AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ಹೇಳಿಕೆ, ಬಂಧನ ಭೀತಿಯಿಂದ ಬಚಾವಾದ ರಣ್ವೀರ್

Ranveer Allahbadia: ‘ಬೀರ್ ಬೈಸಿಪ್ಸ್’ ಯೂಟ್ಯೂಬ್ ಚಾನೆಲ್ ಹೊಂದಿರುವ ಜನಪ್ರಿಯ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ, ‘ಇಂಡಿಯಾ ಗಾಟ್ ಲೇಟೆಂಟ್’ ಶೋನಲ್ಲಿ ನೀಡಿದ್ದ ಅಶ್ಲೀಲ ಹೇಳಿಕೆ ವಿರುದ್ಧ ಈಗಾಗಲೇ ಹಲವು ದೂರು ದಾಖಲಾಗಿವೆ. ಆದರೆ ಈಗ ರಣ್ವೀರ್​ ಬಂಧನ ಭೀತಿಯಿಂದ ನಿರಾಳತೆ ಪಡೆದುಕೊಂಡಿದ್ದಾರೆ.

ಅಶ್ಲೀಲ ಹೇಳಿಕೆ, ಬಂಧನ ಭೀತಿಯಿಂದ ಬಚಾವಾದ ರಣ್ವೀರ್
Samay Raina
ಮಂಜುನಾಥ ಸಿ.
|

Updated on: Feb 18, 2025 | 12:50 PM

Share

ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ, ಸಮಯ್ ರೈನಾ ನಡೆಸಿಕೊಡುವ ‘ಇಂಡಿಯಾ ಗಾಟ್ ಲೇಟೆಂಟ್’ ಶೋನಲ್ಲಿ ಕಳೆದ ವಾರ ನೀಡಿದ್ದ ಅಶ್ಲೀಲ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪೋಷಕರು ಮತ್ತು ಲೈಂಗಿಕತೆ ಬಗ್ಗೆ ರಣ್ವೀರ್ ಅಲ್ಹಾಬಾದಿಯಾ ಆ ಶೋನಲ್ಲಿ ಮಾತನಾಡಿದ್ದರು. ಇದರಿಂದಾಗಿ ರಣ್ವೀರ್, ಸಮಯ್ ರೈನಾ ಸೇರಿದಂತೆ ಆ ಶೋನ ಅಂದಿನ ಪ್ಯಾನಲ್​ನಲ್ಲಿ ಇದ್ದ ಹಲವರ ಮೇಲೆ ದೂರು ದಾಖಲಾಗಿತ್ತು. ರಣ್ವೀರ್ ಅಲ್ಹಾಬಾದಿಯಾಗೆ ಬಂಧನದ ಭೀತಿ ಇತ್ತು. ಆದರೆ ಸುಪ್ರೀಂಕೋರ್ಟ್ ರಣ್ವೀರ್​ಗೆ ಬಂಧನ ಭೀತಿಯಿಂದ ನಿರಾಳತೆ ಒದಗಿಸಿದೆ.

ರಣ್ವೀರ್ ಅಲ್ಹಾಬಾದಿಯಾರ ವಕೀಲರ ವಾದ ಆಲಿಸಿದ ಸುಪ್ರೀಂಕೋರ್ಟ್​, ರಣ್ವೀರ್​ ಅನ್ನು ಬಂಧಿಸದಿರುವಂತೆ ಸೂಚಿಸಿದೆ. ಆದರೆ ರಣ್ವೀರ್, ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಿದರೆ ಮಾತ್ರವೇ ಅವರನ್ನು ಬಂಧಿಸುವಂತಿಲ್ಲ ಎಂದಿದೆ. ಅಸ್ಸಾಂ, ಮುಂಬೈ ಪೊಲೀಸರು ರಣ್ವೀರ್ ಅನ್ನು ಬಂಧಿಸುವಂತಿಲ್ಲ ಎಂದಿರುವ ಸುಪ್ರೀಂ ನ್ಯಾಯಮೂರ್ತಿಗಳು, ಒಂದೊಮ್ಮೆ ಇದೇ ವಿಷಯದ ಮೇಲೆ ಇನ್ನೊಂದು ಪ್ರಕರಣ ದಾಖಲಾದರೂ ಸಹ ರಣ್ವೀರ್ ಅನ್ನು ಬಂಧಿಸುವಂತಿಲ್ಲ ಎಂದಿದೆ.

ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ರಣ್ವೀರ್ ಹೇಳಿಕೆಯನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ‘ನೀನು ಜನಪ್ರಿಯ ಎಂದ ಮಾತ್ರಕ್ಕೆ ಈ ಸಮಾಜವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ತೋಚಿದ್ದೆಲ್ಲವನ್ನೂ ಹೇಳಬಹುದಾ? ’ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ‘ಇದು ಅಶ್ಲೀಲ ಅಲ್ಲದೇ ಹೋದರೆ ಈ ದೇಶದಲ್ಲಿ ಇನ್ನು ಯಾವುದು ಅಶ್ಲೀಲ?’ ಎಂದು ಸಹ ಸಿಟ್ಟಿನಿಂದ ಪ್ರಶ್ನೆ ಮಾಡಿದ್ದಾರೆ. ಈ ವ್ಯಕ್ತಿ ಅವರ ಪೋಷಕರಿಗೆ ಎಂಥಹಾ ದೊಡ್ಡ ಮುಜುಗರ ತಂದಿದ್ದಾನೆ, ಆ ವ್ಯಕ್ತಿಯ ಒಳಗೆ ಇದ್ದ ಅಶ್ಲೀಲತೆ, ದುಷ್ಟತನ ಈ ಹೇಳಿಕೆ ಮೂಲಕ ಹೊರಗೆ ಬಂದಿದೆ’ ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ:‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ಎಪಿಸೋಡ್​ ಡಿಲೀಟ್; ಸಮಯ್ ರೈನಾ ದೊಡ್ಡ ನಿರ್ಧಾರ

ರಣ್ವೀರ್​ರ ವಕೀಲರು ಸಹ ತಮ್ಮ ಕಕ್ಷಿಧಾರರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಆತ ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆದರೆ ಆ ಹೇಳಿಕೆ ಕ್ರಿಮಿನಲ್ ಅಪರಾಧದ ಅಡಿಗೆ ಒಳಪಡುತ್ತದೆಯೇ ಎಂಬುದನ್ನು ನಾವು ನೋಡಬೇಕಿದೆ’ ಎಂದಿದ್ದಾರೆ. ರಣ್ವೀರ್​ಗೆ ಬಂಧನ ಭೀತಿ ತಪ್ಪಿದ ಬೆನ್ನಲ್ಲೆ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಸಮಯ್ ರೈನಾಗೂ ಬಂಧನ ಭೀತಿಯಿಂದ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ.

‘ಇಂಡಿಯಾ ಗಾಟ್ ಲೇಟೆಂಟ್’ ಶೋನಲ್ಲಿ ಭಾಗಿ ಆಗಿದ್ದ ರಣ್ವೀರ್ ಅಲ್ಹಾಬಾದಿಯಾ, ‘ನಿನ್ನ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದು ನೋಡುತ್ತೀಯ ಅಥವಾ ನೀನೂ ಅವರೊಂದಿಗೆ ಭಾಗಿ ಆಗುತ್ತೀಯ’ ಎಂದು ಸ್ಪರ್ಧಿಯೊಬ್ಬನನ್ನು ಕೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ