‘ರಾಮಾಯಣ’ (Ramayana Movie) ಹಾಗೂ ‘ಮಹಾ ಭಾರತ’ ಮಹಾಕಾವ್ಯ ಆಧರಿಸಿ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಹಲವು ಧಾರಾವಾಹಿಗಳು ಬಂದಿವೆ. ಹೀಗಿದ್ದರೂ ಇವುಗಳನ್ನು ಆಧರಿಸಿ ಸಿನಿಮಾ, ಸೀರಿಸ್ ಮಾಡೋದು ನಿಂತಿಲ್ಲ. ಹೊಸ ಹೊಸ ತಂತ್ರಜ್ಞಾನಗಳ ಬಳಕೆಯೊಂದಿಗೆ ‘ರಾಮಾಯಣ’ ಮಾಡಲಾಗುತ್ತಿದೆ. ಈಗ ಬಾಲಿವುಡ್ನಲ್ಲಿ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಶೂಟಿಂಗ್ ಕೂಡ ಆರಂಭ ಆಗಿದೆ. ಇದಕ್ಕಾಗಿ ದೊಡ್ಡ ದೊಡ್ಡ ಸೆಟ್ಗಳನ್ನು ಹಾಕಲಾಗಿದೆ. ಈ ಫೋಟೋ ಲೀಕ್ ಆಗಿದೆ.
‘ರಾಮಾಯಣ’ ಸೀರಿಸ್ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್ನಲ್ಲಿ ಆಗಲಿದೆಯಂತೆ. ಈಗ ಸೆಟ್ನ ಫೋಟೋಗಳು ವೈರಲ್ ಆಗಿವೆ.
Ramayana part 1- started the shoot yesterday
byu/Glad-Ad5911 inBollyBlindsNGossip
ಮಂಗಳವಾರ (ಏಪ್ರಿಲ್ 3) ‘ರಾಮಾಯಣ’ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಈ ಚಿತ್ರಕ್ಕೆ ಮುಂಬೈನಲ್ಲಿ ಬೃಹತ್ ಸೆಟ್ಗಳನ್ನು ಹಾಕಲಾಗಿದೆ. ಪೂಜೆ ನಡೆಸಿ ನಂತರ ಶೂಟ್ ಆರಂಭಿಸಲಾಗಿದೆ. ಸದ್ಯ ಸಣ್ಣ ಪುಟ್ಟ ಪಾತ್ರಗಳ ಶೂಟಿಂಗ್ ನಡೆಯುತ್ತಿದೆ. ಶೀಘ್ರವೇ ರಣಬೀರ್ ಕಪೂರ್ ಅವರು ಸೆಟ್ನ ಸೇರಿಕೊಳ್ಳಲಿದ್ದಾರೆ. ಈಗ ವೈರಲ್ ಆಗಿರೋ ಸೆಟ್ನ ಫೋಟೋ ಹೊರಗಿನಿಂದ ತೆಗೆದ ಫೋಟೋ ಆಗಿದೆ. ಒಳ ಭಾಗದಲ್ಲಿ ಯಾವ ರೀತಿಯಲ್ಲಿ ಇದೆ ಎಂಬ ವಿಚಾರ ರಿವೀಲ್ ಮಾಡಲಾಗಿಲ್ಲ.
ಇದನ್ನೂ ಓದಿ: ರಾಮಾಯಣ ಸಿನಿಮಾದ ಶೂಟಿಂಗ್ ಶುರು: ಮೊದಲು ಚಿತ್ರೀಕರಣಕ್ಕೆ ಬರೋದು ಯಾರು?
‘ರಾಮಾಯಣ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ‘ಆದಿಪುರುಷ್’ ಸಿನಿಮಾ ರಿಲೀಸ್ ಮಾಡಿ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಹೀಗಾಗಿ ನಿತೇಶ್ ತಿವಾರಿ ಅವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ