ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ (Ranveer Singh) ಅವರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಸ್ಟಾರ್ ಕಲಾವಿದರಾಗಿ ಇಬ್ಬರೂ ಮಿಂಚುತ್ತಿದ್ದಾರೆ. ಈ ವರ್ಷ ಆರಂಭದಲ್ಲೇ ‘ಪಠಾಣ್’ ಸಿನಿಮಾ ಮೂಲಕ ದೀಪಿಕಾ ಪಡುಕೋಣೆ (Deepika Padukone) ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಅದೇ ರೀತಿ ರಣವೀರ್ ಸಿಂಗ್ ಕೂಡ ಒಂದು ಗೆಲುವಿಗಾಗಿ ಕಾದಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾದಿಂದ ಅವರಿಗೆ ಈಗ ಯಶಸ್ಸು ಸಿಕ್ಕಿದೆ. ಜುಲೈ 28ರಂದು ಬಿಡುಗಡೆ ಆದ ಈ ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೂ ಈ ಸಿನಿಮಾ ಇಷ್ಟ ಆಗಿದೆ. ಪತ್ನಿ ಮೆಚ್ಚಿರುವುದಕ್ಕೆ ರಣವೀರ್ ಸಿಂಗ್ ಖುಷಿಯಾಗಿದ್ದಾರೆ. ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಕರಣ್ ಜೋಹರ್ ಅವರ ನಿರ್ದೇಶನದಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಡಿಬಂದಿದೆ. ಹಲವು ವರ್ಷಗಳ ಬಳಿಕ ಅವರು ನಿರ್ದೇಶನ ಮಾಡಿರುವುದು ವಿಶೇಷ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಪಂಜಾಬಿ ಯುವಕನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಆಲಿಯಾ ಭಟ್ ನಟಿಸಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಜೊತೆಯಾಗಿ ಕುಳಿತು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ನೋಡಿದ್ದಾರೆ. ಆ ಅನುಭವ ಹೇಗಿತ್ತು ಎಂಬುದನ್ನು ರಣವೀರ್ ಸಿಂಗ್ ವಿವರಿಸಿದ್ದಾರೆ.
ಇದನ್ನೂ ಓದಿ: ರೊಮ್ಯಾನ್ಸ್ ಬಿಟ್ಟು ಆ್ಯಕ್ಷನ್ ಕಡೆ ವಾಲಿದ ದೀಪಿಕಾ ಪಡುಕೋಣೆ; ಮುಂಬರುವ 4 ಚಿತ್ರಗಳೇ ಇದಕ್ಕೆ ಸಾಕ್ಷಿ
‘ದೀಪಿಕಾಗೆ ಈ ಸಿನಿಮಾ ತುಂಬ ಇಷ್ಟ ಆಯಿತು. ನನ್ನ ಜೀವನದಲ್ಲಿ ಸ್ಮರಣೀಯವಾದ ಸಿನಿಮಾ ವೀಕ್ಷಣೆಯ ಅನುಭವ ಇದು. ಶನಿವಾರ (ಜುಲೈ 29) ನಾವಿಬ್ಬರು ಜೊತೆಯಾಗಿ ಸಿನಿಮಾ ನೋಡಿದೆವು. ಕೊನೆಯ ಸಾಲಿನಲ್ಲಿ ನಾವಿಬ್ಬರೇ ಕುಳಿತಿದ್ದೆವು. ನಾನು ಈ ಮೊದಲೇ ಸಿನಿಮಾ ನೋಡಿದ್ದೆ. ಈ ಬಾರಿ ದೀಪಿಕಾರ ಪ್ರತಿಕ್ರಿಯೆ ತಿಳಿಯುವ ಸಲುವಾಗಿ ಕುಳಿತಿದ್ದೆ. ಸಿನಿಮಾ ನೋಡುವಾಗ ಅವರು ನಕ್ಕರು, ಅತ್ತರು, ಚಪ್ಪಾಳೆ ತಟ್ಟಿದರು, ಶಿಳ್ಳೆ ಹೊಡೆದರು. ಅವರಿಗೆ ನನ್ನ ಬಗ್ಗೆ ಹೆಮ್ಮೆಯಿದೆ. ಅದರಿಂದ ನನಗೆ ಖುಷಿ ಆಗಿದೆ’ ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ‘ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’; ದೀಪಿಕಾ ಪಡುಕೋಣೆ ಹಾಟ್ ಅವತಾರಕ್ಕೆ ದಂಗಾದ ಪತಿ ರಣವೀರ್ ಸಿಂಗ್
ವಿಮರ್ಶಕರಿಂದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಸ್ಟಾರ್ ನಿರ್ದೇಶಕ, ಸ್ಟಾರ್ ಕಲಾವಿದರು, ದೊಡ್ಡ ನಿರ್ಮಾಣ ಸಂಸ್ಥೆ ಜೊತೆಯಾಗಿ ಮಾಡಿದ ಸಿನಿಮಾ ಆದ್ದರಿಂದ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅಂದುಕೊಂಡ ಮಟ್ಟದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಈವರೆಗೂ ಸುಮಾರು 70 ಕೋಟಿ ರೂಪಾಯಿ ಗಳಿಕೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.