ನಟ ರಣಬೀರ್ ಕಪೂರ್ (Ranbir Kapoor) ಅವರು ಹಲವು ನಟಿಯರ ಜೊತೆ ರಿಲೇಷನ್ಶಿಪ್ ಹೊಂದಿದ್ದರು. ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಜೊತೆ ಅವರ ಲವ್ವಿ ಡವ್ವಿ ನಡೆದಿತ್ತು. ಆದರೆ ಕಡೆಗೆ ಅವರು ಮದುವೆ ಆಗಿದ್ದು ಆಲಿಯಾ ಭಟ್ (Alia Bhatt) ಜೊತೆ. ಅಚ್ಚರಿ ಎಂದರೆ ಮದುವೆ ದಿನವೇ ಆಲಿಯಾ ಭಟ್ ಅವರ ಸಹೋದರಿಯರು ಬಂದು ರಣಬೀರ್ ಕಪೂರ್ ಬಳಿಕ ಕೋಟ್ಯಂತರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು! ಈ ಬಗ್ಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ (The Great Indian Kapil Show) ಕಾರ್ಯಕ್ರಮದಲ್ಲಿ ಪ್ರಸ್ತಾಪ ಆಗಿದೆ. ಆ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಾರೆ. ಆ ದಿನ ಏನು ನಡೆಯಿತು ಎಂಬುದನ್ನು ವಿವರಿಸಿದ್ದಾರೆ.
ಉತ್ತರ ಭಾರತದಲ್ಲಿ ಮದುವೆಯ ದಿನ ಗಂಡಿನ ಚಪ್ಪಲಿಯನ್ನು ಹೆಣ್ಣಿನ ಕಡೆಯವರು ಕದಿಯುವ ಶಾಸ್ತ್ರ ಇದೆ. ಇದಕ್ಕೆ ‘ಜೂತಾ ಚುರಾಯಿ’ ಎನ್ನುತ್ತಾರೆ. ಕಳ್ಳತನ ಆಗಿರುವ ಚಪ್ಪಲಿಯನ್ನು ಮದುಮಗ ಹುಡುಕಬೇಕು. ಒಂದು ವೇಳೆ ಸಿಗದಿದ್ದರೆ ಹೆಣ್ಣಿನ ಕಡೆಯವರು ಡಿಮ್ಯಾಂಡ್ ಮಾಡಿದಷ್ಟು ಹಣವನ್ನು ಕೊಟ್ಟು ಆತ ತನ್ನ ಚಪ್ಪಲಿ ವಾಪಸ್ ಪಡೆಯಬೇಕು. ಈ ಸಂದರ್ಭದಲ್ಲಿ ಚೌಕಾಸಿ ಮಾಡಲಾಗುತ್ತದೆ. ಇದೇ ವಿಚಾರದ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಾರೆ.
ಇದನ್ನೂ ಓದಿ: ಮಗಳ ಮುಖ ತೋರಿಸಿ 1 ಲಕ್ಷ ರೂಪಾಯಿ ದಾನ ಮಾಡಿದ ರಣಬೀರ್ ಕಪೂರ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯಲ್ಲಿ ಜೂತಾ ಚುರಾಯಿ ಶಾಸ್ತ್ರ ನಡೆದಾಗ ಆಲಿಯಾ ಭಟ್ ಅವರ ಸಹೋದರಿಯರು ಕೋಟ್ಯಂತರ ರೂಪಾಯಿ ಡಿಮ್ಯಾಂಡ್ ಮಾಡಿದ್ದರು ಎಂಬ ಗಾಸಿಪ್ ಹರಿದಾಡಿತ್ತು. ಅದೆಲ್ಲ ನಿಜವಲ್ಲ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಆದರೆ ‘ದೊಡ್ಡ ಮೊತ್ತದ ಹಣ ಕೇಳಿದ್ದು ಹೌದು’ ಎಂದು ರಣಬೀರ್ ಕಪೂರ್ ಅವರು ಹೇಳಿದ್ದಾರೆ. ಲಕ್ಷಾಂತರ ರೂಪಾಯಿ ಕೇಳಲಾಗಿತ್ತು. ಆದರೆ ಕೆಲವು ಸಾವಿರ ರೂಪಾಯಿಗಳನ್ನು ನೀಡಲು ರಣಬೀರ್ ಕಪೂರ್ ಒಪ್ಪಿಕೊಂಡರು. ಈಗ ರಣಬೀರ್ ಮತ್ತು ಆಲಿಯಾ ಸುಖವಾಗಿ ಸಂಸಾರ ನಡೆದುತ್ತಿದ್ದಾರೆ. ಈ ದಂಪತಿಗೆ ರಹಾ ಎಂಬ ಹೆಣ್ಣು ಮಗು ಇದೆ.
ಇದನ್ನೂ ಓದಿ: ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್ ಕಪೂರ್ ಆಗಿದ್ದು ಕೇವಲ ‘ಚಿಂಗಂ’
ಕಳೆದ ವರ್ಷ ಬಿಡುಗಡೆಯಾದ ‘ಅನಿಮಲ್’ ಸಿನಿಮಾದಿಂದ ರಣಬೀರ್ ಕಪೂರ್ ಅವರು ದೊಡ್ಡ ಯಶಸ್ಸು ಕಂಡರು. ಈಗ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ನಿತೇಶ್ ತಿವಾರಿ ನಿರ್ದೇಶನ ಮಾಡಲಿರುವ ರಾಮಾಯಣ ಆಧಾರಿತ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಅವರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಹತ್ತು ಹಲವು ಗಾಸಿಪ್ಗಳು ಕೇಳಿಬರುತ್ತಿವೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.