‘ಜವಾನ್’ ಅಲ್ಲ, ಮತ್ಯಾವುದು ಭಾರತದ ಅತಿ ಹೆಚ್ಚು ಬಜೆಟ್ನ ಹಾಡು?
Shah Rukh Khan: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದ್ದು, ಆ ಹಾಡು ಭಾರತದ ಅತಿ ಹೆಚ್ಚು ಬಜೆಟ್ನ ಹಾಡು ಎನ್ನಲಾಗುತ್ತಿದೆ. ಆದರೆ ಅದು ಸತ್ಯವಲ್ಲ.
ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾದ ಹಾಡೊಂದು ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದೆ. ದೊಡ್ಡ ಸೆಟ್ಗಳಲ್ಲಿ ಭಾರಿ ಸಂಖ್ಯೆಯ ಹಿನ್ನೆಲೆ ಡ್ಯಾನ್ಸರ್ಗಳ ಮಧ್ಯೆ ಶಾರುಖ್ ಖಾನ್ ಡ್ಯಾನ್ಸ್ ಮಾಡುತ್ತಿರುವ ಈ ಹಾಡು ಇದೀಗ ಸಖತ್ ವೈರಲ್ ಆಗಿದೆ. ಹಾಡಿನ ಸ್ಟೆಪ್ಪುಗಳು ಸಹ ಸಖತ್ ವೈರಲ್ ಆಗುತ್ತಿವೆ. ಇದರ ಜೊತೆಗೆ ಈ ಹಾಡು ಈವರೆಗಿನ ಭಾರತದ ಅತ್ಯಂತ ದುಬಾರಿ ಹಾಡು ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಆದರೆ ಅದು ನಿಜವಲ್ಲ, ಭಾರತೀಯ ಸಿನಿಮಾದ ಅತ್ಯಂತ ದುಬಾರಿ ಹಾಡಿನ ಶ್ರೇಯ ಇರುವುದು ಬಾಲಿವುಡ್ (Bollywood) ಸಿನಿಮಾಕ್ಕಲ್ಲ ಬದಲಿಗೆ ದಕ್ಷಿಣದ ತಮಿಳು ಸಿನಿಮಾಕ್ಕೆ.
ರಜನೀಕಾಂತ್ ನಟನೆಯ ಸಿನಿಮಾ ಒಂದರ ಹಾಡು ಭಾರತದ ಈ ವರೆಗಿನ ಅತ್ಯಂತ ದುಬಾರಿ ಬಜೆಟ್ನ ಹಾಡು. ರಜನೀಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ನಟಿಸಿದ್ದ ‘ರೋಬೊ 2.0’ ಸಿನಿಮಾದ ಹಾಡೊಂದು ಭಾರತದ ಈವರೆಗಿನ ಅತ್ಯಂತ ದುಬಾರಿ ಹಾಡಾಗಿದೆ. ‘ರೋಬೊ 2.0’ ಸಿನಿಮಾದ ‘ಎಂಥಿರ ಲೋಕತ್ತು ಸುಂದರಿಯೇ’ ಹಾಡು ಈವೆರಗಿನ ಅತಿ ಹೆಚ್ಚು ಬಜೆಟ್ನ ಹಾಡಾಗಿದೆ.
‘ಎಂಥಿರ ಲೋಕತ್ತು ಸುಂದರಿಯೇ’ ಹಾಡಿಗೆ ನಿರ್ಮಾಪಕರು ಖರ್ಚು ಮಾಡಿರುವುದು 20 ಕೋಟಿ ರೂಪಾಯಿಗಳು. 12 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಹಲವು ಭಿನ್ನ ಅದ್ಧೂರಿ ಸೆಟ್ಗಳಲ್ಲಿ ವಿದೇಶಿ ನೃತ್ಯಗಾರರು, ಕೆಲವು ದೇಸೀ ನೃತ್ಯಗಾರರು, ಮೇಕಪ್, ಹೇರ್ಸ್ಟೈಲಿಸ್ಟ್, ಡಿಸೈನರ್ಗಳು, ವಿಎಫ್ಎಕ್ಸ್, ಗ್ರಾಫಿಕ್ಸ್ ಕಲಾವಿದರು ಈ ಹಾಡಿಗಾಗಿ ಕೆಲಸ ಮಾಡಿದ್ದರು. ಈ ಹಾಡಿನಲ್ಲಿ ಮುಖ್ಯ ನಟ-ನಟಿ ಹಾಗೂ ಇತರೆ ನೃತ್ಯಗಾರರು ಧರಿಸಿದ್ದ ಬಟ್ಟೆಗಳಿಗೆ ಕೋಟ್ಯಂತರ ಹಣವನ್ನು ವ್ಯವಯಿಸಲಾಗಿತ್ತಂತೆ. ನೆನಪಿರಲಿ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಕಾಂತಾರ’ದ ಬಜೆಟ್ 15 ಕೋಟಿ. ಒಂದು ಗುಣಮಟ್ಟದ ಸಿನಿಮಾ ಮಾಡಬಹುದಾದ ಬಜೆಟ್ ಅನ್ನು ‘ಎಂಥಿರ ಲೋಕತ್ತು ಸುಂದರಿಯೇ’ ಹಾಡಿಗೆ ಸುರಿಯಲಾಗಿತ್ತು.
ಇದನ್ನೂ ಓದಿ:ಶಾರುಖ್ ಖಾನ್ಗೆ ವಯಸ್ಸಾಗುವುದಿಲ್ಲ ಏಕೆ? ಆನಂದ್ ಮಹೀಂದ್ರಾ ಬಳಿ ಇದೆ ಉತ್ತರ
‘ರೋಬೊ 2.0’ ಸಿನಿಮಾದ ಒಟ್ಟಾರೆ ಬಜೆಟ್ ಸುಮಾರು 450 ಕೋಟಿಗೂ ಹೆಚ್ಚು. ರಜನೀಕಾಂತ್ ಮೂರು ಭಿನ್ನ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಏಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದರು. ನಿರ್ದೇಶಕ ಶಂಕರ್, ಅತ್ಯಾಧುನಿಕ ತಂತ್ರಜ್ಞಾನ, ವಿಎಫ್ಎಕ್ಸ್ ಗಳನ್ನು ಬಳಸಿ ಈ ಸಿನಿಮಾವನ್ನು ಸೆರೆ ಹಿಡಿದಿದ್ದರು. ಸಿನಿಮಾ ಹಿಟ್ ಆಯಿತಾದರೂ ಮೊದಲ ‘ರೋಬೊ’ವಿನಷ್ಟು ಪ್ರಶಂಸೆಯನ್ನು ಪಡೆಯಲಿಲ್ಲ.
‘ರೋಬೊ 2.0’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 800 ಕೋಟಿ ಹಣ ಗಳಿಸಿತು. ಸಿನಿಮಾವನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದರು. ‘ರೋಬೊ’ ಮೊದಲ ಭಾಗವನ್ನು ಅವರೇ ನಿರ್ಮಾಣ ಮಾಡಿದ್ದರು. ಇದೀಗ ಆಗಸ್ಟ್ 10 ರಂದು ಬಿಡುಗಡೆ ಆಗುತ್ತಿರುವ ರಜನೀಕಾಂತ್ರ ‘ಜೈಲರ್’ ಸಿನಿಮಾವನ್ನು ಸಹ ಕಲಾನಿಧಿ ಮಾರನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್ ನಿರ್ದೇಶಿಸಿದ್ದು, ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Thu, 3 August 23