ನರೇಂದ್ರ ಮೋದಿ (Narendra Modi) ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಇಂದು (ಜೂನ್ 09) ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂದು ಸಂಜೆ 7:15ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ವಿದೇಶದ ಕೆಲವು ಅತಿಥಿಗಳ ಜೊತೆಗೆ ದೇಶದ ಹಲವು ಪ್ರಮುಖ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಕೆಲವು ದೇಶಗಳ ಪ್ರಧಾನ ಮಂತ್ರಿಗಳು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಸೆಲೆಬ್ರಿಟಿಗಳು ದೆಹಲಿ ತಲುಪಿದ್ದು ಕೆಲವೇ ಗಂಟೆಗಳಲ್ಲಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
ದಕ್ಷಿಣ ಭಾರತದಿಂದಲೂ ಕೆಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯವಾಗಿ ನಟ ರಜನೀಕಾಂತ್ ಈಗಾಗಲೇ ದೆಹಲಿ ತಲುಪಿದ್ದು, ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಜನೀಕಾಂತ್, ತಾವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದಾಗಿ ಹೇಳಿದ್ದಾರೆ. ವಿಶೇಷವೆಂದರೆ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸೀಟು ಸಹ ಬಂದಿಲ್ಲ.
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಜನೀಕಾಂತ್ಗೆ , ‘ನೆಹರು ಬಳಿಕ ಮೂರನೇ ಬಾರಿ ಪ್ರಧಾನಿ ಆಗುತ್ತಿರುವ ಮೋದಿ ಅವರಿಗೆ ಏನು ಹೇಳಲು ಬಯಸುತ್ತೀರವೆಂಬ ಪ್ರಶ್ನೆ ಎದುರಾಗಿದೆ. ಉತ್ತರಿಸಿರುವ ರಜನೀಕಾಂತ್, ‘ಇದೊಂದು ಐತಿಹಾಸಿಕ ಇವೆಂಟ್, ಮೂರನೇ ಬಾರಿ ಪ್ರಧಾನಿ ಆಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಶುಭಾಶಯ ತಿಳಿಸುತ್ತೇನೆ’ ಎಂದಿದ್ದಾರೆ. ರಜನೀಕಾಂತ್ ಅವರು ಈ ಹಿಂದೆಯೂ ಕೆಲವು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿ ಆಗಿದ್ದಾರೆ. ಧಾರ್ಮಿಕ ವ್ಯಕ್ತಿ ಆಗಿರುವ ರಜನೀಕಾಂತ್ಗೆ ಮೋದಿ ಕುರಿತು ಗೌರವವಿದೆ. ಇತ್ತೀಚೆಗೆ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿದ್ದ ರಜನೀಕಾಂತ್ ಅವರು ಅವರ ಕಾಲಿಗೆ ನಮಸ್ಕರಿಸಿ ತೀವ್ರ ಟ್ರೋಲ್ ಆಗಿದ್ದರು.
ಇದನ್ನೂ ಓದಿ:ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮೇಲಿನ ದಾಳಿ ಖಂಡಿಸಿದ ನರೇಂದ್ರ ಮೋದಿ
ಬಾಲಿವುಡ್ ನಟ ಅನಿಲ್ ಕಪೂರ್ ಸಹ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಮನೆಯಿಂದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮದೊಟ್ಟಿಗೆ ಮಾತನಾಡಿದ ಅನಿಲ್ ಕಪೂರ್, ‘ದೇಶದ ಪ್ರಗತಿ ಆಗಲಿದೆ, ಎಲ್ಲೆಡೆ ಧನಾತ್ಮಕ ವಾತಾವರಣ ಇದೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದಿದ್ದಾರೆ.
#WATCH | Delhi: Actor Rajinikanth says, “I am going to take part in the swearing-in ceremony… It is a very historic event. I congratulate PM Modi Ji for becoming the prime minister for the consecutive third time…” pic.twitter.com/zdcrdZ2kSm
— ANI (@ANI) June 9, 2024
ನರೇಂದ್ರ ಮೋದಿ ಇಂದು 7:15 ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿಯ ಕೇಂದ್ರ ಕ್ಯಾಬಿನೆಟ್ನಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಅದರಲ್ಲಿಯೂ ಎಚ್ಡಿ ಕುಮಾರಸ್ವಾಮಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದ್ದು, ಅವರೊಟ್ಟಿಗೆ ಪ್ರಹ್ಲಾದ್ ಜೋಶಿ ಹಾಗೂ ಇನ್ನೂ ಒಬ್ಬ ಸಂಸದರಿಗೆ ಸಚಿವ ಸ್ಥಾನ ಸಿಗಲಿದೆ. ಮೂರು ರಾಜ್ಯ ಸಚಿವ ಸ್ಥಾನಗಳೂ ಸಹ ಧಕ್ಕಲಿವೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ