Swatantrya Veer Savarkar: ‘ಸ್ವಾತಂತ್ರ್ಯ ವೀರ ಸಾವರ್ಕರ್’ ಟ್ರೇಲರ್ ಬಿಡುಗಡೆ; ಇದು ಬೇರೆಯದೇ ಕಥೆ
ಬಹುನಿರೀಕ್ಷಿತ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬಯೋಪಿಕ್ ಆಗಿರುವ ಈ ಸಿನಿಮಾಗೆ ರಣದೀಪ್ ಹೂಡಾ ಅವರು ನಿರ್ದೇಶನ ಮಾಡಿದ್ದಾರೆ. ಸಾವರ್ಕರ್ ಪಾತ್ರದಲ್ಲಿ ರಣದೀಪ್ ನಟಿಸಿದ್ದಾರೆ. ಮಾರ್ಚ್ 22ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ ಮೂಲಕ ಹೈಪ್ ಹೆಚ್ಚಾಗಿದೆ.
ನಟ ರಣದೀಪ್ ಹೂಡಾ (Randeep Hooda) ನಟಿಸಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್’ (Swatantrya Veer Savarkar) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತಿಹಾಸದ ಪುಟಗಳಲ್ಲಿ ಸಾವರ್ಕರ್ ಕುರಿತಾಗಿ ಬೇರೆ ಬೇರೆ ಮಾಹಿತಿಗಳು ಲಭ್ಯವಿದೆ. ಈ ಸಿನಿಮಾದಲ್ಲಿ ರಣದೀಪ್ ಹೂಡಾ ಅವರು ತೋರಿಸಲು ಹೊರಟಿರುವ ಕಥೆಯೇ ಬೇರೆ. ಅದರ ಸುಳಿವನ್ನು ಅವರು ಟ್ರೇಲರ್ನಲ್ಲಿ ನೀಡಿದ್ದಾರೆ. ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಟ್ರೇಲರ್ (Swatantrya Veer Savarkar Trailer) ಬಿಡುಗಡೆ ಆಗಿದೆ. ರಣದೀಪ್ ಹೂಡಾ ಅವರ ವೃತ್ತಿ ಜೀವನದಲ್ಲಿ ಇದು ತುಂಬ ಡಿಫರೆಂಟ್ ಸಿನಿಮಾ ಆಗಲಿದೆ ಎಂಬುದರ ಸೂಚನೆ ಟ್ರೇಲರ್ನಲ್ಲಿ ಸಿಕ್ಕಿದೆ. ಇತಿಹಾಸದಲ್ಲಿ ಈವರೆಗೂ ಹೆಚ್ಚಾಗಿ ಕೇಳಿರದ ವಿವರಗಳು ಈ ಸಿನಿಮಾದಲ್ಲಿ ಬಿತ್ತರ ಆಗಲಿವೆ.
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನವನ್ನು ಆಧರಿಸಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಸಾವರ್ಕರ್ ಪಾತ್ರವನ್ನು ರಣದೀಪ್ ಹೂಡಾ ನಿಭಾಯಿಸಿದ್ದಾರೆ. ಈ ಸಿನಿಮಾಗೆ ಅವರೇ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಸಾವರ್ಕರ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಸ್ಡಿಪಿಐ ಮುಖಂಡ ಅರೆಸ್ಟ್
ಮಾರ್ಚ್ 22ರಂದು ಹಿಂದಿ ಮತ್ತು ಮರಾಠಿಯಲ್ಲಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಬಿಡುಗಡೆ ಆಗಲಿದೆ. ಸಾವರ್ಕರ್ ಜೀವನದ ವಿವಿಧ ಕಾಲಘಟ್ಟವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ರಣದೀಪ್ ಹೂಡಾ ಅವರು ವಿವಿಧ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್ ಆದಂತಹ ಡೈಲಾಗ್ಗಳು ಈ ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬಾಲ ಗಂಗಾಧರ್ ತಿಲಕ್, ಜವಹರ್ ಲಾಲ್ ನೆಹರು, ಮೊಹಮ್ಮದ್ ಅಲಿ ಜಿನ್ನಾ, ಸುಭಾಷ್ ಚಂದ್ರ ಬೋಸ್, ಮದನ್ ಲಾಲ್ ಧಿಂಗ್ರ, ಭಗತ್ ಸಿಂಗ್ ಮುಂತಾದ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದಲ್ಲ ಇರಲಿವೆ.
‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಟ್ರೇಲರ್:
‘ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ನಾವೆಲ್ಲರೂ ಓದಿದ್ದೇವೆ. ಇದು ಆ ರೀತಿಯ ಕಥೆ ಅಲ್ಲ…’ ಎಂಬ ಹಿನ್ನೆಲೆ ಧ್ವನಿಯೊಂದಿಗೆ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಟ್ರೇಲರ್ ಆರಂಭ ಆಗುತ್ತದೆ. ಹಿಂಸೆಯ ವಿಚಾರದಲ್ಲಿ ಮಹಾತ್ಮ ಗಾಂಧಿ ಮತ್ತು ಸಾವರ್ಕರ್ ಅವರಿಗೆ ಇದ್ದ ಭಿನ್ನಾಭಿಪ್ರಾಯವನ್ನು ಕೂಡ ಈ ಟ್ರೇಲರ್ನಲ್ಲಿ ತೋರಿಸಲಾಗಿದೆ. ಟ್ರೇಲರ್ನಲ್ಲಿ ಧರ್ಮದ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಈ ಎಲ್ಲ ಕಾರಣಗಳಿಂದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಕೌತುಕ ಮೂಡಿಸಿದೆ. ಅಂಕಿತಾ ಲೋಖಂಡೆ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.