AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣಕ್ಕೆ ಬೆಲೆ ಕಟ್ಟಲಾಗದು, ನಾವು ಲಾಭ-ನಷ್ಟ ನೋಡಲ್ಲ’; ನಮಿತ್ ಮಲ್ಹೋತ್ರ

ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ 'ರಾಮಾಯಣ' ಸಿನಿಮಾದ ಗಳಿಕೆ ಬಗ್ಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ. ಮೊದಲ ಭಾಗಕ್ಕೆ ನಿರೀಕ್ಷಿತ ಹಣ ಬರದಿದ್ದರೂ ಎರಡನೇ ಭಾಗವು ಆ ನಷ್ಟವನ್ನು ತುಂಬಿಕೊಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗೆ ಸಾಲ ಮಾಡಿಲ್ಲ ಎಂದಿದ್ದಾರೆ.

‘ರಾಮಾಯಣಕ್ಕೆ ಬೆಲೆ ಕಟ್ಟಲಾಗದು, ನಾವು ಲಾಭ-ನಷ್ಟ ನೋಡಲ್ಲ’; ನಮಿತ್ ಮಲ್ಹೋತ್ರ
ರಾಮಾಯಣ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 13, 2026 | 7:46 AM

Share

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದು ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ಈ ಸಿನಿಮಾಗೆ ಸುಮಾರು 4,000 ಕೋಟಿ ರೂಪಾಯಿ ಬಜೆಟ್ ಹೂಡಲಾಗಿದೆ. ಹೀಗಾಗಿ ಹಾಕಿದ ಬಂಡವಾಳ ವಾಪಸ್ ಬರುತ್ತದೆಯೇ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಸ್ಪಷ್ಟ ಉತ್ತರ ನೀಡಿದ್ದಾರೆ.

ಸಿನಿಮಾದ ಬಜೆಟ್ ಹಾಗೂ ಕಲೆಕ್ಷನ್ ಲೆಕ್ಕಾಚಾರದ ಬಗ್ಗೆ ನಮಿತ್ ಮಲ್ಹೋತ್ರಾ ಮಾತನಾಡಿದ್ದಾರೆ. ಬಿಬಿಸಿ ಏಷ್ಯನ್ ನೆಟ್‌ವರ್ಕ್ ಜೊತೆಗಿನ ಸಂದರ್ಶನದಲ್ಲಿ ಅವರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಮೊದಲ ಭಾಗಕ್ಕೆ ನಿರೀಕ್ಷಿತ ಗಳಿಕೆ ಬರದಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ ಎಂದು ಅವರು ಹೇಳಿದ್ದಾರೆ. ಎರಡನೇ ಭಾಗವು ಆ ಎಲ್ಲಾ ಕೊರತೆಯನ್ನು ತುಂಬಿಕೊಡಲಿದೆ ಎಂಬ ಭರವಸೆಯನ್ನು ನಮಿತ್ ವ್ಯಕ್ತಪಡಿಸಿದ್ದಾರೆ.

ರಾಮಾಯಣ ಕೇವಲ ವ್ಯಾಪಾರದ ದೃಷ್ಟಿಯಿಂದ ಮಾಡಿದ ಸಿನಿಮಾವಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸಿನಿಮಾ ಕೂಡ ಜಾಗತಿಕ ಮಟ್ಟದ ದೊಡ್ಡ ಚಿತ್ರಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲದು ಎಂಬುದನ್ನು ತೋರಿಸುವುದು ಅವರ ಉದ್ದೇಶವಾಗಿದೆ. ತಾಜ್ ಮಹಲ್‌ಗೆ ಬೆಲೆ ಕಟ್ಟಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ರಾಮಾಯಣಕ್ಕೂ ಕೇವಲ ಹಣದ ಲೆಕ್ಕಾಚಾರ ಹಾಕುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಭಾಗಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕರೆ ಸಾಕು ಎಂದು ನಮಿತ್ ಹೇಳಿದ್ದಾರೆ. ಎರಡನೇ ಭಾಗವು ಮೊದಲ ಭಾಗಕ್ಕಿಂತ ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ. ಹೀಗಾಗಿ ಎರಡೂ ಭಾಗಗಳ ಬಿಡುಗಡೆಯ ನಂತರವಷ್ಟೇ ವಾಣಿಜ್ಯ ಲಾಭದ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮರ್ಚಂಡೈಸ್ ಹಾಗೂ ಥೀಮ್ ಪಾರ್ಕ್‌ಗಳ ಮೂಲಕವೂ ಹಣ ಗಳಿಸುವ ಯೋಜನೆ ಅವರ ಮುಂದಿದೆ.

ಇದನ್ನೂ ಓದಿ: ‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರ

ಈ ಸಿನಿಮಾಗಾಗಿ ತಾವು ಯಾರಿಂದಲೂ ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ ಎಂದು ನಮಿತ್ ಹೇಳಿಕೊಂಡಿದ್ದಾರೆ. ಇತ್ತ ಚಿತ್ರದಲ್ಲಿ ರಾವಣನಾಗಿ ನಟಿಸಿರುವ ಯಶ್ ಕೂಡ 4,000 ಕೋಟಿ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ವಿದೇಶಗಳಲ್ಲಿ ನಮ್ಮ ಸಿನಿಮಾಗಳಿಗೆ ತಕ್ಕ ಗೌರವ ಸಿಗಬೇಕಾದರೆ ಬಜೆಟ್ ಬಗ್ಗೆ ಧೈರ್ಯವಾಗಿ ಹೇಳಿಕೊಳ್ಳಬೇಕು ಎಂದು ಯಶ್ ತಿಳಿಸಿದ್ದಾರೆ. ಸದ್ಯ ‘ರಾಮಾಯಣ ಪಾರ್ಟ್ 2’ ಸಿನಿಮಾ 2028ರ ದೀಪಾವಳಿಗೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು