ಗಾಯಕ ಬಾದ್​ಶಾ ಬಳಿ ಇದೆ 22 ಲಕ್ಷ ಬೆಲೆಯ ಶೂ, ರೋಲ್ಸ್ ರಾಯ್ಸ್ ಕಾರು ವೇಸ್ಟ್ ಅಂತೆ

|

Updated on: Sep 13, 2024 | 2:58 PM

Badshah: ರ್ಯಾಪರ್ ಬಾದ್​ಶಾ ಬಳಿ ಇದೆ 22 ಲಕ್ಷ ರೂಪಾಯಿ ಬೆಲೆಯ ಶೂ. ಆದರೆ ಈ ಶೂ ಅನ್ನು ಅವರು ಧರಿಸುವುದಿಲ್ಲ, ವಿಶೇಷ ದಿನಕ್ಕಾಗಿ ಆ ಶೂ ಅನ್ನು ಅವರು ಎತ್ತಿಟ್ಟಿದ್ದಾರೆ. ಅಂದಹಾಗೆ ಬಾದ್​ಶಾ ಬಳಿ 1000 ಕ್ಕೂ ಹೆಚ್ಚು ಜತೆ ಶೂಗಳಿವೆ.

ಗಾಯಕ ಬಾದ್​ಶಾ ಬಳಿ ಇದೆ 22 ಲಕ್ಷ ಬೆಲೆಯ ಶೂ, ರೋಲ್ಸ್ ರಾಯ್ಸ್ ಕಾರು ವೇಸ್ಟ್ ಅಂತೆ
Follow us on

ಸಂಗೀತ ಕಲಿತ ಅನೇಕರು ರಿಯಾಲಿಟಿ ಶೋಗಳನ್ನು ಬಿಟ್ಟು ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಮಂದಿ ಒಳ್ಳೆಯ ಗಾಯಕರು ಟ್ರ್ಯಾಕ್ ಹಾಡುಗಳನ್ನು ಹಾಡಲಷ್ಟೆ ಸೀಮಿತವಾಗಿಬಿಟ್ಟಿದ್ದಾರೆ. ಆದರೆ ರ್ಯಾಪರ್​ಗಳು, ಇಂಡಿವಿಷ್ಯುಲ್ ಮ್ಯೂಸಿಕ್ ಕ್ರಿಯೇಟರ್​ಗಳು ದಿನಕ್ಕೆ ಲಕ್ಷಾಂತರ ರೂಪಾಯಿ ಹಣ ಮಾಡುತ್ತಿದ್ದಾರೆ. ಭಾರತದ ಜನಪ್ರಿಯ ರ್ಯಾಪರ್​ಗಳಲ್ಲಿ ಒಬ್ಬರಾದ ಬಾದ್​ಶಾ, ತಮ್ಮ ಹಾಡುಗಳಿಗಿಂತಲೂ ಹೆಚ್ಚಾಗಿ ತಮ್ಮ ಐಶಾರಾಮಿ ಜೀವನ ಶೈಲಿಯಿಂದ ಪರಿಚಿತರು. ಗುಚ್ಚಿ, ಪ್ರಾಡಾ ಇನ್ನಿತರೆ ಇಟಲಿಯ ಐಶಾರಾಮಿ ಬ್ರ್ಯಾಂಡ್​ಗಳ ಬಟ್ಟೆಗಳನ್ನೇ ಧರಿಸುವ ಬಾದ್​ಶಾ ಬಳಿ 22 ಲಕ್ಷ ರೂಪಾಯಿ ಬೆಲೆಯ ಒಂದು ಜೊತೆ ಶೂಗಳಿವೆಯಂತೆ!

ಹೌದು, ಬಾದ್​ಶಾ ಕೇವಲ ಒಂದು ಜೊತೆ ಶೂಗಳಿಗೆ 22 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಆದರೆ ಈ ಶೂಗಳನ್ನು ಅವರು ತೊಡುವುದಿಲ್ಲ ಬದಲಿಗೆ ಒಂದು ವಿಶೇಷ ಸಂದರ್ಭಕ್ಕಾಗಿ ಆ ಶೂಗಳನ್ನು ಎತ್ತಿಟ್ಟಿದ್ದಾರೆ ಬಾದ್​ಶಾ. ರ್ಯಾಪರ್ ಆಗಿರುವ ಬಾದ್​ಶಾ, ತಮಗೆ ಯಾವಾಗ ಗ್ರ್ಯಾಮಿ ಪ್ರಶಸ್ತಿ ಬರುತ್ತದೆಯೋ, ಆ ಪ್ರಶಸ್ತಿ ಸ್ವೀಕರಿಸಲು ಹೋಗುವ ಸಂದರ್ಭದಲ್ಲಿ ಧರಿಸಲೆಂದು ಆ ಶೂಗಳನ್ನು ಎತ್ತಿಟ್ಟಿದ್ದಾರಂತೆ.

ಇದನ್ನೂ ಓದಿ:ಬಚ್​ಪನ್​ಕಾ ಪ್ಯಾರ್​ ಖ್ಯಾತಿಯ ಸಹದೇವ್ ದಿರ್ಡೋಗೆ ಅಪಘಾತ: ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡ ಬಾದ್​ ಶಾ

‘ನೈಕಿ ಯೀಜಿ 2’ ಶೂಗಳಿಗೆ ಅವರು 22 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಖ್ಯಾತ ರ್ಯಾಪರ್ ಕಾನ್ಯೆ ವೆಸ್ಟ್, ನೈಕಿ ಜೊತೆ ಕೊಲಾಬರೇಟ್ ಆದಾಗ ಬಿಡುಗಡೆ ಮಾಡಲಾಗಿದ್ದ ಶೂಗಳವು. ಈ ಶೂಗಳಿಗೆ ಸ್ನೀಕರ್ ಕಮ್ಯುನಿಟಿಯಲ್ಲಿ ವಿಶೇಷ ಗೌರವ ಇದೆ. ಈ ನೈಕಿ ಯೀಜಿ ಶೂ ಮಾದರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವೂ ಇದೆ. ಅದೊಂದು ರೀತಿ ಕಲ್ಚರಲ್ ಹಿಸ್ಟರಿ ರೀತಿಯಾಗಿ ನೋಡಲಾಗುತ್ತದೆ. ಕಾನ್ಯೆ ವೆಸ್ಟ್​ನ ಅಭಿಮಾನಿಯೂ ಆಗರುವ ಬಾದ್​ಶಾ ಅದೇ ಕಾರಣಕ್ಕೆ 22 ಲಕ್ಷ ರೂಪಾಯಿ ಕೊಟ್ಟು ಈ ಶೂಗಳನ್ನು ಖರೀದಿ ಮಾಡಿದ್ದಾರಂತೆ. ಅಂದಹಾಗೆ ಬಾದ್​ಶಾ ಬಳಿ 1000 ಕ್ಕೂ ಹೆಚ್ಚು ಜೊತೆ ಶೂಗಳಿವೆ. ಶೂಗಳೆಂದರೆ ಅಪಾರ ಪ್ರೀತಿಯಂತೆ ಬಾದ್​ಶಾಗೆ. ಆದರೆ ಬಾದ್​ ಶಾ ಹೇಳಿರುವಂತೆ ಸುಮಾರು 8-10 ರೀತಿಯ ಶೂಗಳನ್ನಷ್ಟೆ ಅವರು ಪದೇ ಪದೇ ಧರಿಸುತ್ತಾರೆ. ಉಳಿದ ಶೂಗಳನ್ನು ಕಲೆಕ್ಷನ್ ಕಾರಣಕ್ಕೆ ಇಟ್ಟುಕೊಂಡಿದ್ದಾರೆ.

ಇನ್ನು ತಮ್ಮ ಕಾರುಗಳ ಕಲೆಕ್ಷನ್ ಬಗ್ಗೆಯೂ ಬಾದ್​ಶಾ ಮಾತನಾಡಿದ್ದು, ತಮ್ಮ 8 ಕೋಟಿ ಬೆಲೆಯ ರೋಲ್ಸ್ ರಾಯ್ಸ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೊಂದು ವೇಸ್ಟ್ ಗಾಡಿ ಎಂದಿದ್ದಾರೆ ಅಲ್ಲದೆ, ರೋಲ್ಸ್ ರಾಯ್ಸ್​ ಬದಲು ಸ್ವಿಫ್ಟ್ ಅಥವಾ ಇನ್ನೋವಾ ಕಾರೇ ನನಗೆ ಹೆಚ್ಚು ಇಷ್ಟವಾಗುತ್ತದೆ. ಸಾಧಾರಣವಾಗಿ ಅದೇ ಕಾರುಗಳನ್ನು ನಾನು ಬಳಸುತ್ತೇನೆ ಎಂದಿದ್ದಾರೆ ಬಾದ್​ಶಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ