ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮೇಲಿನ ದಾಳಿ ಖಂಡಿಸಿದ ನರೇಂದ್ರ ಮೋದಿ
ಘಟನೆಗೆ ಕಾರಣ ಏನು ಎಂಬುದು ಸದ್ಯ ತಿಳಿದು ಬಂದಿಲ್ಲ. ಆದರೆ ಸ್ಥಳೀಯ ಮಾಧ್ಯಮವು ಕೋಪನ್‌ಹೇಗನ್‌ನಲ್ಲಿರುವ ಸೆಂಟ್ರಲ್ ಪಿಯಾಜಾವಾದ ಕಲ್ಟೋರ್ವೆಟ್ ಸ್ಕ್ವೇರ್ ಅನ್ನು ಹಾದುಹೋಗುವಾಗ ವ್ಯಕ್ತಿಯೊಬ್ಬ ಫ್ರೆಡೆರಿಕ್ಸೆನ್ ಅವರನ್ನು ಬಲವಂತವಾಗಿ ತಳ್ಳಿದನು ಎಂದು ವರದಿ ಮಾಡಿದೆ
ದೆಹಲಿ ಜೂನ್ 08: ಕೋಪನ್ ಹ್ಯಾಗನ್ನಲ್ಲಿ (Copenhagen) ವ್ಯಕ್ತಿಯೊಬ್ಬ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ (Mette Frederiksen) ಅವರಿಗೆ ಢಿಕ್ಕಿ ಹೊಡೆದು ನಡೆಸಿದ ದಾಳಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ (Narendra Modi) ಖಂಡಿಸಿದ್ದಾರೆ. ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಮೇಲಿನ ದಾಳಿಯನ್ನು ಖಂಡಿಸುತ್ತೇವೆ. ನನ್ನ ಸ್ನೇಹಿತರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ ಎಂದು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಸದ್ಯ ತಿಳಿದು ಬಂದಿಲ್ಲ. ಆದರೆ ಸ್ಥಳೀಯ ಮಾಧ್ಯಮವು ಕೋಪನ್‌ಹೇಗನ್‌ನಲ್ಲಿರುವ ಸೆಂಟ್ರಲ್ ಪಿಯಾಜಾವಾದ ಕಲ್ಟೋರ್ವೆಟ್ ಸ್ಕ್ವೇರ್ ಅನ್ನು ಹಾದುಹೋಗುವಾಗ ವ್ಯಕ್ತಿಯೊಬ್ಬ ಫ್ರೆಡೆರಿಕ್ಸೆನ್ ಅವರನ್ನು ಬಲವಂತವಾಗಿ ತಳ್ಳಿದನು ಎಂದು ವರದಿ ಮಾಡಿದೆ. ದಾಳಿಗೆ ಸಂಬಂಧಿಸಿದಂತೆ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡ್ಯಾನಿಶ್ ಪ್ರಧಾನಿಗೆ ಕುತ್ತಿಗೆ ನೋವು ಆಗಿದ್ದು. ಘಟನೆಯ ನಂತರ ಅವರು ಚೆನ್ನಾಗಿದ್ದಾರೆ ಎಂದು ಅವರ ಕಚೇರಿ ಶನಿವಾರ ಹೇಳಿಕೆಯಲ್ಲಿ ದೃಢಪಡಿಸಿದೆ. ಶಂಕಿತ ವ್ಯಕ್ತಿನ್ನು ಫ್ರೆಡೆರಿಕ್ಸ್‌ಬರ್ಗ್‌ನಲ್ಲಿರುವ ಕೋಪನ್‌ಹೇಗನ್ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ 11 ಗಂಟೆಗೆ ನಲ್ಲಿ ಪೂರ್ವ-ವಿಚಾರಣೆಯ ಕಸ್ಟಡಿ ವಿಚಾರಣೆಗೆ ಹಾಜರುಪಡಿಸಲಾಗುವುದು.
ಮೋದಿ ಟ್ವೀಟ್
Deeply concerned by the news of the attack on Mette Frederiksen, Denmark’s Prime Minister. We condemn the attack. Wishing good health to my friend. @Statsmin
— Narendra Modi (@narendramodi) June 8, 2024
ಇಂದು ಬೆಳಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡಾ ಈ ದಾಳಿಯನ್ನು ಖಂಡಿಸಿದರು. ಡ್ಯಾನಿಶ್ ಪ್ರಧಾನಿ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಎಂದು ಮ್ಯಾಕ್ರನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಾನು ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಮೆಟ್ಟೆ ಫ್ರೆಡೆರಿಕ್ಸೆನ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಅವರು ಹೇಳಿದರು.
ಫ್ರೆಡೆರಿಕ್ಸೆನ್ ಮೇಲಿನ ದಾಳಿ ಬಗ್ಗೆ ಕೇಳಿ ಆಘಾತವಾಯಿತು ಎಂದು NATO ಸೆಕ್ರೆಟರಿ-ಜನರಲ್, ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷರಾದ ಚಾರ್ಲ್ಸ್ ಮೈಕೆಲ್ ಅವರು ಕೂಡಾ ದಾಳಿಯನ್ನು ಖಂಡಿಸಿದ್ದು ಇದು “ಹೇಡಿತನದ ಆಕ್ರಮಣ” ಎಂದು ಕರೆದರು.
ಯುರೋಪಿಯನ್ ಯೂನಿಯನ್ ಚುನಾವಣೆಯಲ್ಲಿ ಡ್ಯಾನಿಷ್ ಮತದಾನಕ್ಕೆ ಎರಡು ದಿನಗಳ ಮೊದಲು ಈ ದಾಳಿ ನಡೆದಿದೆ. ಮೂರು ವಾರಗಳ ಹಿಂದೆ, ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ದಾಳಿ ನಡೆದಿದ್ದು, ಅವರು ಗಂಭೀರ ಗಾಯಗೊಂಡಿದ್ದರು.
ಇದನ್ನೂ ಓದಿ: ಮೋದಿಯ ಈ ಒಂದು ಎಕ್ಸ್ ಪ್ರತಿಕ್ರಿಯೆಗೆ ಉರಿದುಕೊಂಡ ಚೀನಾ, ಕಾರಣವೇನು
ಡೆನ್ಮಾರ್ಕ್‌ನಲ್ಲಿ ಮತ್ತು 27 ರಾಷ್ಟ್ರಗಳ ಬ್ಲಾಕ್‌ನಲ್ಲಿ ನಡೆಯುತ್ತಿರುವ ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟರಿ ಚುನಾವಣೆಗಳ ಮಧ್ಯೆ ಫ್ರೆಡೆರಿಕ್‌ಸೆನ್ ಮೇಲಿನ ದಾಳಿ ನಡೆದಿದೆ. ಫ್ರೆಡೆರಿಕ್‌ಸೆನ್ ಸೋಶಿಯಲ್ ಡೆಮೋಕ್ರಾಟ್‌ಗಳ ಯುರೋಪಿನ್ ಒಕ್ಕೂಟದ ಪ್ರಮುಖ ಅಭ್ಯರ್ಥಿ ಕ್ರಿಸ್ಟಲ್ ಸ್ಕಾಲ್ಡೆಮೋಸ್ ಅವರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಏತನ್ಮಧ್ಯೆ, ದಾಳಿಯು ಪ್ರಚಾರ ಕಾರ್ಯಕ್ರಮಕ್ಕೆ ಸಂಬಂಧಿಸಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ