ತಂದೆ ತಾಯಿಯ ಲೈಂಗಿಕತೆ ಬಗ್ಗೆ ಮಾತಾಡಿದ್ದ ರಣ್ವೀರ್ ಅಲಹಾಬಾದಿಯಾ ಮತ್ತೆ ಆ್ಯಕ್ಟೀವ್

|

Updated on: Mar 30, 2025 | 5:20 PM

‘ನನ್ನ ಮೇಲೆ ಎಷ್ಟು ದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ನಾನು ತಿಳಿದಿದ್ದೇನೆ. ಬಹಳ ಮಕ್ಕಳು ಕೂಡ ನನ್ನ ಶೋ ನೋಡುತ್ತಾರೆ. ತುಂಬ ಜವಾಬ್ದಾರಿಯಿಂದ ನಾನು ನನ್ನ ಕೆಲಸ ಮುಂದುವರಿಸುತ್ತೇನೆ. ನನಗೆ ಇನ್ನೊಂದು ಅವಕಾಶ ಕೊಡಿ’ ಎಂದು ವಿವಾದಿತ ಯೂಟ್ಯೂಬರ್ ರಣ್ವೀರ್ ಅಲಹಾಬಾದಿಯಾ ಹೇಳಿದ್ದಾರೆ.

ತಂದೆ ತಾಯಿಯ ಲೈಂಗಿಕತೆ ಬಗ್ಗೆ ಮಾತಾಡಿದ್ದ ರಣ್ವೀರ್ ಅಲಹಾಬಾದಿಯಾ ಮತ್ತೆ ಆ್ಯಕ್ಟೀವ್
Ranveer Allahbadia
Follow us on

ಪಾಡ್​ಕಾಸ್ಟ್ ಮೂಲಕ ಹೆಸರು ಮಾಡಿದ್ದ ರಣ್ವೀರ್ ಅಲಹಾಬಾದಿಯಾ (Ranveer Allahbadia) ಅವರು ಇಷ್ಟು ದಿನಗಳ ಕಾಲ ಮೌನವಾಗಿದ್ದರು. ಅವರ ಒಂದೇ ಒಂದು ಹೇಳಿಕೆಯಿಂದ ಸಿಕ್ಕಾಪಟ್ಟೆ ವಿವಾದ ಸೃಷ್ಟಿಯಾಗಿತ್ತು. ತಂದೆ-ತಾಯಿಯ ಲೈಂಗಿಕತೆ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದರಿಂದ ಅವರ ವಿರುದ್ಧ ಹಲವು ಕಡೆಗಳಲ್ಲಿ ದೂರು ದಾಖಲಾಗಿತ್ತು. ಈ ವಿಷಯ ಸುಪ್ರೀಂ ಕೋರ್ಟ್​ ತನಕವೂ ಹೋಗಿತ್ತು. ಆ ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ಸೈಲೆಂಟ್ ಆಗಿದ್ದ ರಣ್ವೀರ್ ಅಲಹಾಬಾದಿಯಾ ಅವರು ಈಗ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಬರೋಬ್ಬರಿ ಒಂದು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ (Ranveer Allahbadia Instagram) ಪೋಸ್ಟ್ ಮಾಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಬಿಯರ್ ಬೈಸೆಪ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ರಣ್ವೀರ್ ಅಲಹಾಬಾದಿಯಾ ಫೇಮಸ್ ಆಗಿದ್ದರು. ಅವರ ಪಾಡ್​ಕಾಸ್ಕ್​​ಗೆ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಬಂದು ಸಂದರ್ಶನ ನೀಡಿದ್ದರು. ಆದರೆ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ರಣ್ವೀರ್ ಅಲಹಾಬಾದಿಯಾ ನೀಡಿದ ಕೆಟ್ಟ ಹೇಳಿಕೆಯಿಂದ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕಿ ಉಂಟಾಗಿತ್ತು. ಆ ನೋವನ್ನು ಮರೆತು ಅವರು ಈಗ ಕಮ್​ಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ
ಸಭ್ಯತೆ ಇರಲಿ: ‘ದಿ ರಣ್ವೀರ್ ಶೋ’ ಪ್ರಸಾರಕ್ಕೆ ಸುಪ್ರೀಂ ಕೋರ್ಟ್​ ಅನುಮತಿ
ಅಶ್ಲೀಲ ಹೇಳಿಕೆ, ಬಂಧನ ಭೀತಿಯಿಂದ ಬಚಾವಾದ ರಣ್ವೀರ್
ಇಂಡಿಯಾಸ್ ಗಾಟ್ ಲೇಟೆಂಟ್​ನ ಎಲ್ಲಾ ಎಪಿಸೋಡ್​ ಡಿಲೀಟ್; ಸಮಯ್ ದೊಡ್ಡ ನಿರ್ಧಾರ
ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ

‘ನನ್ನ ಎಲ್ಲ ಪ್ರೀತಿಪಾತ್ರರಿಗೆ ಧನ್ಯವಾದಗಳು. ಈ ಜಗತ್ತಿಗೆ ಧನ್ಯವಾದ. ನಿಮ್ಮೆಲ್ಲರಿಂದಾಗಿ ನಾನು ಸುಧಾರಿಸಿಕೊಂಡಿದ್ದೇನೆ. ನಾಳೆಯೂ ನಮ್ಮೊಂದಿಗಿರಿ. ಒಂದು ಹೊಸ ಅಧ್ಯಾಯ ಆರಂಭ ಆಗಿದೆ. ಇದು ಮರುಜನ್ಮ’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಫೋಟೋ ಹಂಚಿಕೊಂಡಿದ್ದಾರೆ. ತನ್ನ ಟೀಮ್, ಸಾಕುನಾಯಿ, ಅಜ್ಜಿ ಜೊತೆ ಇರುವ ಫೋಟೋಗಳನ್ನು ರಣ್ವೀರ್ ಅಲಹಾಬಾದಿಯಾ ಅವರು ಪೋಸ್ಟ್ ಮಾಡಿದ್ದಾರೆ.

ಒಂದು ವಿಡಿಯೋವನ್ನು ಸಹ ರಣ್ವೀರ್ ಅಲಹಾಬಾದಿಯಾ ಅವರು ಪೋಸ್ಟ್ ಮಾಡಿದ್ದಾರೆ. ‘ನನ್ನ ಹಿತೈಷಿಗಳಿಗೆ ಧನ್ಯವಾದಗಳು. ನಿಮ್ಮೆಲ್ಲ ಪಾಸಿಟಿವ್ ಸಂದೇಶ ನನ್ನ ಇಡೀ ಕುಟುಂಬಕ್ಕೆ ಸಹಾಯ ಮಾಡಿದೆ. ಇದು ಕಷ್ಟದ ಸಂದರ್ಭ ಆಗಿತ್ತು. ಬಹಿರಂಗ ಬೆದರಿಕೆ, ದ್ವೇಷ, ಮಾಧ್ಯಮಗಳ ಆರ್ಟಿಕಲ್ ಎಲ್ಲವನ್ನೂ ನೋಡಿದೆ. ಅವುಗಳ ನಡುವೆ ನಿಮ್ಮ ಸಂದೇಶಗಳು ನನಗೆ ಬಳಕ ಸಹಾಯ ಮಾಡಿವೆ. ನಿಮ್ಮ ಹಾದಿಯಲ್ಲಿ ಬರೀ ಯಶಸ್ಸು ಮಾತ್ರ ಇರುವುದಿಲ್ಲ ಎಂಬುದು ಇಂಥ ಕಷ್ಟದ ಸಂದರ್ಭದಲ್ಲಿ ತಿಳಿಯುತ್ತದೆ. ನೀವು ಸೋಲನ್ನೂ ಎದುರಿಸಬೇಕು’ ಎಂದು ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಭ್ಯತೆ ಇರಲಿ: ‘ದಿ ರಣ್ವೀರ್ ಶೋ’ ಪ್ರಸಾರಕ್ಕೆ ಸುಪ್ರೀಂ ಕೋರ್ಟ್​ ಅನುಮತಿ

‘ಕಳೆದ 10 ವರ್ಷದಿಂದ ವಿಡಿಯೋ ಮಾಡುತ್ತಿದ್ದೇನೆ. ಒಂದು ಒತ್ತಾಯದ ಬ್ರೇಕ್ ಸಿಕ್ಕಿತು. ತಾಳ್ಮೆಯಿಂದ ಬದುಕುವುದು ಕಲಿತೆ. ಭಾರತದ ಜನರು ನನ್ನನ್ನು ತಮ್ಮ ಕುಟುಂಬದ ಸದಸ್ಯನ ರೀತಿ ಕಾಣುತ್ತಾರೆ. ಅಂಥವರಿಗೆಲ್ಲ ನಾನು ಕ್ಷಮೆ ಕೇಳುತ್ತೇನೆ. ಮುಂದಿನ 10, 20, 30 ವರ್ಷಗಳ ಕಾಲ ನಾನು ಬಹಳ ಜವಾಬ್ದಾರಿಯಿಂದ ಕಾಂಟೆಂಟ್ ಕ್ರಿಯೇಟ್ ಮಾಡುತ್ತೇನೆ’ ಎಂದಿದ್ದಾರೆ ರಣ್ವೀರ್ ಅಲಹಾಬಾದಿಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:49 pm, Sun, 30 March 25