ರಣಬೀರ್​ ಕಪೂರ್​ ಹೊಸ ಲುಕ್ ವೈರಲ್; ‘ಧೂಮ್​ 4’ ಸಿನಿಮಾ ಟಾಕ್​ ಶುರು

|

Updated on: Oct 15, 2024 | 4:49 PM

ಒಂದೆಡೆ ‘ಧೂಮ್​ 4’ ಸಿನಿಮಾಗೆ ತಯಾರಿ ನಡೆಯುತ್ತಿದೆ. ಇನ್ನೊಂದೆಡೆ ರಣಬೀರ್​ ಕಪೂರ್ ಅವರ ಹೊಸ ಲುಕ್​ ವೈರಲ್​ ಆಗುತ್ತಿದೆ. ‘ಧೂಮ್​ 4’ ಸಿನಿಮಾ ಸಲುವಾಗಿಯೇ ಅವರು ಹೊಸ ಗೆಟಪ್​ ಮಾಡಿಕೊಂಡಿದ್ದಾರೆ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. ‘ಅನಿಮಲ್’ ಸಕ್ಸಸ್ ಬಳಿಕ ರಣಬೀರ್​ ಕಪೂರ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ರಣಬೀರ್​ ಕಪೂರ್​ ಹೊಸ ಲುಕ್ ವೈರಲ್; ‘ಧೂಮ್​ 4’ ಸಿನಿಮಾ ಟಾಕ್​ ಶುರು
ರಣಬೀರ್​ ಕಪೂರ್
Follow us on

ನಟ ರಣಬೀರ್​ ಕಪೂರ್​ ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಅವರು ನಟಸಿದ ‘ಅನಿಮಲ್’ ಸಿನಿಮಾ ಕಳೆದ ವರ್ಷ ಭರ್ಜರಿ ಸದ್ದು ಮಾಡಿತ್ತು. ಈಗ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಆಫರ್​ಗಳು ಅವರಿಗೆ ಸಿಗುತ್ತಿವೆ. ಈ ನಡುವೆ ಅವರ ಹೊಸ ಲುಕ್​ ವೈರಲ್​ ಆಗಿದೆ. ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಆಲಿಮ್ ಹಕಿಮ್ ಅವರು ಈ ಕೇಶ ವಿನ್ಯಾಸ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಲು ಆರಂಭಿಸಿದ್ದಾರೆ.

ರಣಬೀರ್​ ಕಪೂರ್​ ಅವರ ಫ್ಯಾನ್ಸ್ ಪೇಜ್​ಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಅವರು ಈ ಹೊಸ ಹೇರ್​ ಸ್ಟೈಲ್​ ಮಾಡಿಕೊಂಡಿರುವುದು ಮುಂಬರುವ ಸಿನಿಮಾಗಳ ಸಲುವಾಗಿ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ‘ಅನಿಮಲ್​ ಪಾರ್ಕ್​ ಸಿನಿಮಾಗಾಗಿ ಈ ಲುಕ್​’ ಎಂದು ಕೆಲವರು ಹೇಳಿದ್ದರೆ, ‘ಧೂಮ್ 4 ಚಿತ್ರಕ್ಕಾಗಿ ಈ ಗೆಟಪ್’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

‘ಧೂಮ್​’, ‘ಧೂಮ್​ 2’ ಹಾಗೂ ‘ಧೂಮ್​ 3’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಮೊದಲ ಸಿನಿಮಾದಲ್ಲಿ ಜಾನ್​ ಅಬ್ರಾಹಂ, ಎರಡನೇ ಸಿನಿಮಾದಲ್ಲಿ ಹೃತಿಕ್​ ರೋಷನ್​ ಹಾಗೂ ಮೂರನೇ ಸಿನಿಮಾದಲ್ಲಿ ಆಮಿರ್ ಖಾನ್​ ಅವರು ವಿಲನ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ‘ಧೂಮ್​ 4’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡುವ ಅವಕಾಶ ರಣಬೀರ್​ ಕಪೂರ್​ ಅವರಿಗೆ ಸಿಗಲಿದೆ ಎಂದು ಹೇಳಾಗುತ್ತಿದೆ.

ಇದನ್ನೂ ಓದಿ: ರಣಬೀರ್​ನ ಮದುವೆ ಆಗ್ತೀನಿ ಎಂದಿದ್ದ ಸಾರಾ; ನಟನ ವಿವಾಹದ ಬಳಿಕ ಏನಂದ್ರು?

ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಪ್ರತಿಭೆ ರಣಬೀರ್​ ಕಪೂರ್​ ಅವರಲ್ಲಿದೆ. ಲವರ್​ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಂತರ ಮಾಸ್​ ಪಾತ್ರಗಳನ್ನು ಮಾಡಿ ಜನಮನ ಗೆದ್ದರು. ‘ಅನಿಮಲ್’ ಸಿನಿಮಾದಲ್ಲಿ ತುಂಬ ರಗಡ್​ ಆದಂತಹ ಪಾತ್ರಕ್ಕೆ ಬಣ್ಣ ಹಚ್ಚಿದ ನಂತರ ಅವರಿಗೆ ರಾಮನ ಪಾತ್ರ ಮಾಡುವ ಅವಕಾಶವನ್ನು ‘ರಾಮಾಯಣ’ ಸಿನಿಮಾದಲ್ಲಿ ನೀಡಲಾಗುತ್ತಿದೆ. ಆ ಬಗ್ಗೆ ಕಂಗನಾ ರಣಾವತ್ ಅವರು ವಿರೋಧ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.