‘ಗಿಲ್ಲಿ’ ನಟಿ ರಕುಲ್​ ಪ್ರೀತ್​ ಸಿಂಗ್​ ಮದುವೆ ದಿನಾಂಕ ನಿಗದಿ; ಇಲ್ಲಿದೆ ವರನ ಬಗ್ಗೆ ಮಾಹಿತಿ

|

Updated on: Jan 01, 2024 | 3:34 PM

ಗೋವಾದಲ್ಲಿ ರಕುಲ್​ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಮದುವೆ ಆಗಲಿದ್ದಾರೆ. ವಿವಾಹಕ್ಕೆ ಕೆಲವೇ ಕೆಲವು ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು. ಮದುವೆ ಸಲುವಾಗಿ ಈಗಾಗಲೇ ಅವರಿಬ್ಬರು ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದುಕೊಂಡಿದ್ದಾರೆ. ಗೆಳೆಯರ ಜೊತೆ ಬ್ಯಾಚುಲರ್​ ಪಾರ್ಟಿ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.

‘ಗಿಲ್ಲಿ’ ನಟಿ ರಕುಲ್​ ಪ್ರೀತ್​ ಸಿಂಗ್​ ಮದುವೆ ದಿನಾಂಕ ನಿಗದಿ; ಇಲ್ಲಿದೆ ವರನ ಬಗ್ಗೆ ಮಾಹಿತಿ
ರಕುಲ್​ ಪ್ರೀತ್​ ಸಿಂಗ್​​, ಜಾಕಿ ಭಗ್ನಾನಿ
Follow us on

ಖ್ಯಾತ ನಟಿ ರಕುಲ್ ಪ್ರೀತ್​ ಸಿಂಗ್​ (Rakul Preet Singh) ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೊಸ ವರ್ಷದ ಖುಷಿಯ ನಡುವೆ ನಟಿಯ ಬಗ್ಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಫೆಬ್ರವರಿ 22ರಂದು ಅವರು ಮದುವೆ (Rakul Preet Singh Marriage) ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ‘ಗಿಲ್ಲಿ’ ಚಿತ್ರದಿಂದ ರಕುಲ್​ ಪ್ರೀತ್​ ಸಿಂಗ್​ ಅವರು ವೃತ್ತಿಜೀವನ ಆರಂಭಿಸಿದರು. ಆ ಬಳಿಕ ಅವರಿಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಸೃಷ್ಟಿ ಆಯಿತು. ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ರಕುಲ್​ ಪ್ರೀತ್​ ಸಿಂಗ್ ವೈವಾಹಿಕ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

ನಟನಾಗಿ, ನಿರ್ಮಾಪಕನಾಗಿ ಜಾಕಿ ಭಗ್ನಾನಿ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ಫಾಲ್ತು’, ‘ಅಜಬ್​ ಗಜಬ್​ ಲವ್​’, ‘ವೆಲ್​ಕಮ್​ ಟು ಕರಾಚಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಸರಬ್ಜಿತ್​’, ‘ಮಿಷನ್​ ರಾಣಿಗಂಜ್​’, ‘ಕೂಲಿ ನಂ.1’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಜೊತೆ ರಕುಲ್​ ಪ್ರೀತ್​ ಸಿಂಗ್​ಗೆ ಪ್ರೀತಿ ಚಿಗುರಿದೆ.

ಹಲವು ತಿಂಗಳಿಂದ ರಕುಲ್​ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಅವರು ಒಟ್ಟಾಗಿ ತಿರುಗಾಡುತ್ತಿದ್ದಾರೆ. ಆ ಬಳಿಕ ಅವರು ಇನ್​ಸ್ಟಾಗ್ರಾಮ್​ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೇಮ್​ ಕಹಾನಿಯ ವಿಚಾರವನ್ನು ಜಗಜ್ಜಾಹೀರು ಮಾಡಿದರು. ಈಗ ಅವರಿಬ್ಬರು ಮದುವೆಗೆ ತಯಾರಾಗಿದ್ದಾರೆ. ಆ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ನಟಿ ರಕುಲ್ ಪ್ರೀತ್​ ಸಿಂಗ್​ರ ಬಾಯ್​ಫ್ರೆಂಡ್ ಜಾಕಿ ಬಗ್ನಾನಿ ಬಗ್ಗೆ ನಿಮಗೆಷ್ಟು ಗೊತ್ತು?

ಗೋವಾದಲ್ಲಿ ರಕುಲ್​ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಮದುವೆ ಆಗಲಿದ್ದಾರೆ. ಈ ಸೆಲೆಬ್ರಿಟಿ ವಿವಾಹಕ್ಕೆ ಕೆಲವೇ ಕೆಲವು ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು. ಮದುವೆ ಸಲುವಾಗಿ ಈಗಾಗಲೇ ಇವರಿಬ್ಬರು ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದುಕೊಂಡಿದ್ದಾರೆ. ಗೆಳೆಯರ ಜೊತೆ ಬ್ಯಾಚುಲರ್​ ಪಾರ್ಟಿ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಮದುವೆ ದಿನಾಂಕ ಮತ್ತು ಸ್ಥಳದ ಬಗ್ಗೆ ಅವರಿಂದಲೇ ಅಧಿಕೃತ ಹೇಳಿಕೆ ಹೊರಬೀಳುವುದು ಬಾಕಿ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.