‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ಎಪಿಸೋಡ್ ಡಿಲೀಟ್; ಸಮಯ್ ರೈನಾ ದೊಡ್ಡ ನಿರ್ಧಾರ
ಯೂಟ್ಯೂಬರ್ ರಣವೀರ್ ಅಲಾಹಾಬಾದಿಯಾ ಅವರ ಅಶ್ಲೀಲ ಹೇಳಿಕೆಯಿಂದಾಗಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋ ವಿವಾದಕ್ಕೆ ಸಿಲುಕಿದೆ. ಈ ವಿವಾದದಿಂದಾಗಿ ಸಮಯ್ ರೈನಾ ತಮ್ಮ ಚಾನೆಲ್‌ನಿಂದ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕಿದ್ದಾರೆ. ಪೊಲೀಸ್ ನೋಟಿಸ್ ಮತ್ತು ಪ್ರದರ್ಶನ ರದ್ದತಿಯಿಂದ ಸಮಯ್ ರೈನಾ ಆಘಾತಕ್ಕೊಳಗಾಗಿದ್ದಾರೆ .

ಕಾಮಿಡಿಯನ್ ಹಾಗೂ ಯೂಟ್ಯೂಬರ್ ಸಮಯ್ ರೈನಾ ಅವರು ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದಾರೆ. ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಮೂಲಕ ಎಲ್ಲರನ್ನೂ ನಗಿಸುವ ಕೆಲಸ ಮಾಡುತ್ತಿದ್ದ ಅವರು, ಈಗ ಅವರೇ ಅಳುವಂತಾಗಿದೆ. ಅತಿಥಿಯಾಗಿ ಬಂದಿದ್ದ ರಣವೀರ್ ಅಲಾಹಾಬಾದಿಯಾ ಮಾಡಿದ ಅಶ್ಲೀಲ ಕಮೆಂಟ್ನಿಂದ ಇಡೀ ಶೋ ಮೇಲೆ ಪರಿಣಾಮ ಬೀರಿದೆ. ಸದ್ಯ ಎದ್ದಿರುವ ವಿರೋಧದಿಂದ ಕಂಗಾಲಾಗಿರುವ ಸಮಯ್ ರೈನಾ ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ವಿಡಿಯೋಗನ್ನು ಡಿಲೀಟ್ ಮಾಡಿದ್ದಾರೆ.
ಇತ್ತೀಚೆಗೆ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಹೊಸ ಎಪಿಸೋಡ್ ಪ್ರಸಾರ ಕಂಡಿತ್ತು. ಇದರಲ್ಲಿ ಯೂಟ್ಯೂಬರ್ ರಣವೀರ್ ಅವರು ಪೋಷಕರ ಲೈಂಗಿಕತೆ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದರು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸಂಬಂಧ ಕೇಸ್ ಕೂಡ ದಾಖಲಾಯಿತು. ಇದಾದ ಬಳಿಕ ಆಗುತ್ತಿರುವ ಬೆಳವಣಿಗೆಯನ್ನು ಸಮಯ್ ರೈನಾ ಬಳಿ ಹ್ಯಾಂಡಲ್ ಮಾಡಲು ಸಾಧ್ಯ ಆಗುತ್ತಿಲ್ಲ.
‘ಈಗ ನಡೆಯುತ್ತಿರುವ ಬೆಳವಣಿಗೆಯನ್ನು ನನ್ನಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಇಂಡಿಯಾಸ್ ಗಾಟ್ ಲೇಟೆಂಟ್ನ ಎಲ್ಲಾ ವಿಡಿಯೋಗಳನ್ನು ನನ್ನ ಚಾನೆಲ್‌ನಿಂದ ತೆಗೆದುಹಾಕಿದ್ದೇನೆ. ಜನರು ನಗುವಂತೆ ಮಾಡುವುದು ನನ್ನ ಉದ್ದೇಶ. ತನಿಖೆ ಸರಿಯಾಗಿ ಆಗಲು ನಾನು ಎಲ್ಲ ಅಧಿಕಾರಿಗಳ ಜೊತೆ ಸಹಕರಿಸುತ್ತಿದ್ದೇನೆ. ಧನ್ಯವಾದಗಳು’ ಎಂದು ಸಮಯ್ ರೈನಾ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿದ್ದಾರೆ.
ರಣವೀರ್ ಅಲಾಹಾಬಾದಿಯಾ ಅವರು ಎರಡು ದಿನಗಳ ಹಿಂದೆ ವಿಡಿಯೋ ಮಾಡಿದ್ದರು. ಅವರು ತಮ್ಮ ಹೇಳಿಕೆ ಬಗ್ಗೆ ವಿಷಾದ ಹೊರಹಾಕಿ, ಕ್ಷಮೆ ಕೇಳಿದ್ದರು. ಮಾಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ರಣವೀರ್ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿದ ಬಳಿಕ ಅವರು ಈ ವಿಡಿಯೋ ಮಾಡಿದ್ದರು. ಸದ್ಯ ರಣವೀರ್, ಸಮಯ್, ಅಪೂರ್ವಾ ಮೊದಲಾದವರ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?
ಸಮಯ್ ರೈನಾ ಅವರು ಗುಜರಾತ್ನಲ್ಲಿ ಏಪ್ರಿಲ್ 17, 18, 19 ಹಾಗೂ 20ರಂದು ಶೋ ನೀಡಬೇಕಿತ್ತು. ಆದರೆ, ಇದು ರದ್ದಾಗಿದೆ ಎನ್ನಲಾಗಿದೆ. ಬುಕ್ ಮೈ ಶೋನಿಂದ ಟಿಕೆಟ್ ಬುಕಿಂಗ್ ಆಯ್ಕೆ ತೆಗೆದು ಹಾಕಲಾಗಿದೆ. ಈಗಾಗಲೇ ಮುಂಬೈ ಪೊಲೀಸರು ಸಮಯ್ ಹಾಗೂ ರಣವೀರ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Thu, 13 February 25