ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ

| Updated By: ರಾಜೇಶ್ ದುಗ್ಗುಮನೆ

Updated on: Jun 11, 2024 | 1:59 PM

‘ಕಿಶೋರ್ ನಮಿತ್ ಕಪೂರ್’ ಅವರ ನಟನಾ ಶಾಲೆಯಲ್ಲಿ ರಣವೀರ್ ಸಿಂಗ್ ತರಬೇತಿ ಪಡೆದರು. ಆ ಬಳಿಕ ಅವರು ‘ಬ್ಯಾಂಡ್ ಬಾಜಾ ಭಾರತ್’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಅವರು ಈ ಚಿತ್ರಕ್ಕಾಗಿ ಆಡಿಷನ್ ನೀಡಿದ್ದರು. ಈ ಆಡಿಷನ್​ನಲ್ಲಿ ಅವರು ಸಖತ್ ಚಿಲ್ ಆಗಿ ಕಾಣಿಸಿಕೊಂಡಿದ್ದಾರೆ.

ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ
ರಣವೀರ್
Follow us on

ರಣವೀರ್ ಸಿಂಗ್ (Ranveer Singh) ಅವರಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಅವರನ್ನು ಅನೇಕರು ಲಕ್ಕಿ ಎಂದು ಕರೆದಿದ್ದು ಇದೆ. ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಅವರಿಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಅವರು ಬಳಕೆ ಮಾಡಿದರು. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಲಕ ಅವರಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ರಣವೀರ್ ಸಿಂಗ್ ಅವರ ಮೊದಲ ಆಡಿಷನ್ ವಿಡಿಯೋ ಈಗ ವೈರಲ್ ಆಗಿದೆ. ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

‘ಕಿಶೋರ್ ನಮಿತ್ ಕಪೂರ್’ ಅವರ ನಟನಾ ಶಾಲೆಯಲ್ಲಿ ರಣವೀರ್ ಸಿಂಗ್ ತರಬೇತಿ ಪಡೆದರು. ಆ ಬಳಿಕ ಅವರು ‘ಬ್ಯಾಂಡ್ ಬಾಜಾ ಭಾರತ್’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಅವರು ಈ ಚಿತ್ರಕ್ಕಾಗಿ ಆಡಿಷನ್ ನೀಡಿದ್ದರು. ಈ ಆಡಿಷನ್​ನಲ್ಲಿ ಅವರು ಸಖತ್ ಚಿಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಆಡಿಷನ್ ಮಾಡುವಾಗ ‘ಬ್ಯಾಂಡ್ ಬಾಜಾ ಭಾರತ್’ ಸಿನಿಮಾದ ದೃಶ್ಯವನ್ನೇ ನೀಡಲಾಗಿತ್ತು. ಅದನ್ನು ರಣವೀರ್ ಸಿಂಗ್ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.  ಆ ಬಳಿಕ ಅವರು ಸಿನಿಮಾಗೆ ಆಯ್ಕೆ ಆಗಿದ್ದಾರೆ. ಆದಿತ್ಯ ಚೋಪ್ರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆರಂಭದಲ್ಲಿ ಅವರಿಗೆ ರಣವೀರ್ ಅವರ ಫೋಟೋ ನೋಡಿ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲು ಮನಸ್ಸು ಬಂದಿರಲಿಲ್ಲ. ಆದಾಗ್ಯೂ ಅವರನ್ನು ಶಾನೂ ಶರ್ಮಾ ಒತ್ತಾಯದಿಂದ ಆಡಿಷನ್ ಮಾಡಲಾಯಿತು. ಭೂಮಿ ಪಡ್ನೇಕರ್ ಈ ಆಡಿಷನ್​ನ ಆಯೋಜನೆ ಮಾಡಿದ್ದರು.

ಇದನ್ನೂ ಓದಿ: ಯಾರೂ ಒಪ್ಪದ ಕೆಲಸ ಮಾಡಿದ ರಣವೀರ್ ಸಿಂಗ್; ದಕ್ಷಿಣ ಭಾರತದವರ ಛೀಮಾರಿ

ರಣವೀರ್ ಸಿಂಗ್ ಅವರಿಗೆ ಮೊದಲ ಸಿನಿಮಾದಿಂದಲೇ ಸಾಕಷ್ಟು ಖ್ಯಾತಿ ಸಿಕ್ಕಿತು. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಜೊತೆ ಅವರು ನಟಿಸಿದ್ದರು. ಈ ಮೂಲಕ ಅವರು ಗಮನ ಸೆಳೆದರು. ಕಳೆದ ವರ್ಷ ಅವರು ಹಾಗೂ ಆಲಿಯಾ ಒಟ್ಟಾಗಿ ನಟಿಸಿದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಗೆಲುವು ಕಂಡಿದೆ. ಈಗ ರಣವೀರ್  ಸಿಂಗ್ ಅವರು ‘ಡಾನ್ 3’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:22 am, Tue, 11 June 24