83 Trailer: 1983ರ ವಿಶ್ವಕಪ್​ ಗೆಲುವಿನ ಹಿಂದೆ ಭಾರತ​ ತಂಡ ಪಟ್ಟ ಕಷ್ಟಗಳೇನು ಗೊತ್ತಾ? ‘83’ ಟ್ರೇಲರ್​ನಲ್ಲಿದೆ ಝಲಕ್​

| Updated By: ಮದನ್​ ಕುಮಾರ್​

Updated on: Nov 30, 2021 | 12:54 PM

Kapil Dev's 83: 1983ರಲ್ಲಿ ಭಾರತ ಕ್ರಿಕೆಟ್​ ತಂಡವು ವೆಸ್ಟ್​ ಇಂಡೀಸ್​ ವಿರುದ್ಧ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ ತಯಾರಾಗಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ.

83 Trailer: 1983ರ ವಿಶ್ವಕಪ್​ ಗೆಲುವಿನ ಹಿಂದೆ ಭಾರತ​ ತಂಡ ಪಟ್ಟ ಕಷ್ಟಗಳೇನು ಗೊತ್ತಾ? ‘83’ ಟ್ರೇಲರ್​ನಲ್ಲಿದೆ ಝಲಕ್​
‘83’ ಸಿನಿಮಾದಲ್ಲಿ ರಣವೀರ್ ಸಿಂಗ್
Follow us on

ರಣವೀರ್​ ಸಿಂಗ್ (Ranveer Singh) ವೃತ್ತಿಜೀವನದಲ್ಲಿ ಒಂದಕ್ಕಿಂತ ಒಂದು ಡಿಫರೆಂಟ್​ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಗೆಲ್ಲುತ್ತಿದ್ದಾರೆ. ಅವರ ಸೂಪರ್​ ಹಿಟ್​ ಸಿನಿಮಾಗಳ ಪಟ್ಟಿಗೆ ‘83’ ಚಿತ್ರ (83 Movie) ಕೂಡ ಸೇರ್ಪಡೆ ಆಗುವ ನಿರೀಕ್ಷೆ ದಟ್ಟವಾಗಿದೆ. ಕಬೀರ್​ ಖಾನ್​ (Kabir Khan) ನಿರ್ದೇಶನದ ಈ ಸಿನಿಮಾ ಡಿ.24ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ದೀಪಿಕಾ ಪಡುಕೋಣೆ (Deepika Padukone) ಕೂಡ ಈ ಚಿತ್ರದಲ್ಲೊಂದು ಪಾತ್ರ ಮಾಡಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈಗ ಟ್ರೇಲರ್​ (83 Movie Trailer) ಬಿಡುಗಡೆ ಆಗಿದ್ದು, ಭಾರಿ ಹೈಪ್​ ಸೃಷ್ಟಿ ಮಾಡಿದೆ. ಕನ್ನಡಕ್ಕೂ ಈ ಸಿನಿಮಾ ಡಬ್​ ಆಗಿ ತೆರೆಕಾಣುತ್ತಿದೆ ಎಂಬುದು ವಿಶೇಷ. ಸದ್ಯ ಟ್ರೇಲರ್​ ಮೂಲಕ ‘83’ ಚಿತ್ರ ಧೂಳೆಬ್ಬಿಸುತ್ತಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ‘83’ ಸಿನಿಮಾದ ಟ್ರೇಲರ್​ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಟೀಮ್​ ಇಂಡಿಯಾ 1983ರಲ್ಲಿ ವಿಶ್ವಕಪ್​ ಗೆದ್ದಾಗ ಪರಿಸ್ಥಿತಿ ಹೇಗಿತ್ತು? ಪ್ರತಿಯೊಬ್ಬ ಆಟಗಾರರು ಎದುರಿಸಿದ ಕಷ್ಟಗಳೇನು ಎಂಬುದನ್ನೆಲ್ಲ ಈ ಟ್ರೇಲರ್​ ವಿವರಿಸುತ್ತಿದೆ. ಕೇವಲ ಟ್ರೇಲರ್​ ನೋಡಿದ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಇನ್ನು ಪೂರ್ತಿ ಸಿನಿಮಾ ಎಷ್ಟು ಎಮೋಷನ್​ ಆಗಿ ಮೂಡಿಬಂದಿರಬಹುದು ಎಂಬ ನಿರೀಕ್ಷೆ ಮನೆ ಮಾಡಿದೆ.

ಮೂಲತಃ ಹಿಂದಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗಿನಲ್ಲಿ ‘83’ ರಿಲೀಸ್​ ಆಗಲಿದೆ. ಕನ್ನಡ ಅವತರಣಿಕೆಯನ್ನು ಸುದೀಪ್​ ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

ಸುದೀಪ್​ ಅವರು ಬಹಳ ಖುಷಿಯಿಂದ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ಅರ್ಪಿಸಲು ನನಗೆ ಸಂತೋಷ ಆಗುತ್ತದೆ. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹು ನಿರೀಕ್ಷೆಯ ಸಿನಿಮಾ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್​ಟೇನ್ಮೆಂಟ್​ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.

ಇದನ್ನೂ ಓದಿ:

ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್​ ಸಿರೀಸ್

‘ನಾಗಿಣಿ’ ಸೀರಿಯಲ್​ ನಟಿಯರಿಗೆ ರಣವೀರ್​ ಸಿಂಗ್ ಪೈಪೋಟಿ; ಸ್ನೇಕ್​ ಡ್ಯಾನ್ಸ್​ ಕಂಡು ನಿರ್ಮಾಪಕಿ ಫಿದಾ