‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

Ranveer Singh next movie: ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಗಳಿಕೆಯಲ್ಲಿ ಹೊಸ ದಾಖಲೆಗಳನ್ನೇ ಬರೆಯುತ್ತಿದೆ. ‘ಧುರಂಧರ್ 2’ ಸಿನಿಮಾದ ಚಿತ್ರೀಕರಣ ಶೀಘ್ರವೇ ಶರು ಸಹ ಆಗಲಿದೆ. ಆದರೆ ‘ಧುರಂಧರ್’ ಅಂಥಹಾ ದೊಡ್ಡ ಸಿನಿಮಾದ ಬಳಿಕ ರಣ್ವೀರ್ ಸಿಂಗ್ ಅವರು ಹಾರರ್ ಸಿನಿಮಾಕ್ಕೆ ಕೈ ಹಾಕಿದ್ದಾರೆ. ರಣ್ವೀರ್ ಅವರ ಈ ಹೊಸ ಹಾರರ್ ಸಿನಿಮಾಕ್ಕೆ ದಕ್ಷಿಣ ಭಾರತದ ನಟಿ ನಾಯಕಿ.

‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್
Ranveer Singh

Updated on: Jan 21, 2026 | 10:36 PM

ಬಾಲಿವುಡ್​ನ ಸ್ಟಾರ್ ನಟ ರಣ್ವೀರ್ ಸಿಂಗ್ (Ranveer Singh), ‘ಧುರಂಧರ್’ ಸಿನಿಮಾ ಮೂಲಕ ಭಾರಿ ದೊಡ್ಡ ಯಶಸ್ಸು ಗಳಿಸಿದ್ದಾರೆ. ಈ ಹಿಂದಿನ ತಮ್ಮ ಸೋಲುಗಳಿಗೆಲ್ಲ ಮುಯ್ಯಿ ತೀರಿಸಿಕೊಂಡಿದ್ದಾರೆ ‘ಧುರಂಧರ್’ ಸಿನಿಮಾ ಮೂಲಕ. ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬರುತ್ತಿದ್ದರೂ ಸಿನಿಮಾದ ಕಲೆಕ್ಷನ್​ ಇಳಿಕೆ ಆಗಿಲ್ಲ. ‘ಧುರಂಧರ್’ ಸಿನಿಮಾದ ಎರಡನೇ ಭಾಗವೂ ಬಿಡುಗಡೆಯ ಘೋಷಣೆ ಈಗಾಗಲೇ ಮಾಡಲಾಗಿದ್ದು ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ ಎಂದಿದ್ದಾರೆ. ಆದರೆ ರಣ್ವೀರ್ ಸಿಂಗ್ ‘ಧುರಂಧರ್’ ಅಂಥಹಾ ದೊಡ್ಡ ಹಿಟ್ ಸಿನಿಮಾ ಕೊಟ್ಟ ಬಳಿಕ ಹಾರರ್ ಸಿನಿಮಾಕ್ಕೆ ಕೈಹಾಕಿದ್ದಾರೆ.

ರಣ್ವೀರ್ ಸಿಂಗ್, ವ್ಯಾಂಪೈರ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಮಲಯಾಳಂನಲ್ಲಿ ಹಿಟ್ ಆಗಿರುವ ‘ಲೋಕಃ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಇದು ವ್ಯಾಂಪೈರ್ ಸಿನಿಮಾವೇ ಆಗಿದೆ. ‘ಲೋಕಃ’ ಸಿನಿಮಾನಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದರು. ಇದೀಗ ಅದೇ ಕಲ್ಯಾಣಿ ಪ್ರಿಯದರ್ಶನ್ ಅವರು ರಣ್ವೀರ್ ಸಿಂಗ್ ನಟಿಸಲಿರುವ ಹೊಸ ವ್ಯಾಂಪೈರ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ನಿರ್ದೇಶನ ಮಾಡಲಿರುವುದು ಕಲ್ಯಾಣಿ ಪ್ರಿಯದರ್ಶನ್ ಅವರ ತಂದೆ, ಲಿಜೆಂಡರಿ ನಿರ್ದೇಶಕ ಪ್ರಿಯದರ್ಶನ್.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ

ಪ್ರಿಯದರ್ಶನ್ ಅವರು ‘ಪ್ರಲಯ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದು, ಈ ಸಿನಿಮಾ ವ್ಯಾಂಪೈರ್​​ಗಳ ಕತೆಯನ್ನು ಒಳಗೊಂಡಿರಲಿದೆ. ಇದೇ ಸಿನಿಮಾನಲ್ಲಿ ರಣ್ವೀರ್ ಸಿಂಗ್ ಸಹ ನಟಿಸಲಿದ್ದಾರೆ. ಪ್ರಿಯದರ್ಶನ್ ಅವರ ಪುತ್ರಿ ಕಲ್ಯಾಣಿ ಪ್ರಿಯದರ್ಶಿನಿ ಸಿನಿಮಾದ ನಾಯಕಿ. ಕಲ್ಯಾಣಿ ಅವರು ಇಲ್ಲಿಯೂ ಸಹ ವ್ಯಾಂಪೈರ್ ಪಾತ್ರದಲ್ಲಿ ನಟಿಸಲಿದ್ದಾರೆ. ‘ಲೋಕಃ’ ಸಿನಿಮಾನಲ್ಲಿಯೂ ಅವರು ವ್ಯಾಂಪೈರ್ ಪಾತ್ರದಲ್ಲಿ ನಟಿಸಿದ್ದರು.

ರಣ್ವೀರ್ ಸಿಂಗ್ ಪಾಲಿಗೆ ಇದು ಮೊಟ್ಟ ಮೊದಲ ಹಾರರ್​ ಸಿನಿಮಾ ಆಗಲಿದೆ. ಬಾಲಿವುಡ್​ನಲ್ಲಿ ಇತ್ತೀಚೆಗೆ ಒಂದರ ಹಿಂದೆ ಒಂದರಂತೆ ಹಾರರ್ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು ಹಿಟ್ ಸಹ ಆಗುತ್ತಿವೆ. ಇದೇ ಕಾರಣಕ್ಕೆ ಇದೀಗ ರಣ್ವೀರ್ ಸಿಂಗ್ ಅವರು ಹಾರರ್ ಸಿನಿಮಾ ಮೇಲೆ ಕಣ್ಣು ಹಾಕಿದ್ದಾರೆ. ‘ಧುರಂಧರ್ 2’ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ‘ಪ್ರಳಯ್’ ಸಿನಿಮಾದ ಚಿತ್ರೀಕರಣದಲ್ಲಿ ರಣ್ವೀರ್ ಸಿಂಗ್ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ