Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ನಟಿ ಶಿಲ್ಪಾ ಶೆಟ್ಟಿಗೆ ಈ ಏಳು ಮೂಲಗಳಿಂದ ಬರುತ್ತಿದೆ ಹಣ; ಇಲ್ಲಿದೆ ವಿವರ

ಶಿಲ್ಪಾ ಶೆಟ್ಟಿ ಅವರ ಆಸ್ತಿ 134 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಈ ಮೊದಲು ನಟಿ ಆಗಿದ್ದರು. ಆ ಬಳಿಕ ತಮ್ಮ ಸ್ಮಾರ್ಟ್ ನಿರ್ಧಾರಗಳಿಂದ ಉದ್ಯಮಿ ಎನಿಸಿಕೊಂಡರು. ಅವರಿಗೆ ಬರೋಬ್ಬರಿ ಏಳು ಮೂಲಗಳಿಂದ ಹಣ ಹರಿದು ಬರುತ್ತಿದೆ. ಅವರ ಬಳಿ ದುಬಾರಿ ಕಾರುಗಳಿವೆ. ಅವರ ಪತಿ ರಾಜ್ ಕುಂದ್ರಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ.  

Shilpa Shetty: ನಟಿ ಶಿಲ್ಪಾ ಶೆಟ್ಟಿಗೆ ಈ ಏಳು ಮೂಲಗಳಿಂದ ಬರುತ್ತಿದೆ ಹಣ; ಇಲ್ಲಿದೆ ವಿವರ
ಶಿಲ್ಪಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 08, 2024 | 7:31 AM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರು ನಟಿ ಎನ್ನುವುದಕ್ಕಿಂತ ಉದ್ಯಮಿ ಎಂದು ಅವರನ್ನು ಕರೆಯೋದು ಉತ್ತಮ. ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ರೆಸ್ಟೋರೆಂಟ್​ಗಳನ್ನು ಅವರು ಹೊಂದಿದ್ದಾರೆ. ಇದರ ಜೊತೆಗೆ ಸಿನಿಮಾ ನಟನೆ ಮತ್ತಿತ್ಯಾದಿ ಕಡೆಗಳಿಂದ ಅವರಿಗೆ ಹಣ ಬರುತ್ತಿದೆ. ಇಂದು (ಜೂನ್ 8) ಅವರಿಗೆ ಜನ್ಮದಿನ. ಎಲ್ಲರೂ ಶಿಲ್ಪಾಗೆ ಶುಭಾಶಯ ಕೋರುತ್ತಿದ್ದಾರೆ. ಶಿಲ್ಪಾ ಶೆಟ್ಟಿಗೆ ಬರೋಬ್ಬರಿ ಏಳು ಮೂಲಗಳಿಂದ ಹಣ ಬರುತ್ತಿದೆ.

ಶಿಲ್ಪಾ ಶೆಟ್ಟಿ ಅವರ ಆಸ್ತಿ 134 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಈ ಮೊದಲು ನಟಿ ಆಗಿದ್ದರು. ಆ ಬಳಿಕ ತಮ್ಮ ಸ್ಮಾರ್ಟ್ ನಿರ್ಧಾರಗಳಿಂದ ಉದ್ಯಮಿ ಎನಿಸಿಕೊಂಡರು. ಅವರಿಗೆ ಬರೋಬ್ಬರಿ ಏಳು ಮೂಲಗಳಿಂದ ಹಣ ಹರಿದು ಬರುತ್ತಿದೆ. ಅವರ ಬಳಿ ದುಬಾರಿ ಕಾರುಗಳಿವೆ. ಅವರ ಪತಿ ರಾಜ್ ಕುಂದ್ರಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ.

ವಿಎಫ್​ಎಕ್ಸ್ ಸ್ಟುಡಿಯೋ

2022ರಲ್ಲಿ ಶಿಲ್ಪಾ ಶೆಟ್ಟಿ ಅವರು ವಿಎಫ್​ಎಕ್ಸ್ ಬಿಸ್ನೆಸ್​ ಆರಂಭಿಸಿದರು. ಅವರು ಎಸ್​ವಿಎಸ್ ಸ್ಟುಡಿಯೋ ಜೊತೆ ಕೈ ಜೋಡಿಸಿದರು. ಈ ಉದ್ಯಮದಲ್ಲಿ ಅವರು 10 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ವಿಎಫ್​​ಎಕ್ಸ್​ಗೆ ಸಖತ್ ಬೇಡಿಕೆ ಇದೆ

ರೆಸ್ಟೋರೆಂಟ್ ಚೈನ್

ಬ್ಯಾಸ್ಟಿಯನ್ ರೆಸ್ಟೋರೆಂಟ್ ಚೈನ್​ನ ಶಿಲ್ಪಾ ಹೊಂದಿದ್ದಾರೆ. 2019ರಲ್ಲಿ ಈ ಕಂಪನಿಯ ಶೇ.50 ಷೇರನ್ನು ಖರೀದಿ ಮಾಡಿದರು. ರಾಜ್ನೀತ್ ಬಿಂದ್ರಾ ಅವರು ಇದನ್ನು ಆರಂಭಿಸಿದ್ದರು. ಮುಂಬೈ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಇದರ ಬ್ರ್ಯಾಂಚ್ ಇದೆ.

ಬಟ್ಟೆ ಬ್ರ್ಯಾಂಡ್

ಶಿಲ್ಪಾ ಶೆಟ್ಟಿ ಅವರು ಬಟ್ಟೆ ಬ್ರ್ಯಾಂಡ್ ಕಡೆ ಹೆಚ್ಚು ಒಲವು ತೋರಿದರು. 2020ರಲ್ಲಿ ಅವರು ‘ಡ್ರೀಮ್ ಎಸ್​ಎಸ್​’ ಬಟ್ಟೆ ಬ್ರ್ಯಾಂಡ್ ಆರಂಭಿಸಿದರು. ಫ್ಯಾಷನ್ ಡಿಸೈನರ್ ಚಾರು ಹಾಗೂ ಸಂದೀಪ್ ಅರೋರಾ ಜೊತೆ ಅವರು ಕೈ ಜೋಡಿಸಿದ್ದಾರೆ.

ಫಿಟ್ನೆಸ್ ಆ್ಯಪ್

ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್​ಗೆ ಸಖತ್ ಪ್ರಾಮುಖ್ಯತೆ ನೀಡುತ್ತಾರೆ. ಅವರು ಯೋಗ ಮಾಡುತ್ತಾರೆ. ಅವರು ಸಿಂಪಲ್ ಸೋಲ್​: ಶಿಲ್ಪಾ ಶೆಟ್ಟಿ ಹೆಸರಿನ ಫಿಟ್ನೆಸ್ ಆ್ಯಪ್ ಆರಂಭಿಸಿದರು. ಹಣ ಪಾವತಿಸಿ ಯೋಗ ವೀಕ್ಷಿಸಬಹುದು.

ಬ್ರ್ಯಾಂಡ್ ಪ್ರಚಾರ

ಹಲವು ಬ್ರ್ಯಾಂಡ್​ಗಳಿಗೆ ಶಿಲ್ಪಾ ಶೆಟ್ಟಿ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಹಲವು ಬ್ರ್ಯಾಂಡ್​ಗಳನ್ನು ಶಿಲ್ಪಾ ಪ್ರಚಾರ ಮಾಡುತ್ತಾರೆ. ಇದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಹಣ ಸಿಗುತ್ತಿದೆ.

ಇದನ್ನೂ ಓದಿ: ಮನೆ ಮುಟ್ಟುಗೋಲು ಬೆನ್ನಲ್ಲೇ ಕುಟುಂಬ ಸಮೇತ ದೈವದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ

ಉದ್ಯಮಗಳಲ್ಲಿ ಹೂಡಿಕೆ

ಹಲವು ಉದ್ಯಮಗಳಲ್ಲಿ ಶಿಲ್ಪಾ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಅವರು ಪ್ರತಿ ವರ್ಷ ಲಾಭ ಕಾಣುತ್ತಿದ್ದಾರೆ.

ಸಿನಿಮಾ

ಬಣ್ಣದ ಲೋಕದ ಜೊತೆ ಶಿಲ್ಪಾ ಈಗಲೂ ಸಂಪರ್ಕ ಉಳಿಸಿಕೊಂಡಿದ್ದಾರೆ. ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಅವರು ಜಡ್ಜ್​ ಆಗಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ