ಚಿತ್ರರಂಗದಲ್ಲಿ ಭಾರೀ ಪ್ರತಿಷ್ಠೆ ಹೊಂದಿರುವವರು ನಟಿ ಶಿಲ್ಪಾ ಶೆಟ್ಟಿ. ಆದರೆ ಅವರ ಪತಿ ರಾಜ್ ಕುಂದ್ರಾ (Raj Kundra) ನೀಲಿ ಚಿತ್ರಗಳ ದಂಧೆಯಲ್ಲಿ ಪ್ರಮುಖ ಆರೋಪಿ ಆಗಿರುವುದರಿಂದ ಅವರು ಮುಜುಗರ ಅನುಭವಿಸುವಂತಾಗಿದೆ. ಮಾಡೆಲ್ ಮತ್ತು ನಟಿಯರನ್ನು ಬಳಸಿಕೊಂಡು ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳನ್ನು (Porn) ಮಾಡುತ್ತಿದ್ದರು ಎಂಬ ಆರೋಪ ಎದುರಾಗಿದೆ. ಹಾಗಿದ್ದರೂ ಕೂಡ ಶಿಲ್ಪಾ ಶೆಟ್ಟಿ (Shilpa Shetty) ತಮ್ಮ ವೃತ್ತಿಪರತೆಯನ್ನು ಮರೆತಿಲ್ಲ. ಎಂದಿನಂತೆ ತಾವು ನಟಿಸಿದ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅದು ಎಲ್ಲರ ಗಮನ ಸೆಳೆಯುತ್ತಿದೆ.
ಬಹುಕಾಲದ ಬಳಿಕ ಶಿಲ್ಪಾ ಶೆಟ್ಟಿ ನಟನೆಗೆ ಮರಳಿದ್ದಾರೆ. ‘ಹಂಗಾಮಾ 2’ ಚಿತ್ರದ ಮೂಲಕ ಅವರು ಕಮ್ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಜು.23ರಂದು ಬಿಡುಗಡೆ ಆಗಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಓಟಿಟಿ ಮೂಲಕ ರಿಲೀಸ್ ಆಗಿರುವ ಈ ಚಿತ್ರದ ಪ್ರಚಾರದಲ್ಲಿ ಶಿಲ್ಪಾ ಶೆಟ್ಟಿ ಭಾಗಿ ಆಗಿದ್ದಾರೆ. ಗಂಡನ ನೀಲಿ ಚಿತ್ರ ಹಗರಣದ ತಲೆಬಿಸಿ ಏನೇ ಇದ್ದರೂ ಕೂಡ ಅವರು ‘ಹಂಗಮಾ 2’ ಚಿತ್ರ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಯೋಗ ಕಲಿಸಿದ ಪಾಠಗಳನ್ನು ನಾನು ನಂಬುತ್ತೇನೆ ಮತ್ತು ಪಾಲಿಸುತ್ತೇನೆ. ಬದುಕು ಇರುವುದೇ ಈ ಕ್ಷಣದಲ್ಲಿ. ಒಂದು ಒಳ್ಳೆಯ ಸಿನಿಮಾ ಮಾಡಲು ‘ಹಂಗಮಾ 2’ ತಂಡ ಶ್ರಮಿಸಿದೆ. ಎಂದಿಗೂ ಸಿನಿಮಾಗೆ ತೊಂದರೆ ಆಗಬಾರದು. ಹಾಗಾಗಿ, ಇಂದು ನೀವು ನಿಮ್ಮ ಕುಟುಂಬ ಸಮೇತ ಈ ಸಿನಿಮಾ ನೋಡಿ ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
(2/2)
So today, I request you all to watch Hungama 2 with your families to put a smile on your face and for the sake of every single person attached to the film.
Thank you??With gratitude,
Shilpa Shetty Kundra ???— SHILPA SHETTY KUNDRA (@TheShilpaShetty) July 23, 2021
ಜು.27ರವರೆಗೂ ರಾಜ್ ಕುಂದ್ರಾ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಶಿಲ್ಪಾ ಶೆಟ್ಟಿ ಮನೆ ಮೇಲೂ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ತನಿಖೆ ವೇಳೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ತನಿಖೆಗೆ ರಾಜ್ ಕುಂದ್ರಾ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಸುದ್ದಿ ಕೂಡ ಕೇಳಿಬಂದಿದೆ. ಪೂನಂ ಪಾಂಡೆ ಸೇರಿದಂತೆ ಅನೇಕ ನಟಿಯರು ಅವರ ಮೇಲೆ ಹೊಸ ಆರೋಪಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಮೇಲೆ ಕಣ್ಣಿಟ್ಟಿದ್ದ ನೀಲಿ ಚಿತ್ರಗಳ ಆರೋಪಿ ರಾಜ್ ಕುಂದ್ರಾ
ನೀಲಿ ಚಿತ್ರ ದಂಧೆಯ ಆರೋಪಿ ರಾಜ್ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್