ಬ್ಯಾನ್ ಮಧ್ಯೆಯೂ ಕಳ್ಳ ಮಾರ್ಗದಲ್ಲಿ ‘ಧುರಂಧರ್’ ವೀಕ್ಷಿಸಿದ 20 ಲಕ್ಷ ಪಾಕ್ ಮಂದಿ
'ಧುರಂಧರ್' ಚಿತ್ರದಲ್ಲಿ ರಣವೀರ್ ಸಿಂಗ್ ಪಾಕಿಸ್ತಾನದ ಉಗ್ರ ಸಂಘಟನೆಗಳ ವಿರುದ್ಧ ಹೋರಾಡುವ ಭಾರತೀಯ ಸೈನಿಕನ ಪಾತ್ರ ಮಾಡಿದ್ದಾರೆ. ಪಾಕಿಸ್ತಾನದ ಕೆಟ್ಟ ಕೆಲಸಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅಲ್ಲಿ ಸಿನಿಮಾ ಬ್ಯಾನ್ ಆದರೂ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಧುರಂಧರ್’ ಸಿನಿಮಾದಲ್ಲಿ (Dhurandhar Movie) ರಣವೀರ್ ಸಿಂಗ್ ಸ್ಪೈ ಪಾತ್ರ ಮಾಡಿದ್ದಾರೆ. ಭಾರತದ ಸೈನಿಕನೋರ್ವ ಪಾಕಿಸ್ತಾನದ ಉಗ್ರ ಸಂಘಟನೆ ಜೊತೆ ಸೇರಿ, ಅಲ್ಲಿಯವರಂತೆ ಬೆರೆತು ಅವರ ಎದೆಯಲ್ಲಿ ಭಯ ಹುಟ್ಟಿಸೋ ಕಥೆಯನ್ನು ಚಿತ್ರ ಹೊಂದಿದೆ. ಪಾಕಿಸ್ತಾನ ಮಾಡಿದ ಕೆಟ್ಟ ಕೆಲಸಗಳನ್ನು ತೋರಿಸಲಾಗಿದೆ. ಈ ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದೆ. ಆದರೂ ಸಿನಿಮಾ ಆ ದೇಶದಲ್ಲಿ ಸೂಪರ್ ಹಿಟ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.
ಭಾರತದಲ್ಲಿ ಪಾಕ್ ಸಿನಿಮಾಗಳು ಹಾಗೂ ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳು ಥಿಯೇಟರ್ನಲ್ಲಿ ಪ್ರದರ್ಶನ ಕಾಣುವುದಿಲ್ಲ. ಮೊದಲು ಹಿಂದಿ ಚಿತ್ರಕ್ಕೆ ಪಾಕಿಸ್ತಾನ ಕೂಡ ಒಂದು ದೊಡ್ಡ ಮಾರುಕಟ್ಟೆ ಆಗಿತ್ತು. ಆದರೆ, ಎರಡೂ ದೇಶಗಳ ಮಧ್ಯೆ ಮೂಡಿರುವ ದ್ವೇಷದ ಕಾರಣಕ್ಕೆ ಭಾರತದ ಸಿನಿಮಾ ಅಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಆದಾಗ್ಯೂ ಪಾಕ್ ಮಂದಿ ಚಿತ್ರವನ್ನು ವೀಕ್ಷಿಸಿದ್ದಾರೆ.
1999ರ ಖಂದಹಾರ್ ಹೈಜಾಕ್, 26/11ರ ಮುಂಬೈ ದಾಳಿ ಮದಲಾದ ವಿಷಯಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ಭಾರತದಲ್ಲಿ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಈ ಚಿತ್ರ ಕೇವಲ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಬರೋಬ್ಬರಿ 20 ಲಕ್ಷ ಬಾರಿ ಅಕ್ರಮವಾಗಿ ಡೌನ್ಲೋಡ್ ಆದ ಬಗ್ಗೆ ವರದಿ ಆಗಿದೆ. ಅಂದರೆ, ಕನಿಷ್ಠ 20 ಲಕ್ಷ ಪಾಕ್ ಮಂದಿ ಈ ಸಿನಿಮಾನ ವೀಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಬಾರಿ ಡೌನ್ಲೋಡ್ ಆದ ಪೈರೇಟೆಡ್ ಸಿನಿಮಾ ಇದಾಗಲಿದೆ.
ಪಾಕಿಸ್ತಾನ ಒಂದು ಉಗ್ರರಾಷ್ಟ್ರ ಎಂದು ಸಿನಿಮಾದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ನಿರ್ದೇಶಕ ಆದಿತ್ಯ ಧಾರ್. ಸಿನಿಮಾ ಈ ರೀತಿ ವೀಕ್ಷಣೆ ಕಂಡಿರುವುದರಿಂದ ನಿರ್ಮಾಪಕರಿಗೆ 50-60 ಕೋಟಿ ರೂಪಾಯಿ ನಷ್ಟ ಆಗಿದೆ. ಆದರೆ, ನಿರ್ದೇಶಕರು ಪಾಕಿಸ್ತಾನಕ್ಕೆ ತಲುಪಿಸಬೇಕಿದ್ದ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿದ್ದಾರೆ. ಪಾಕಿಸ್ತಾನ ಮಾಡಿದ ಕೆಟ್ಟ ಕೆಲಸಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾಗೆ ಸಿಕ್ಕ ಹೈಪ್ ನೋಡಿ ಅಲ್ಲಿನ ಜನರಿಗೆ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಸಿನಿಮಾದ ಪೈರಸಿ ಕಾಪಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?
ಧುರಂಧರ್ ಸಿನಿಮಾದ ಗಳಿಕೆ 460 ಕೋಟಿ ರೂಪಾಯಿ ಆಗಿದೆ. ಶನಿವಾರದ ವೇಳೆಗೆ ಸಿನಿಮಾದ ಕಲೆಕ್ಷನ್ 500 ಕೋಟಿ ರೂಪಾಯಿ ತಲುಪಲಿದೆ. ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ‘ಧುರಂಧರ್’ ಹೊರ ಹೊಮ್ಮುವ ಸಾಧ್ಯತೆ ಉದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Fri, 19 December 25




