ಸೋನಂ ಕಪೂರ್ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದ ರಾಣಾ ದಗ್ಗುಬಾಟಿ

ಅದು ದುಲ್ಖರ್ ಸಲ್ಮಾನ್ ನಟನೆಯ ‘ಕಿಂಗ್ ಆಫ್ ಕೋತ್ತಾ’ ಸಿನಿಮಾದ ರಿಲೀಸ್ ಸಂದರ್ಭ. ಈ ಈವೆಂಟ್​ಗೆ ರಾಣಾ ದಗ್ಗುಬಾಟಿ ತೆರಳಿದ್ದರು. ದುಲ್ಖರ್ ಎಷ್ಟು ಸ್ವೀಟ್ ಎಂದು ಹೇಳಲು ಹೋಗಿ ಅವರು ಸೋನಂನ ಮರ್ಯಾದಿ ಹರಾಜು ಹಾಕಿದ್ದರು. ಈ ಹೇಳಿಕೆ ಚರ್ಚೆ ಆದ ಬಳಿಕ ಅವರು ಕ್ಷಮೆ ಕೇಳಿದ್ದರು.

ಸೋನಂ ಕಪೂರ್ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದ ರಾಣಾ ದಗ್ಗುಬಾಟಿ
ಸೋನಂ
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 09, 2024 | 6:30 AM

ಸೋನಂ ಕಪೂರ್ (Sonam Kapoor) ಅವರು ಬಾಲಿವುಡ್​ನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಆದರೆ, ನಟನೆ ಬರುವುದಿಲ್ಲ ಎಂದು ಅನೇಕರು ಅವರನ್ನು ಟೀಕೆ ಮಾಡಿದ್ದಿದೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು ಮದುವೆಯಾಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಮೊದಲು ರಾಣಾ ದಗ್ಗುಬಾಟಿ ನೀಡಿದ್ದ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಹೇಳಿಕೆಯಿಂದ ಸೋನಂ ಕಪೂರ್ ಮರ್ಯಾದಿ ಮೂರು ಕಾಸಿಗೆ ಹರಾಜು ಆಗಿತ್ತು.

ಅದು ದುಲ್ಖರ್ ಸಲ್ಮಾನ್ ನಟನೆಯ ‘ಕಿಂಗ್ ಆಫ್ ಕೋತ್ತಾ’ ಸಿನಿಮಾದ ರಿಲೀಸ್ ಸಂದರ್ಭ. ಈ ಈವೆಂಟ್​ಗೆ ರಾಣಾ ದಗ್ಗುಬಾಟಿ ತೆರಳಿದ್ದರು. ದುಲ್ಖರ್ ಎಷ್ಟು ಸ್ವೀಟ್ ಎಂದು ಹೇಳಲು ಹೋಗಿ ಅವರು ಸೋನಂನ ಮರ್ಯಾದಿ ಹರಾಜು ಹಾಕಿದ್ದರು. ಈ ಹೇಳಿಕೆ ಚರ್ಚೆ ಆದ ಬಳಿಕ ಅವರು ಕ್ಷಮೆ ಕೇಳಿದ್ದರು.

‘ದುಲ್ಖರ್ ಅವರು ನಟನಾ ಸ್ಕೂಲ್​ನಲ್ಲಿ ನನ್ನ ಜೂನಿಯರ್. ನಾವು ಗೆಳೆಯರಾದೆವು. ಅವರು ತುಂಬಾನೇ ತಗ್ಗಿ ನಡೆಯುವ ವ್ಯಕ್ತಿ. ಅವರು ಒಂದು ಹಿಂದಿ ಸಿನಿಮಾ ಮಾಡುತ್ತಿದ್ದರು. ನಿರ್ಮಾಪಕರು ನಾನು ಗೆಳೆಯರು. ಸಿನಿಮಾ ಶೂಟಿಂಗ್ ನಮ್ಮ ಮನೆಯ ಸಮೀಪವೇ ನಡೆಯುತ್ತಿತ್ತು. ಹೀಗಾಗಿಮ ನಾನು ಹೋದೆ. ಅವರು ಸ್ಪಾಟ್ ಬಾಯ್ ಜೊತೆ ಮೂಲೆಯಲ್ಲಿ ನಿಂತಿದ್ದರು’ ಎಂದು ರಾಣಾ ಹಳೆಯ ಘಟನೆ ಬಗ್ಗೆ ವಿವರಿಸಿದ್ದರು.

‘ಒಂದು ದೊಡ್ಡ ಹಿಂದಿ ನಾಯಕಿ ಫೋನ್​ನಲ್ಲಿ ಪತಿಯ ಜೊತೆ ಲಂಡನ್​ನಲ್ಲಿ ಮಾಡಿದ ಶಾಪಿಂಗ್ ವಿಚಾರ ವಿವರಿಸುತ್ತಿದ್ದರು. ಅವರಿಗೆ ಫೋಕಸ್ ಇಲ್ಲದೆ ಇರುವುದು ಶೂಟಿಂಗ್ ಮೇಲೆ ಪರಿಣಾಮ ಬಿದ್ದಿತ್ತು. ಸೆಟ್​ನಲ್ಲಿ ಇರುವವರಿಗೆ ಇದರಿಂದ ಹಿಂಸೆ ಆಗಿತ್ತು. ಆದಾಗ್ಯೂ ದುಲ್ಖರ್ ಮಾತ್ರ ಕೂಲ್ ಆಗಿಯೇ ಇದ್ದರು’ ಎಂದು ದುಲ್ಖರ್ ಅವರನ್ನು ಹಾಡಿ ಹೊಗಳಿದ್ದರು ರಾಣಾ ದಗ್ಗುಬಾಟಿ.

ದುಲ್ಖರ್ ಹಾಗೂ ಸೋನಂ ಒಟ್ಟಾಗಿ ‘ದಿ ಝೋಯಾ ಫ್ಯಾಕ್ಟರ್’ ಚಿತ್ರದಲ್ಲಿ ನಟಿಸಿದ್ದರು. ಅವರು ಎಲ್ಲಿಯೂ ಸೋನಂ ಹೆಸರು ಹೇಳಿಲ್ಲ. ಆದಾಗ್ಯೂ ಜನರಿಗೆ ಅಸಲಿ ವಿಚಾರ ಗೊತ್ತಾಗಿತ್ತು. ಈ ಚಿತ್ರ ಹೀನಾಯವಾಗಿ ಸೋತಿತ್ತು. ಆ ಬಳಿಕ ಎಲ್ಲರೂ ಸೋನಂ ಕಪೂರ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದರು.  ಆ ಬಳಿಕ ಸೋನಂ ಕಪೂರ್ ಬಳಿ ರಾಣಾ ಅವರು ಕ್ಷಮೆ ಕೇಳಿದರು. ಇದು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆ ಅಲ್ಲ ಎಂದಿದ್ದರು.

ಇದನ್ನೂ ಓದಿ: ಸೋನಂ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷಗಳು

ಸೋನಂ ಕಪೂರ್ ಅವರಿಗೆ ಇಂದು (ಜೂನ್ 8) ಜನ್ಮದಿನ. ಅವರಿಗೆ ಇರುವ ಕೆಲವೇ ಕೆಲವು ಫ್ಯಾನ್ಸ್ ಶುಭಾಶಯ ತಿಳಿಸುತ್ತಿದ್ದಾರೆ. ಸೋನಂ ಕಪೂರ್ ಅವರು ಖ್ಯಾತ ನಟ ಅನಿಲ್ ಕಪೂರ್ ಅವರ ಮಗಳು. ಸದ್ಯ ಉದ್ಯಮಿ ಆನಂದ್ ಅಹೂಜಾ ಜೊತೆ ಮದುವೆ ಆಗಿ ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್