರತೆ ಹೊಂದೋದು ಹೇಗೆ? ಅಭಿಮಾನಿಗಳಿಗೆ ಟಿಪ್ಸ್​ ನೀಡಿದ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
Follow us on

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಜೈಲು ಸೇರಿ ಹಲವು ದಿನಗಳಾಗಿವೆ. ಅವರಿಗೆ ಜಾಮೀನು ಸಿಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಜಾಮೀನು ಪಡೆಯೋಕೆ ರಾಜ್​ ಕುಂದ್ರಾ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅವರ ಪರ ವಕೀಲರು ನಾನಾ ಕೋರ್ಟ್​ ಅಲೆಯುತ್ತಿದ್ದಾರೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಪತಿಯಿಂದ ಶಿಲ್ಪಾ ಶೆಟ್ಟಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನು ಅವರು ಚಾಲೆಂಜ್​ ಆಗಿ ಸ್ವೀಕರಿಸಿದ್ದಾರೆ. ಪತಿ ಬಂಧನದ ನಂತರ ಸ್ವಲ್ಪ ದಿನ ಮನೆಯಲ್ಲೇ ಇದ್ದ ಅವರು ಈಗ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಕೆಲ ಟಿಪ್ಸ್​ ಕೂಡ ನೀಡಿದ್ದಾರೆ.

ರಾಜ್​ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಒಂದು ತಿಂಗಳು ಸಂಪೂರ್ಣ ಸೈಲೆಂಟ್​ ಆಗಿದ್ದರು. ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಅವರು. ‘ಸೂಪರ್​ ಡಾನ್ಸರ್​’ ರಿಯಾಲಿಟಿ ಶೋ ಜಡ್ಜ್​ ಆಗಿರುವ ಶಿಲ್ಪಾ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿಯೂ ಕೂಡ ಅವರು ಆ್ಯಕ್ಟೀವ್​ ಆಗಿದ್ದಾರೆ. ಈಗ ಅವರು ಸಮಚಿತ್ತ ಹೊಂದೋದು ಹೇಗೆ ಎನ್ನುವ ಬಗ್ಗೆ ಪಾಠ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ವಯಸ್ಸು 46. ಆದಾಗ್ಯೂ ಅವರು ಫಿಟ್​ ಆಗಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣುವುದೇ ಇಲ್ಲ. ಇದಕ್ಕೆ ಕಾರಣವಾಗಿದ್ದು ಯೋಗ. ಶಿಲ್ಪಾ ಯೋಗದಲ್ಲಿ ಪಳಗಿದ್ದಾರೆ. ನಿತ್ಯ ಅವರು ಯೋಗ ಮಾಡುವುದನ್ನು ತಪ್ಪಿಸುವುದಿಲ್ಲ. ಈಗ ಕೆಲ ಆಸನಗಳನ್ನು ಅವರು ಅಭಿಮಾನಿಗಳಿಗೂ ಹೇಳಿಕೊಟ್ಟಿದ್ದಾರೆ. ಈ ಆಸನಗಳಿಂದ ಏಕಾಗ್ರತೆ ಹಾಗೂ ಸಮಚಿತ್ತ ಹೊಂದಲು ಸಾಧ್ಯ ಎಂದು ಅವರು ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ನಟನೆಯಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ಅವರ ನಟನೆಯ ‘ಹಂಗಾಮಾ 2’ ಒಟಿಟಿಯಲ್ಲಿ ರಿಲೀಸ್​ ಆಗಿತ್ತು. ಇದೇ ಸಂದರ್ಭದಲ್ಲಿ ರಾಜ್​ ಕುಂದ್ರಾ ವಿವಾದ ಭುಗಿಲೆದ್ದಿತ್ತು. ಇದು ಸಿನಿಮಾಗೆ ಕೊಂಚ ಹಿನ್ನಡೆ ಆಗಿತ್ತು. ಇನ್ನು, ಸಿನಿಮಾಗೆ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ, ಈ ಸಿನಿಮಾ ಸೋತಿತ್ತು. ಇನ್ನು ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟು ಮಿಂಚುತ್ತಿದ್ದಾರೆ.

ಇದನ್ನೂ ಓದಿ: Shilpa Shetty: ರಾಜ್​ ಕುಂದ್ರಾ ಪೋರ್ನ್​ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ತಪ್ಪು ಒಪ್ಪಿಕೊಳ್ಳಲಿ ಎಂದು ಹಠ ಹಿಡಿದ ಶೆರ್ಲಿನ್​ ಚೋಪ್ರಾ

ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾಗೆ ಹೊಸ ಸಂಕಷ್ಟ; 41 ಲಕ್ಷ ರೂ ವಂಚಿಸಿದ್ದಾರೆಂದು ದೂರು ನೀಡಿದ ದೆಹಲಿ ಮೂಲದ ಉದ್ಯಮಿ