ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳ (Porn) ದಂಧೆಯಲ್ಲಿ ಪ್ರಮುಖ ಆರೋಪಿ ಆಗಿರುವುದು ಇಡೀ ಬಾಲಿವುಡ್ಗೆ ಶಾಕ್ ನೀಡಿದೆ. ರಾಜ್ ಕುಂದ್ರಾ (Raj Kundra) ಸದ್ಯ ಪೊಲೀಸರ ವಶದಲ್ಲಿದ್ದಾರೆ. ಪತಿಯ ಬಂಧನದ ಬಳಿಕ ಸಂಪೂರ್ಣ ಮೌನ ವಹಿಸಿದ್ದ ಶಿಲ್ಪಾ ಶೆಟ್ಟಿ ಈಗ ಮೌನ ಮುರಿದಿದ್ದಾರೆ. ಪ್ರಸ್ತುತ ತಮ್ಮ ಸ್ಥಿತಿ ಯಾವ ರೀತಿ ಇದೆ ಎಂಬದುನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಏನೇ ಕಷ್ಟ ಬಂದರೂ ಎದುರಿಸುವುದಾಗಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
‘ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ ಎಂದು ತಿಳಿದುಕೊಂಡು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆಯೂ ಅನೇಕ ಸವಾಲುಗಳನ್ನು ಎದುರಿಸಲಿದ್ದೇನೆ. ಇಂದಿನ ನನ್ನ ಬದುಕನ್ನು ಯಾವುದೂ ಕೂಡ ಕೆಡಿಸಬೇಕಿಲ್ಲ’ ಎಂದು ಶಿಲ್ಪಾ ಶೆಟ್ಟಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
‘ಈ ಹಿಂದೆ ನಮ್ಮನ್ನು ನೋಯಿಸಿದವರ ಬಗ್ಗೆ, ಅನುಭವಿಸಿದ ಹತಾಶೆಯ ಬಗ್ಗೆ, ಕೈಕೊಟ್ಟ ಅದೃಷ್ಟದ ಬಗ್ಗೆ ನಾವು ಕೋಪ ಮಾಡಿಕೊಳ್ಳುತ್ತೇವೆ. ಮುಂದೆ ಬರಬಹುದಾದ ಸಾವು-ನೋವು, ಕಷ್ಟ-ನಷ್ಟಗಳ ಬಗ್ಗೆ ಭಯ ಇಟ್ಟುಕೊಳ್ಳುತ್ತೇವೆ. ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದರ ಚಿಂತೆ ಬಿಟ್ಟು, ಈ ಕ್ಷಣಕ್ಕಾಗಿ ನಾವು ಬದುಕಬೇಕು’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.
ಜು.19ರಂದು ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದರು. ಅವರ ಮೇಲೆ ಇರುವ ಆರೋಪಗಳನ್ನು ಪುಷ್ಟೀಕರಿಸುವಂತಹ ಅನೇಕ ಸಾಕ್ಷಿಗಳು ಕೂಡ ಪೊಲೀಸರಿಗೆ ಸಿಕ್ಕಿವೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ಶ್ರೀಮಂತಿಕೆಗೆ ಏನೂ ಕೊರತೆ ಇಲ್ಲ. ಐಷಾರಾಮಿ ಜೀವನ ನಡೆಸುತ್ತಿರುವ ಅವರು ಅನೇಕ ಮೂಲಗಳಿಂದ ಹಣ ಗಳಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ, ಅವರು 350 ಮಿಲಿಯನ್ ಡಾಲರ್ ಹೊಂದಿದ್ದಾರೆ. ಅಂದರೆ, ಸುಮಾರು 2600 ಕೋಟಿ ರೂ.! ಇನ್ನೊಂದು ಮೂಲದ ಪ್ರಕಾರ 550 ಮಿಲಿಯನ್ ಡಾಲರ್ (4 ಸಾವಿರ ಕೋಟಿ ರೂ.) ಮೊತ್ತದ ಆಸ್ತಿಯನ್ನು ರಾಜ್ ಕುಂದ್ರಾ ಹೊಂದಿದ್ದಾರೆ.
ಪ್ರತಿ ವರ್ಷ ಅಂದಾಜು 120 ಕೋಟಿ ರೂ. ಆದಾಯ ರಾಜ್ ಕುಂದ್ರಾಗೆ ಬರುತ್ತದೆ ಎನ್ನಲಾಗಿದೆ. ಐಪಿಎಲ್ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಸಹ-ಮಾಲೀಕತ್ವವನ್ನು ಈ ದಂಪತಿ ಹೊಂದಿದ್ದಾರೆ. ವಿಯಾನ್ ಇಂಡಸ್ಟ್ರೀಸ್, ಗ್ರೂಪ್ಕೋ ಡೆವೆಲಪರ್ಸ್, ಟಿಎಂಟಿ ಗ್ಲೋಬಲ್, ಜೆಎಲ್ ಸ್ಟ್ರೀಮ್ ಪ್ರೈವೇಟ್ ಲಿಮಿಡೆಟ್ ಸೇರಿದಂತೆ ಹಲವು ಉದ್ಯಮಗಳನ್ನು ರಾಜ್ ಕುಂದ್ರಾ ಹೊಂದಿದ್ದಾರೆ. ಅವರ ಜೊತೆ ಸಂಪರ್ಕ ಹೊಂದಿದ್ದ ಅನೇಕ ನಟಿಯರನ್ನು, ಮಾಡೆಲ್ಗಳನ್ನು ಕೂಡ ಈಗ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ತಾವು ಅರೆಸ್ಟ್ ಆಗುವುದರಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ರಾಜ್ ಕುಂದ್ರಾ 25 ಲಕ್ಷ ರೂ. ಲಂಚ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಇದನ್ನೂ ಓದಿ:
ಬಾಲಿವುಡ್ನಷ್ಟು ದೊಡ್ಡದಾಗಿ ಪಾರ್ನ್ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್ ಕುಂದ್ರಾ ಕನಸಾಗಿತ್ತು
ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ: ಇಬ್ಬರ ಹಣೆಬರಹವೂ ನಿರ್ಧಾರವಾಗಲಿದೆ ಒಂದೇ ದಿನ; ಹೇಗೆ ಗೊತ್ತಾ?