Shilpa Shetty: ಪತಿ ರಾಜ್​ ಕುಂದ್ರಾ ಚಿಂತೆ ಮರೆತು ಬಿಂದಾಸ್​ ಆಗಿ ಕುಣಿದು ಕುಪ್ಪಳಿಸಿದ ನಟಿ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್​

ಜನಪ್ರಿಯ ‘In Da Ghetto’ ಹಾಡಿಗೆ ಶಿಲ್ಪಾ ಶೆಟ್ಟಿ ಕುಣಿದು ಕುಪ್ಪಳಿಸಿದ್ದಾರೆ. ಅದನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಸೋಶಿಯಲ್​ ಮಿಡಿಯಾದಲ್ಲಿ ಶಿಲ್ಪಾ ಸಖತ್​ ಆ್ಯಕ್ಟೀವ್​ ಆಗಿದ್ದಾರೆ.

Shilpa Shetty: ಪತಿ ರಾಜ್​ ಕುಂದ್ರಾ ಚಿಂತೆ ಮರೆತು ಬಿಂದಾಸ್​ ಆಗಿ ಕುಣಿದು ಕುಪ್ಪಳಿಸಿದ ನಟಿ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್​
ಶಿಲ್ಪಾ ಶೆಟ್ಟಿ
Edited By:

Updated on: Oct 21, 2021 | 11:40 AM

ನಟಿ ಶಿಲ್ಪಾ ಶೆಟ್ಟಿ ಅವರಿಗೆ ಎರಡು ತಿಂಗಳ ಹಿಂದೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಅವರ ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಸಿಕ್ಕಿ ಬಿದ್ದ ಬಳಿಕ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿತ್ತು. ಹಾಗಾಗಿ ಎಷ್ಟೋ ದಿನಗಳ ಕಾಲ ಶಿಲ್ಪಾ ಶೆಟ್ಟಿ ಅವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಆದರೆ ರಾಜ್​ ಕುಂದ್ರಾಗೆ ಜಾಮೀನು ಸಿಕ್ಕ ಬಳಿಕ ಶಿಲ್ಪಾ ನಿಟ್ಟುಸಿರು ಬಿಟ್ಟರು. ಈಗಂತೂ ಅವರು ಸಂಪೂರ್ಣವಾಗಿ ಗಂಡನ ಚಿಂತೆಯಿಂದ ಹೊರಬಂದಂತಿದೆ. ಅದಕ್ಕೆ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳು ಸಾಕ್ಷಿ ಒದಗಿಸುತ್ತಿವೆ.

ಬಗೆಬಗೆಯ ರೀಲ್ಸ್​ ಮಾಡಿ ಶಿಲ್ಪಾ ಶೆಟ್ಟಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ. ವಕೌರ್ಟ್​, ಡಯೆಟ್​ ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಟ್ರೆಂಡಿ ಹಾಡುಗಳಿಗೆ ಬಿಂದಾಸ್​ ಆಗಿ ಕುಣಿಯುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈಗ ಅವರು ಜನಪ್ರಿಯ ‘In Da Ghetto’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಲಕ್ಷಾಂತರ ಮಂದಿ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಶಿಲ್ಪಾ ಶೆಟ್ಟಿ ಫಿಟ್ನೆಸ್​ ಪಾಠ:

ಶಿಲ್ಪಾ ಶೆಟ್ಟಿ ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಅವರು ನಿತ್ಯವೂ ಯೋಗಾಭ್ಯಾಸ ಮಾಡುತ್ತಾರೆ. ಇದರ ಜತೆಗೆ ಬಾಡಿನ ಫಿಟ್​ ಆಗಿಟ್ಟುಕೊಳ್ಳೋಕೆ ನಾನಾ ಕಸರತ್ತು ಮಾಡುತ್ತಾರೆ. ಇತ್ತೀಚೆಗೆ ಅವರು ಜಿಮ್​ನಲ್ಲಿ ವಾರ್ಮ್​​ಅಪ್​ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

‘ನೀವು ರಿಸ್ಕ್​ ತೆಗೆದುಕೊಳ್ಳದೆ ಮತ್ತು ನಿಮ್ಮ ಆರಾಮ ಜೋನ್​ನಿಂದ ಹೊರಬರದೆ ಬದುಕಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ದಿಟ್ಟತನ ಬೇಕು. ನಾನು ಹೊಸ ಏರೋಬಿಕ್ ತಾಲೀಮು ನಡೆಸುತ್ತಿದ್ದೇನೆ. ಇದಕ್ಕೆ ಬುಡಕಟ್ಟು ಸ್ಕ್ವಾಟ್ಸ್ ಎನ್ನುತ್ತೇವೆ. ಇದು ದೇಹದ ಕೆಳಭಾಗದ ಎಲ್ಲಾ ಸ್ನಾಯುಗಳು, ಭುಜಗಳು, ತೋಳು ಮತ್ತು ಕಾಲುಗಳ ಸ್ನಾಯುಗಳಿಗೆ ಸಹಕಾರಿ. ಪ್ರತಿನಿತ್ಯ ಒಂದು ನಿಮಿಷದಂತೆ 4 ಸೆಟ್‌ಗಳನ್ನು ಮಾಡಬೇಕು. ಪ್ರತಿ ಸೆಟ್​ನ ನಡುವೆ ಕೇವಲ 30 ಸೆಕೆಂಡುಗಳ ವಿರಾಮವನ್ನು ನೀಡಬೇಕು. ವ್ಯತ್ಯಾಸವನ್ನು ನೋಡಲು ಸತತವಾಗಿ ಪ್ರಯತ್ನ ಮಾಡಿ. ಧೈರ್ಯವಿಲ್ಲದೆ ಏನೂ ಬರುವುದಿಲ್ಲ’ ಎಂದು ಅವರು ಫಿಟ್ನೆಸ್​ ಪಾಠ ಮಾಡಿದ್ದರು.

ಇದನ್ನೂ ಓದಿ:

ರಾಜ್​ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ದೂರು; ಈ ಬಾರಿ ಶಿಲ್ಪಾ ಶೆಟ್ಟಿಗೂ ಕಾದಿಗೆ ಸಂಕಷ್ಟ

ಕೋರ್ಟ್​ ಮೆಟ್ಟಿಲೇರಿದ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ; 50 ಕೋಟಿ ರೂ. ನೀಡಲು ಆಗ್ರಹ