ನಟಿ ರಂಜನಿ ರಾಘವನ್ ಅವರು ಕಲಾವಿದೆಯಾಗಿ, ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ‘ಕನ್ನಡತಿ’ ಧಾರಾವಾಹಿ ಮೂಲಕ ಅವರ ಗಮನ ಸೆಳೆದಿದ್ದಾರೆ. ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅವರು ನಟನಾ ಕ್ಷೇತ್ರಕ್ಕೆ ಬರುವುದಕ್ಕೂ ಮೊದಲು ಖ್ಯಾತ ನಿರ್ದೇಶಕರಿಗೆ ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಕಳುಹಿಸುತ್ತಿದ್ದರು. ಆದರೆ, ಅವರಿಗೆ ಯಾರಿಂದಲೂ ಉತ್ತರ ಮಾತ್ರ ಬಂದಿರಲಿಲ್ಲ. ಈ ಬಗ್ಗೆ ರಂಜನಿ ರಾಘವನ್ ಅವರು ಹೇಳಿಕೊಂಡಿದ್ದಾರೆ. ಆ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.
2012ರ ‘ಕೆಳದಿ ಚೆನ್ನಮ್ಮ’ ಧಾರಾವಾಹಿ ಮೂಲಕ ರಂಜನಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಆಕಾಶ ದೀಪ’ ಧಾರಾವಾಹಿಯಲ್ಲೂ ನಟಿಸಿದರು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಗೌರಿ ಪಾತ್ರ ಮಾಡಿ ಜನಪ್ರಿಯತೆ ಪಡೆದರು. 2020ರಿಂದ 23ರ ಅವಧಿಯಲ್ಲಿ ಪ್ರಸಾರ ಕಂಡ ‘ಕನ್ನಡತಿ’ ಧಾರಾವಾಹಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಇದನ್ನೂ ಓದಿ:ಧಾರವಾಹಿಯಲ್ಲಿ ದೈವಾರಾಧನೆ ಪ್ರದರ್ಶನ; ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ
2017ರ ‘ರಾಜಹಂಸ’ ಚಿತ್ರದಲ್ಲಿ ಪಾತ್ರ ಒಂದನ್ನು ಮಾಡಿದರು. ಇದು ಅವರ ನಟನೆಯ ಮೊದಲ ಸಿನಿಮಾ. ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಹಕುನಾ ಮಟಾಟ (ಸೀರಿಸ್)’, ‘ನೈಟ್ ಕರ್ಫ್ಯೂ’, ‘ಕಾಂಗರೂ’ ಸಿನಿಮಾಗಳಲ್ಲಿ ರಂಜನಿ ರಾಘವನ್ ನಟಿಸಿದ್ದಾರೆ. ಅವರು ನಟನೆಗೆ ಬರೋದಕ್ಕೂ ಮೊದಲು ನಿರ್ದೇಶಕರ ಬಳಿ ಅವಕಾಶಕ್ಕಾಗಿ ಬೇಡಿಕೆ ಇಟ್ಟಿದ್ದರು.
ನಟನೆಗೆ ಬರೋದಕ್ಕೂ ಮೊದಲು ನಿರ್ದೇಶಕರಿಗೆ ರಂಜನಿ ಮೆಸೇಜ್ ಮಾಡುತ್ತಿದ್ದರು. ನಿಮ್ಮ ಸಿನಿಮಾಗಳು ಇಷ್ಟ ಆಗಿವೆ ನಮಗೂ ಅವಕಾಶ ನೀಡಿ ಎಂದು ಕೇಳುತ್ತಿದ್ದರು. ಆದರೆ, ಯಾವುದೇ ನಿರ್ದೇಶಕರು ಅವರಿಗೆ ಈ ಮೆಸೇಜ್ ನೋಡಿ ಅವಕಾಶ ಕೊಟ್ಟಿಲ್ಲ. ಸದ್ಯ ರಂಜನಿ ಅವರು ‘ಸತ್ಯಂ’ ಹಾಗೂ ‘ಸ್ವಪ್ನ ಮಂಟಪ’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ರಂಜನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಅಲ್ಲದೆ, ಅಭಿಮಾನಿಗಳ ಸಂದೇಶಗಳಿಗೆ ಅವರು ಉತ್ತರ ನೀಡುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Sun, 25 August 24