ಒಂದು ಒಳ್ಳೆಯ ಕಾರಣಕ್ಕೆ ಮದುವೆಯಲ್ಲಿ ಆ ಪದ್ಧತಿಯೇ ಬೇಡ ಎಂದ ರಕುಲ್ ಪ್ರೀತ್ ಸಿಂಗ್

|

Updated on: Feb 14, 2024 | 7:42 AM

Rakul Preet Singh: ರಕುಲ್ ಪ್ರೀತ್ ಸಿಂಗ್ ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ಗ್ಲಾಮರ್ ಮೂಲಕ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಈಗ ಅವರು ವಿವಾಹ ಆಗುತ್ತಿರುವುದು ಫ್ಯಾನ್ಸ್ಗೆ ಖುಷಿ ನೀಡಿದೆ.

ಒಂದು ಒಳ್ಳೆಯ ಕಾರಣಕ್ಕೆ ಮದುವೆಯಲ್ಲಿ ಆ ಪದ್ಧತಿಯೇ ಬೇಡ ಎಂದ ರಕುಲ್ ಪ್ರೀತ್ ಸಿಂಗ್
ರಕುಲ್
Follow us on

ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಮದುವೆ ಫೆಬ್ರವರಿ 21ರಂದು ಅದ್ದೂರಿಯಾಗಿ ನೆರವೇರಲಿದೆ. ಈ ಜೋಡಿ ಗೋವಾನ ಆಯ್ಕೆ ಮಾಡಿಕೊಂಡಿದೆ. ಸಮುದ್ರ ತೀರದಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಆಮಂತ್ರಣಪತ್ರ ವೈರಲ್ ಆಗಿದ್ದು, ಅದರಲ್ಲಿ ಸಮುದ್ರವನ್ನು ಕಾಣಬಹುದು. ಫೆಬ್ರವರಿ 19ರಿಂದಲೇ ಮದುವೆ ಸಂಪ್ರದಾಯ ಆರಂಭ ಆಗಲಿವೆ. ರಕುಲ್ ಪ್ರೀತ್ ಸಿಂಗ್ ಅವರು ಒಂದು ಒಳ್ಳೆಯ ಕಾರಣಕ್ಕೆ ಪಟಾಕಿ ಸಿಡಿಸೋ ಪದ್ಧತಿ ಬೇಡ ಎಂದು ಹೇಳಿದ್ದಾರೆ. ಅವರ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಗ್ಲಾಮರ್ ಮೂಲಕ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಈಗ ಅವರು ವಿವಾಹ ಆಗುತ್ತಿರುವುದು ಫ್ಯಾನ್ಸ್​ಗೆ ಖುಷಿ ನೀಡಿದೆ. ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಆಗಾಗ ಇವರು ವಿದೇಶ ಸುತ್ತಿದ್ದೂ ಇದೆ. ಈಗ ಇವರು ಪ್ರೀತಿಗೆ ಹೊಸ ಅರ್ಥ ನೀಡುತ್ತಿದ್ದಾರೆ.

ದೊಡ್ಡ ಸೆಲೆಬ್ರಿಟಿಗಳ ಮದುವೆ ಎಂದರೆ ಅಲ್ಲಿ ಪಟಾಕಿ ಸಿಡಿಸೋದು ಇದ್ದೇ ಇರುತ್ತದೆ. ನಾನಾ ರೀತಿಯ ಪಟಾಕಿಗಳನ್ನು ಸಿಡಿಸಿ ಕಣ್ಣಿಗೆ ತಂಪು ನೀಡಲಾಗುತ್ತದೆ. ಈ ರೀತಿ ಪಟಾಕಿ ಸಿಡಿಸುವುದರಿಂದ ಗಾಳಿಗೆ ಸಾಕಷ್ಟು ವಿಷಾನಿಲಗಳು ಸೇರಿಕೊಳ್ಳುತ್ತವೆ. ಈ ಕಾರಣಕ್ಕೆ ಪಟಾಕಿ ಬೇಡ ಎಂದು ಅವರು ನಿರ್ಧರಿಸಿದ್ದಾರೆ. ಊಟದ ವಿಚಾರದಲ್ಲೂ ಕೆಲವು ನಿಯಮಗಳನ್ನು ತರಲು ಅವರು ಮುಂದಾಗಿದ್ದಾರೆ. ಯಾರೂ ಊಟವನ್ನು ಚೆಲ್ಲದಂತೆ ವಿಶೇಷ ಸೂಚನೆ ಹಾಕಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಮದುವೆ ಆಮಂತ್ರಣ ಪತ್ರ ನೋಡಿ

ಇನ್ನು, ರಕುಲ್ ಅವರು ಯಾವುದೇ ಆಮಂತ್ರಣ ಪತ್ರವನ್ನು ಪ್ರಿಂಟ್ ಮಾಡಿಲ್ಲ. ಬದಲಿಗೆ ಡಿಜಿಟಲ್ ಆಮಂತ್ರಣಪತ್ರ ಸಿದ್ಧಪಡಿಸಿ ಅದನ್ನು ನೀಡಲಾಗಿದೆ. ಎಲ್ಲರಿಗೂ ಇದರಲ್ಲೇ ಆಹ್ವಾನ ನೀಡಲಾಗುತ್ತಿದೆ. ಈ ಮೂಲಕ ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಸದ್ಯ ರಕುಲ್ ನಿರ್ಧಾರವನ್ನು ಅನೇಕರು ಹೊಗಳಿದ್ದಾರೆ. ಮುಂದೆ ಮದುವೆ ಆಗೋ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯರು ಇದನ್ನು ಪಾಲಿಸಬೇಕು ಎನ್ನುವ ಸಂದೇಶವನ್ನು ಅವರು ನೀಡಿದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ