Rashmika Mandanna: ಅನಿಲ್ ಕಪೂರ್ ಕಂಡು ರಶ್ಮಿಕಾಗೆ ಖುಷಿಯೋ ಖುಷಿ

ಬಾಲಿವುಡ್​ಗೆ ಎಂಟ್ರಿ ಕೊಟ್ಟು ಎರಡೇ ವರ್ಷವಾಗಿದ್ದರೂ ಸಹ ರಶ್ಮಿಕಾ ಮಂದಣ್ಣ ಬಾಲಿವುಡ್ ಮಂದಿಯಲ್ಲಿ ಒಬ್ಬರಾಗಿಬಿಟ್ಟಿದ್ದಾರೆ.

Rashmika Mandanna: ಅನಿಲ್ ಕಪೂರ್ ಕಂಡು ರಶ್ಮಿಕಾಗೆ ಖುಷಿಯೋ ಖುಷಿ
ರಶ್ಮಿಕಾ ಮಂದಣ್ಣ-ಅನಿಲ್ ಕಪೂರ್

Updated on: Mar 25, 2023 | 3:04 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ (Bollywood) ಕಾಲಿಟ್ಟು ಎರಡು ವರ್ಷವೂ ಪೂರ್ಣವಾಗಿಲ್ಲ ಆಗಲೇ ಅಲ್ಲಿ ಜನಪ್ರಿಯತೆಗಳಿಸಿದ್ದಾರೆ ಮಾತ್ರವಲ್ಲ ಬಾಲಿವುಡ್​ನಲ್ಲಿ ಒಬ್ಬರು ಎಂಬಂತಾಗಿದ್ದಾರೆ. ಬಾಲಿವುಡ್​ನ ಪಾರ್ಟಿಗಳು, ಕಾರ್ಯಕ್ರಮಗಳು, ಅವಾರ್ಡ್ (Award) ಕಾರ್ಯಕ್ರಮಗಳು, ಸಂದರ್ಶನಗಳನ್ನು ಒಂದರ ಹಿಂದೆ ಒಂದರಂತೆ ಅಟೆಂಡ್ ಮಾಡುತ್ತಿರುವ ರಶ್ಮಿಕಾ ಈಗ ಬಾಲಿವುಡ್​ಗೆ ಬಾಲಿವುಡ್​ನ ಜನರಿಗೆ ಚಿರಪರಿಚಿತ ನಟಿ.

ಹಲವು ದಶಕಗಳಿಂದಲೂ ಬಾಲಿವುಡ್​ನಲ್ಲಿ ನೆಲೆ ನಿಂತಿರುವ ಸ್ಟಾರ್ ನಟ ಅನಿಲ್ ಕಪೂರ್ (Anil Kapoor) ಅವರನ್ನು ನಟಿ ರಶ್ಮಿಕಾ ನಿನ್ನೆಯಷ್ಟೆ ಅಚಾನಕ್ಕಾಗಿ ಭೇಟಿಯಾಗಿದ್ದಾರೆ. ಅದೂ ಸ್ವತಃ ಅನಿಲ್ ಕಪೂರ್ ಅವರೇ ರಶ್ಮಿಕಾರನ್ನು ಪ್ರೀತಿಯಿಂದ ಮಾತನಾಡಿಸಿ ಕುಶಲೋಪರಿ ವಿಚಾರಿಸಿದ್ದಾರೆ. ಅನಿಲ್ ಕಪೂರ್ ರ ಈ ವಿನಯತೆ ಕಂಡು ರಶ್ಮಿಕಾ ಬಹಳ ಖುಷ್ ಆಗಿದ್ದಾರೆ.

ಆಗಿದ್ದಿಷ್ಟು, ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್ ಹಂಗಾಮಾ ಸ್ಟೈಲ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದ್ದ ಹಾಲ್​ಗೆ ಹೋಗುವ ಮುನ್ನ ರೆಡ್ ಕಾರ್ಪೆಟ್ ಮಾದರಿಯೊಂದು ಇತ್ತು. ಅಲ್ಲಿ ನಿಂತು ರಶ್ಮಿಕಾ ಪಾಪರಾಟ್ಜಿಗಳ ಕ್ಯಾಮೆರಾಕ್ಕೆ ಫೋಸು ನೀಡುತ್ತಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಅನಿಲ್ ಕಪೂರ್ ರಶ್ಮಿಕಾರನ್ನು ಕಂಡು ಬಹು ಆತ್ಮೀಯವಾಗಿ ಮಾತನಾಡಿಸಿದರು. ಬಳಿಕ ರಶ್ಮಿಕಾರ ಜೊತೆ ನಿಂತು ತಾವೂ ಸಹ ಪಾಪರಾಟ್ಜಿಗಳಿಗೆ ಫೋಸು ನೀಡಿದರು. ರಶ್ಮಿಕಾರೊಟ್ಟಿಗೆ ಆತ್ಮೀಯವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ತೆರಳಿದರು. ಅನಿಲ್ ಕಪೂರ್ ಅವರು ತಮ್ಮನ್ನು ಮಾತನಾಡಿಸಿದ್ದಕ್ಕೆ ಬಹಳ ಖುಷಿಯಾದಂತೆ ಕಂಡರು ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಇದೀಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ, ತೆಲುಗಿನಲ್ಲಿ ದೊಡ್ಡದಾಗಿ ಮಿಂಚಿ ಕಳೆದೆರಡು ವರ್ಷಗಳಿಂದ ಬಾಲಿವುಡ್​ನಲ್ಲಿ ನೆಲೆ ನಿಲ್ಲುವ ಯತ್ನದಲ್ಲಿದ್ದಾರೆ. ಈಗಾಗಲೇ ರಶ್ಮಿಕಾ ನಟಿಸಿರುವ ಎರಡು ಹಿಂದಿ ಸಿನಿಮಾಗಳು ಬಿಡುಗಡೆ ಆಗಿವೆಯಾದರೂ ಎರಡೂ ಸಹ ದೊಡ್ಡ ಹಿಟ್ ಎನಿಸಿಕೊಂಡಿಲ್ಲ. ಆದರೆ ಪ್ರಸ್ತುತ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದು, ಆ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಇದರ ಜೊತೆಗೆ ವರುಣ್ ಧವನ್ ಹಾಗೂ ಟೈಗರ್ ಶ್ರಾಫ್ ಜೊತೆಗೂ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್​ನಲ್ಲಿ ಮಾತ್ರವೇ ಅಲ್ಲದೆ ದಕ್ಷಿಣದ ಸಿನಿಮಾಗಳಲ್ಲಿಯೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ, ಇದೀಗ ನಿತಿನ್ ಜೊತೆಗೆ ಹೊಸ ಸಿನಿಮಾ ಸಹಿ ಮಾಡಿದ್ದಾರೆ. ತಮಿಳಿನಲ್ಲಿಯೂ ಹೊಸ ಸಿನಿಮಾ ಒಂದರಲ್ಲಿ ರಶ್ಮಿಕಾ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ