ರಾಮನ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಸೆಲೆಬ್ರಿಟಿಗಳು ರಿಯಾಕ್ಟ್ ಮಾಡಿದ್ದು ಹೇಗೆ? ಇಲ್ಲಿದೆ ವಿವರ

|

Updated on: Jan 24, 2024 | 11:47 AM

ಜನವರಿ 22ರಂದು ರಾಮ ಪ್ರತಿಷ್ಠೆ ಕಾರ್ಯಕ್ರಮ ನಡೆಯಿತು. ರಣಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮೊದಲಾದವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಾನಾ ಸೆಲೆಬ್ರಿಟಿಗಳು ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ.

ರಾಮನ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಸೆಲೆಬ್ರಿಟಿಗಳು ರಿಯಾಕ್ಟ್ ಮಾಡಿದ್ದು ಹೇಗೆ? ಇಲ್ಲಿದೆ ವಿವರ
ರಾಮಲಲ್ಲಾ
Follow us on

ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಬಾಲಿವುಡ್​ ಸ್ಟಾರ್ ಕಲಾವಿದರಾದ ರಣಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮೊದಲಾದವರು ಈ ಕಾರ್ಯಕ್ರಮ ಕಣ್ತುಂಬಿಕೊಂಡರು. ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

ಜನವರಿ 22ರಂದು ರಾಮ ಪ್ರತಿಷ್ಠೆ ಕಾರ್ಯಕ್ರಮ ನಡೆಯಿತು. ಇದನ್ನು ಲೈವ್ ಪ್ರಸಾರ ಮಾಡಲಾಯಿತು. ಇದನ್ನು ಕೋಟ್ಯಂತರ ಮಂದಿ ಕಣ್ತುಂಬಿಕೊಂಡರು. ಇದಕ್ಕೆ ನಾನಾ ಸೆಲೆಬ್ರಿಟಿಗಳು ರಿಯಾಕ್ಟ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.

‘ಈ ಕ್ಷಣ ತುಂಬಾ ಸುಂದರವಾಗಿತ್ತು. ಜೀವನದಲ್ಲಿ ಒಮ್ಮೆ ಮಾತ್ರ ನೋಡುವ ಕ್ಷಣ’ ಎಂದು ರಾಮ್ ಚರಣ್ ಹೇಳಿದ್ದಾರೆ. ಆಯುಷ್ಮಾನ್ ಖುರಾನಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಇದು ಐತಿಹಾಸಿಕ ಘಟನೆ. ಆಮಂತ್ರಣ ನೀಡಿದ್ದಕ್ಕೆ ನಿಜಕ್ಕೂ ಧನ್ಯವಾದ. ಎಲ್ಲರೂ ಇಲ್ಲಿಗೆ ಭೇಟಿ ನೀಡಬೇಕು’ ಎಂದಿದ್ದಾರೆ ಆಯುಷ್ಮಾನ್ ಖುರಾನಾ.

ಹಿರಿಯ ನಟ ಜಾಕಿ ಶ್ರಾಫ್ ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಸಾಕಷ್ಟು ಖುಷಿಪಟ್ಟಿದ್ದಾರೆ. ‘ಆಶೀರ್ವಾದ ಸಿಕ್ಕಿದೆ. ಅದೃಷ್ಟ ಇರೋದಕ್ಕೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿತು. ರಾಮ ಮಂದಿರಕ್ಕೆ ಆಹ್ವಾನ ನೀಡಿದ ಬಗ್ಗೆ ಖುಷಿ ಇದೆ’ ಎಂದಿದ್ದಾರೆ ಅವರು. ವಿವೇಕ್ ಒಬೆರಾಯ್ ಅವರು ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಬಗ್ಗೆ ಖುಷಿ ಹೊರಹಾಕಿದ್ದಾರೆ. ‘ರಾಮನ ನೋಡಿ ಭಾವುಕನಾದೆ. ರಾಮ ಸಾಕಷ್ಟು ಸುಂದರವಾಗಿ ಕಾಣುತ್ತಿದ್ದಾನೆ. ಕಣ್ಣಲ್ಲಿ ಪ್ರೀತಿ ಕಂಡಿತು. ಯಾವಾಗಲೂ ಆಹ್ವಾನ ಸಿಗುತ್ತಿರಲಿ ಎಂದು ಕೇಳಿಕೊಂಡೆ’ ಎಂದಿದ್ದಾರೆ ವಿವೇಕ್ ಒಬೆರಾಯ್.

ಇದನ್ನೂ ಓದಿ: Ayodhya Hill: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನವೇ ಬಂಗಾಳದಲ್ಲಿ ಸೀತಾರಾಮ ಮಂದಿರ ನಿರ್ಮಿಸಲು ಸಂಕಲ್ಪ ಪೂಜೆ

ಚಿರಂಜೀವಿ ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಮಾತನಾಡಿದ್ದಾರೆ. ‘ಅದ್ಭುತ ಅನುಭವ’ ಎಂದು ಅವರು ಹೇಳಿಕೊಂಡಿದ್ದಾರೆ. ಪವನ್ ಕಲ್ಯಾಣ್ ಕೂಡ ‘ಭಾವನಾತ್ಮಕ ಕ್ಷಣ. ಹಲವು ವರ್ಷಗಳ ಕನಸು ಈಡೇರಿದೆ. ಇದು ಶಕ್ತಿ ನೀಡಿದೆ’ ಎಂದು ಟಾಲಿವುಡ್​ ನಟ ಹಾಗೂ ರಾಜಕೀಯ ನಾಯಕ ಪವನ್ ಕಲ್ಯಾಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:35 am, Wed, 24 January 24