ನಟಿ ರಶ್ಮಿಕಾ ಮಂದಣ್ಣ ಅವರು ಕಳೆದ ಕೆಲ ವರ್ಷಗಳಿಂದ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರು ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿ, ಈಗ ಬಾಲಿವುಡ್ವರೆಗೆ ತೆರಳಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ ಸಿನಿಮಾಗೆ ಅವರೇ ನಾಯಕಿ ಅನ್ನೋದು ಗೊತ್ತಿರುವ ವಿಚಾರ. ಈಗ ನಾವು ಹೇಳುತ್ತಿರುವ ಹೊಸ ವಿಚಾರ ಏನೆಂದರೆ ಅವರು ಶೀಘ್ರವೇ ಅವರು ಸಲ್ಮಾನ್ ಖಾನ್ ಜೊತೆ ಯುರೋಪ್ಗೆ ಹಾರಲಿದ್ದಾರೆ. ಅಲ್ಲಿ ಅವರು ಹಾಡುಗಳ ಶೂಟಿಂಗ್ ಮಾಡಲಿದ್ದಾರೆ.
ಬಾಲಿವುಡ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹೀರೋಯಿನ್ಗಳು ನಾಮಕಾವಸ್ತೆಗೆ ಇರುತ್ತಾರೆ. ಸಾಂಗ್ ಹಾಗೂ ಕೆಲವು ರೊಮ್ಯಾಂಟಿಕ್ ದೃಶ್ಯಗಳಿಗೆ ಅವರು ಸೀಮಿತ ಆಗುತ್ತಾರೆ. ‘ಸಿಖಂದರ್’ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಕೂಡ ಅಷ್ಟಕ್ಕೇ ಸೀಮಿತಿ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದ ಕಡೆಯಿಂದ ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕದೆ.
ಎರಡು ಸಾಂಗ್ಗಳನ್ನು ಕಂಪೋಸ್ ಮಾಡಲಾಗಿದ್ದು, ದೊಡ್ಡ ಬಜೆಟ್ನಲ್ಲಿ ಈ ಹಾಡುಗಳನ್ನು ಯುರೋಪ್ನಲ್ಲಿ ಶೂಟ್ ಮಾಡೋ ಪ್ಲ್ಯಾನ್ ಇದೆ. ಸದ್ಯ ಯುರೋಪ್ನಲ್ಲಿ ಲೊಕೇಶ್ ಹುಡುಕಾಟ ನಡೆಯುತ್ತಿದೆ. ಈ ಹಾಡಿಗಾಗಿ ಸುಂದರ ತಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಸಾಂಗ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ
ಹಾಡಿನ ಜೊತೆಗೆ ಕೆಲವು ಪ್ರಮುಖ ದೃಶ್ಯಗಳ ಶೂಟ್ ಕೂಡ ಯುರೋಪ್ನಲ್ಲಿ ನಡೆಯಲಿದೆಯಂತೆ. ಮೊದಲೇ ಹೇಳಿದಂತೆ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಅವರು ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
‘ಸಿಖಂದರ್’ ಸಿನಿಮಾ 2025ರ ಈದ್ಗೆ ರಿಲೀಸ್ ಆಗಲಿದೆ. ಎರಡು ಹಾಡುಗಳ ಪೈಕಿ ಒಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು ಮತ್ತೊಂದು ಡ್ಯಾನ್ಸ್ ನಂಬರ್ ಆಗಿರಲಿದೆ. ಈ ಚಿತ್ರದಲ್ಲಿ ಬಾಹುಬಲಿಯಲ್ಲಿ ಕಟ್ಟಪ್ಪ ಪಾತ್ರ ಮಾಡಿದ್ದ ಸತ್ಯರಾಜ್ ವಿಲನ್ ಪಾತ್ರ ಮಾಡುತ್ತಿದ್ದಾರೆ.
ರಶ್ಮಿಕಾಗೆ ಇತ್ತೀಚೆಗೆ ಅಪಘಾತ ಆಗಿತ್ತು. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಕಳೆದ ತಿಂಗಳು ನನಗೆ ಚಿಕ್ಕ ಅಪಘಾತ ಆಯಿತು. ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇದ್ದು ಚೇತರಿಸಿಕೊಂಡೆ. ಈಗ ನಾನು ಚೆನ್ನಾಗಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಎದುರು ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ