ಮೈಸೂರು ಹುಡುಗನ ಮದುವೆ ಆಗಿದ್ದ ಈ ನಟಿಗೆ ಈಗ ಪಾಕ್ ಪ್ರಜೆಯ ಮದುವೆ ಆಗೋ ಆಸೆ
ರಾಖಿ ಸಾವಂತ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ರಿತೇಶ್ ಸಿಂಗ್, ಮೈಸೂರಿನ ಆದಿಲ್ ಖಾನ್ ಜೊತೆಗಿನ ಮದುವೆಗಳು, ಇಸ್ಲಾಂ ಮತಾಂತರ ಮತ್ತು ವಿಚ್ಛೇದನಗಳು ದೊಡ್ಡ ವಿವಾದ ಸೃಷ್ಟಿಸಿವೆ. ಪಾಕಿಸ್ತಾನಿ ನಟ ದೋಡಿ ಖಾನ್ ಜೊತೆ ಮದುವೆಯಾಗುವ ಆಸೆ ವ್ಯಕ್ತಪಡಿಸಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಅವರ ಪ್ರತಿಯೊಂದು ಸಂಬಂಧವೂ ಸಾರ್ವಜನಿಕರ ಗಮನ ಸೆಳೆಯುತ್ತದೆ.

ರಾಖಿ ಸಾವಂತ್ (Rakhi Sawanth) ಅವರು ಬಾಲಿವುಡ್ ಮಂದಿಗೆ ಮಾತ್ರವಲ್ಲ ಉಳಿದ ಚಿತ್ರರಂಗದವರಿಗೂ ಪರಿಚಿತರು. ಅವರು ಸುದ್ದಿಯಲ್ಲಿರಲು ಸದಾ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅವರು ವಿವಾಹ, ವಿವಾಹೇತರ ಸಂಬಂಧ ಇತ್ಯಾದಿ ವಿಷಯಕ್ಕೆ ಸುದ್ದಿ ಆಗುತ್ತಿದ್ದಾರೆ. ಅವರು ಮೈಸೂರು ಹುಡುಗನ ವಿವಾಹ ಆಗಿದ್ದರು. ಆ ಬಳಿಕ ಇಬ್ಬರೂ ಬೇರೆ ಆದರು. ಈಗ ಅವರಿಗೆ ಪಾಕ್ ಹುಡುಗನ ಮದುವೆ ಆಗೋ ಆಸೆ.
ರಾಖಿ ಸಾವಂತ್ ಅವರು 2019ರಲ್ಲಿ ಭಾರತ ಮೂಲದ ವಿದೇಶಿ ಪ್ರಜೆ ರಿತೇಶ್ ರಾಜ್ ಸಿಂಗ್ನ ಮದುವೆ ಆದರು. 2022ರಲ್ಲಿ ಇವರು ಬೇರೆ ಆದರು. ‘ಮದುವೆ ಮಾಡಿ ತಪ್ಪು ಮಾಡಿದೆ’ ಎಂದು ಅವರು ಹೇಳಿದ್ದರು. ನಂತರ 2022ರಲ್ಲಿ ಅವರು ಮತ್ತೆ ಸುದ್ದಿ ಆದರು. ಮೈಸೂರು ಮೂಲದ ಆದಿಲ್ ಖಾನ್ ಜೊತೆ ರಾಖಿ ವಿವಾಹ ಆದರು.
ಮುಸ್ಲಿಂ ಧರ್ಮದ ಪ್ರಕಾರ ರಾಖಿ ವಿವಾಹ ಆದರು. ಮುಸ್ಲಿಂ ಧರ್ಮಕ್ಕೆ ಅವರು ಮತಾಂತರಗೊಂಡರು. ಇಷ್ಟೆಲ್ಲ ಮಾಡಿಯೂ ಇವರ ಸಂಬಂಧ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. ‘ಆದಿಲ್ ನನಗೆ ಮೋಸ ಮಾಡಿದ, ಆತನಿಗೆ ಅನೈತಿಕ ಸಂಬಂಧ ಇದೆ’ ಎಂದು ರಾಖಿ ಆರೋಪಿಸಿದರು. ಅವರು ನೀಡಿದ ದೂರಿನ ಮೇಲೆ ಆದಿಲ್ನ ಮೈಸೂರಿನಲ್ಲಿ ಬಂಧನ ಕೂಡ ಮಾಡಲಾಯಿತು.
2025ರಲ್ಲಿ ರಾಖಿ ಪಾಕ್ ನಟನ ಮೇಲೆ ಆಸಕ್ತಿ ತೋರಿಸಿದ್ದರು. ರಾಖಿ ಅವರು ಪಾಕಿಸ್ತಾನದ ನಟ ಹಾಗೂ ಪೊಲೀಸ್ ಅಧಿಕಾ ದೋಡಿ ಖಾನ್ ಜೊತೆ ಮದುವೆ ಆಗುವ ಇಚ್ಛೆ ತೋರಿದರು. ‘ನನಗೆ ಹಲವು ಪ್ರಪೋಸಲ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಹೇಗೆ ಕಿರುಕುಳ ನೀಡಲಾಗಿದೆ ಎಂಬುದನ್ನು ನೋಡಿ, ವಿವರಿಸಿದ್ದರು’ ಎಂದಿದ್ದರು ರಾಖಿ.
ಇದನ್ನೂ ಓದಿ: ‘ಮದುವೆ ಆಗಲ್ಲ’: ರಾಖಿ ಸಾವಂತ್ಗೆ ಪ್ರಪೋಸ್ ಮಾಡಿ ಉಲ್ಟಾ ಹೊಡೆದ ಪಾಕ್ ಮಾಡೆಲ್
ನಂತರ ದೋಡಿ ಖಾನ್ ಈ ಬಗ್ಗೆ ಸ್ಪಷ್ಟನೆ ನೀಡಿದರು. ‘ನಾನು ರಾಖಿಗೆ ಪ್ರಪೋಸ್ ಮಾಡಿದ್ದು ನಿಜ. ಆದರೆ, ಮದುವೆ ಆಗಲ್ಲ’ ಎಂದಿದ್ದರು. ಈ ವಿಷಯ ಚರ್ಚೆಗೆ ಕಾರಣ ಆಗಿತ್ತು. ಈಗ ರಾಖಿ ಸೈಲೆಂಟ್ ಆಗಿದ್ದಾರೆ. ಈ ಮೊದಲು ಅವರು ಹಿಂದಿ ಬಿಗ್ ಬಾಸ್ನಲ್ಲಿ ಸ್ಪರ್ಧೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




