ಬುರ್ಜ್ ಖಲೀಫಾ ಮೇಲೆ ಅಡ್ವಾನ್ಸ್ ಬುಕಿಂಗ್ ಶುರು ಮಾಡಿದ ಮೊದಲ ಸಿನಿಮಾ ‘ಚಂದು ಚಾಂಪಿಯನ್’
‘ಚಂದು ಚಾಂಪಿಯನ್’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್ ತುಂಬ ಡಿಫರೆಂಟ್ ಆಗಿರಲಿದೆ. ನಿರ್ದೇಶಕ ಕಬೀರ್ ಖಾನ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇಂದಿನಿಂದ (ಜೂನ್ 9) ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅದು ಕೂಡ ಬುರ್ಜ್ ಖಲೀಫಾ ಮೇಲೆ ಎಂಬುದು ವಿಶೇಷ.
ಸಾಜಿದ್ ನಾಡಿಯದ್ವಾಲ ಮತ್ತು ಕಬೀರ್ ಖಾನ್ ಅವರು ‘ಚಂದು ಚಾಂಪಿಯನ್’ (Chandu Champion) ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಸಕಲ ತಯಾರಿ ನಡೆದಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ (Chandu Champion Advance Booking) ಓಪನ್ ಮಾಡಲಾಗಿದೆ. ವಿಶೇಷ ಏನೆಂದರೆ, ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕುರಿತು ಮಾಹಿತಿ ನೀಡಲು ಈ ಸಿನಿಮಾ ತಂಡ ಒಂದು ವಿಶೇಷ ದಾರಿಯನ್ನು ಅನುಸರಿಸಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಹೊಂದಿರುವ ಬುರ್ಜ್ ಖಲೀಫಾ (Burj Khalifa) ಮೇಲೆ ‘ಚಂದು ಚಾಂಪಿಯನ್’ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕುರಿತು ಮಾಹಿತಿ ಬಿತ್ತರಿಸಲಾಗಿದೆ.
ಬುರ್ಜ್ ಖಲೀಫಾ ಮೇಲೆ ಸಿನಿಮಾಗಳ ಪ್ರಚಾರ ಮಾಡುವುದು ಹೊಸದೇನೂ ಅಲ್ಲ. ಈಗಾಗಲೇ ‘ವಿಕ್ರಾಂತ್ ರೋಣ’ ಸೇರಿದಂತೆ ಅನೇಕ ಸಿನಿಮಾಗಳ ಪ್ರಮೋಷನ್ ಕಂಟೆಂಟ್ಗಳನ್ನು ಬಿತ್ತರಿಸಲಾಗಿತ್ತು. ಆದರೆ ಅವೆಲ್ಲವೂ ಟೀಸರ್, ಟ್ರೇಲರ್, ಫಸ್ಟ್ ಲುಕ್ ಇತ್ಯಾದಿ ಆಗಿದ್ದವು. ಇದೇ ಮೊದಲ ಬಾರಿಗೆ ‘ಚಂದು ಚಾಂಪಿಯನ್’ ಸಿನಿಮಾ ತಂಡದವರು ಮುಂಗಡ ಟಿಕೆಟ್ ಬುಕಿಂಗ್ ಬಗ್ಗೆ ಮಾಹಿತಿ ಬಿತ್ತರಿಸುವ ಮೂಲಕ ಹೊಸತನ ತೋರಿದ್ದಾರೆ.
View this post on Instagram
ಕಾರ್ತಿಕ್ ಆರ್ಯನ್ ಅವರು ‘ಚಂದು ಚಾಂಪಿಯನ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಗೆಟಪ್ ತುಂಬ ಡಿಫರೆಂಟ್ ಆಗಿರಲಿದೆ. ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದ್ದು ಪ್ರೇಕ್ಷಕರ ಕೌತುಕ ಕೆರಳಿಸಿದೆ. ಇಂದಿನಿಂದ (ಜೂನ್ 9) ಬುಕಿಂಗ್ ಶುರುವಾಗಿದೆ. ಬುರ್ಜ್ ಖಲೀಫಾ ಮೇಲೆ ಬುಕಿಂಗ್ ವಿವರ ಹಂಚಿಕೊಂಡ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: ಬರ್ತ್ಡೇ ದಿನ ಬುರ್ಜ್ ಖಲೀಫಾ ಮೇಲೆ ಮೂಡಿತು ಶಾರುಖ್ ಫೋಟೋ; ವೈರಲ್ ಆಯ್ತು ವಿಡಿಯೋ
ಜೂನ್ 14ರಂದು ‘ಚಂದು ಚಾಂಪಿಯನ್’ ಸಿನಿಮಾ ಬಿಡುಗಡೆ ಆಗಲಿದೆ. ಕಾರ್ತಿಕ್ ಆರ್ಯನ್ ಅವರ ವೃತ್ತಿ ಜೀವನದಲ್ಲಿ ಇದು ತುಂಬ ಮಹತ್ವದ ಸಿನಿಮಾ ಆಗಿರಲಿದೆ. ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಪ್ಯಾರಾಲೆಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮುರಳಿಕಾಂತ್ ಪೇಟ್ಕರ್ ಅವರ ಜೀವನದ ಕುರಿತು ಈ ಸಿನಿಮಾ ಇದೆ. ಕಬೀರ್ ಖಾನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.