AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ರೀತಿಯೇ ಸಖತ್ ರಾ ಆಗಿರಲಿದೆ ‘ಧುರಂದರ್ 2’ ಟೀಸರ್

ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಚಿತ್ರ ಯಶಸ್ಸಿನ ನಂತರ, ಅದರ ಸೀಕ್ವೆಲ್ 'ಧುರಂಧರ್ 2: ದಿ ರಿವೆಂಜ್' ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಚಿತ್ರದ ಟೀಸರ್‌ಗೆ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣಪತ್ರ ದೊರೆತಿದೆ. 1 ನಿಮಿಷ 48 ಸೆಕೆಂಡ್ ಅವಧಿಯ ಈ ಟೀಸರ್ ಸಾಕಷ್ಟು ಆಕ್ಷನ್, ಹಿಂಸೆಯಿಂದ ಕೂಡಿದ್ದು, 'ಬಾರ್ಡರ್ 2' ಚಿತ್ರದೊಂದಿಗೆ ಪ್ರದರ್ಶನಗೊಳ್ಳಲಿದೆ.

‘ಟಾಕ್ಸಿಕ್’ ರೀತಿಯೇ ಸಖತ್ ರಾ ಆಗಿರಲಿದೆ ‘ಧುರಂದರ್ 2’ ಟೀಸರ್
ರಣವೀರ್-ಯಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 21, 2026 | 7:48 AM

Share

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರು ಈ ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಬಿಡುಗಡೆಯಾದ ಒಂದೂವರೆ ತಿಂಗಳ ನಂತರವೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್’ (Dhurandhar) ವಿಶ್ವಾದ್ಯಂತ 1300 ಕೋಟಿ ರೂ. ಗಳಿಸಿದೆ. ಈಗ ಚಿತ್ರದ ಟೀಸರ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.

‘ಧುರಂದರ್’ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಧುರಂಧರ್’ ಚಿತ್ರದ ಕೊನೆಯಲ್ಲಿ, ಚಿತ್ರಕ್ಕೆ ಎರಡನೇ ಪಾರ್ಟ್ ಬರಲಿದೆ ಎಂದು ಘೋಷಿಸಲಾಯಿತು. ಎರಡನೇ ಭಾಗವಾದ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡನೇ ಭಾಗದ ಟೀಸರ್ ಸಖತ್ ರಾ ಆಗಿರೋ ನಿರೀಕ್ಷೆ ಇದೆ.

ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ತಿಳಿದಿದ್ದಾರೆ. ಆದ್ದರಿಂದ, ಪ್ರೇಕ್ಷಕರಿಂದ ಯಾವುದೇ ಅಸಮಾಧಾನವನ್ನು ತಪ್ಪಿಸಲು, ಅವರು ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ ಅನ್ನು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ಶಕ್ತಿಶಾಲಿಯಾಗಿ ಮಾಡಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರ ದೊರೆತಿದೆ.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಜನವರಿ 19ರಂದು ಈ ಟೀಸರ್ ಅನ್ನು ಅನುಮೋದಿಸಿ ಎ ಪ್ರಮಾಣಪತ್ರವನ್ನು ನೀಡಿದೆಯಂತೆ. ಈ ಟೀಸರ್‌ನ ಅವಧಿ ಸುಮಾರು 1 ನಿಮಿಷ 48 ಸೆಕೆಂಡುಗಳು. ಪ್ರೇಕ್ಷಕರು ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್‌ನಲ್ಲಿ ಬಹಳಷ್ಟು ಆಕ್ಷನ್ ಮತ್ತು ಹಿಂಸೆಯನ್ನು ನೋಡುತ್ತಾರೆ. ಈ ಮೊದಲು ಬಂದ ‘ಟಾಕ್ಸಿಕ್’ ಟೀಸರ್ ಕೂಡ ರಾ ಆಗಿತ್ತು. ಈಗ ಈ ಟೀಸರ್ ಕೂಡ ಹಾಗೆಯೇ ಇರುವ ನಿರೀಕ್ಷೆ ಇದೆ.

‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ ಸನ್ನಿ ಡಿಯೋಲ್ ಅವರ ‘ಬಾರ್ಡರ್ 2’ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. ಅಂದರೆ, ಬಾರ್ಡರ್ 2 ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರು, ಮಧ್ಯಂತರದಲ್ಲಿ ಅಥವಾ ಆರಂಭದಲ್ಲಿ ಧುರಂಧರ್ 2 ಚಿತ್ರದ ಟೀಸರ್ ಅನ್ನು ನೋಡುತ್ತಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?

ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಕಂದಹಾರ್ ವಿಮಾನ ಅಪಹರಣ, 2001 ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಯ ನಂತರ ಗುಪ್ತಚರ ಸಂಸ್ಥೆಗಳ ಚಟುವಟಿಕೆಗಳನ್ನು ಆಧರಿಸಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.