Suniel Shetty: ​‘9ನೇ ವಯಸ್ಸಿಗೆ ನನ್ನ ತಂದೆ ಹೋಟೆಲ್​ ಕ್ಲೀನರ್​ ಆಗಿದ್ರು’: ಆ ದಿನಗಳ ಬಗ್ಗೆ ಮಾತಾಡಿದ ಸುನೀಲ್​ ಶೆಟ್ಟಿ

Suniel Shetty Family | Indian Idol: ‘ತಂದೆ ಮತ್ತು ಮಕ್ಕಳ ಸಂಬಂಧ ಹೀಗೆಯೇ ಇರಬೇಕು. ನನ್ನ ತಂದೆ ಜೊತೆ ನನ್ನ ಸಂಬಂಧ ಹೀಗೆಯೇ ಇತ್ತು’ ಎಂದು ಸುನೀಲ್​ ಶೆಟ್ಟಿ ಅವರು ನೆನಪಿನ ಪುಟ ತೆರೆದಿದ್ದಾರೆ.

Suniel Shetty: ​‘9ನೇ ವಯಸ್ಸಿಗೆ ನನ್ನ ತಂದೆ ಹೋಟೆಲ್​ ಕ್ಲೀನರ್​ ಆಗಿದ್ರು’: ಆ ದಿನಗಳ ಬಗ್ಗೆ ಮಾತಾಡಿದ ಸುನೀಲ್​ ಶೆಟ್ಟಿ
ಸುನೀಲ್ ಶೆಟ್ಟಿImage Credit source: Sony Tv
Follow us
ಮದನ್​ ಕುಮಾರ್​
|

Updated on:Mar 26, 2023 | 10:09 AM

ಬಾಲಿವುಡ್​ನ ಖ್ಯಾತ ನಟ ಸುನೀಲ್​ ಶೆಟ್ಟಿ (Suniel Shetty) ಅವರು ಬಣ್ಣದ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇಂದಿಗೂ ಬಹುಬೇಡಿಕೆಯ ನಟನಾಗಿ ಚಾರ್ಮ್​ ಉಳಿಸಿಕೊಂಡಿರುವ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಸುನೀಲ್​ ಶೆಟ್ಟಿ ಕುಟುಂಬ (Suniel Shetty Family) ಮೊದಲಿನಿಂದಲೂ ಶ್ರೀಮಂತವಾಗಿರಲಿಲ್ಲ. ಅವರ ತಂದೆ ಮುಂಬೈನ ಒಂದು ಹೋಟೆಲ್​ನಲ್ಲಿ ಕ್ಲೀನರ್​ ಆಗಿದ್ದರು. ಆ ಘಟನೆಯನ್ನು ಸುನೀಲ್​ ಶೆಟ್ಟಿ ಆಗಾಗ ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗೆ ‘ಇಂಡಿಯನ್​ ಐಡಲ್​’ (Indian Idol) ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅವರು ಮತ್ತೆ ಆ ದಿನಗಳನ್ನು ಮೆಲುಕು ಹಾಕಿದರು.

‘ಇಂಡಿಯನ್​ ಐಡಲ್​’ ಸ್ಪರ್ಧಿ ದೇಬೋಷ್ಮಿತಾ ಅವರ ಗಾಯನಕ್ಕೆ ಸುನೀಲ್​ ಶೆಟ್ಟಿ ಮರುಳಾಗಿದ್ದಾರೆ. ಈ ಕಾರ್ಯಕ್ರಮ ನೋಡಲು ದೇಬೋಷ್ಮಿತಾ ಅವರ ತಂದೆ-ತಾಯಿ ಕೂಡ ಬಂದಿದ್ದಾರೆ. ತಂದೆ-ಮಗಳ ಬಾಂಧವ್ಯದ ಬಗ್ಗೆ ಸುನೀಲ್​ ಶೆಟ್ಟಿ ಮಾತನಾಡಿದ್ದಾರೆ. ‘ತಂದೆ ಜೊತೆ ನಿಮಗೆ ಇರುವ ಬಾಂಧವ್ಯ ನೋಡಿದಾಗ ನನಗೆ ಬಹಳ ಖುಷಿ ಆಗುತ್ತದೆ. ಅಥಿಯಾ ಜೊತೆ ನನಗೆ ಅದೇ ರೀತಿ ಬಾಂಧವ್ಯ ಇದೆ. ನಾನು ಬದುಕಿರುವುದೇ ಅವಳಿಗಾಗಿ. ನಮ್ಮ ತಾಯಿ ಕೂಡ ನಿಮ್ಮೆಲ್ಲರ ಕಾರ್ಯಕ್ರಮವನ್ನು ನೋಡುತ್ತಾರೆ. ನೀವೆಲ್ಲ ನಮ್ಮ ಕುಟುಂಬದ ಭಾಗವಾಗಿದ್ದೀರಿ’ ಎಂದಿದ್ದಾರೆ ಸುನೀಲ್​ ಶೆಟ್ಟಿ. ಈ ವೇಳೆ ಅವರು ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ
Image
ಸುನೀಲ್​ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್​ ತೆಗೆದುಕೊಂಡ ಸ್ಟಾರ್​ ನಟ
Image
ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ
Image
ಆರ್ಯನ್​ ಖಾನ್​ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್​ ಶೆಟ್ಟಿ
Image
ಕೆ.ಎಲ್​. ರಾಹುಲ್​ ಹಾಗೂ ಅಥಿಯಾ ಜೋಡಿ ನೋಡಿ ಸುನೀಲ್​ ಶೆಟ್ಟಿ ಹೇಳಿದ್ದೇನು?

ಇದನ್ನೂ ಓದಿ: Suniel Shetty: ‘ನಾವು ದಿನವಿಡೀ ಡ್ರಗ್ಸ್​ ತಗೊಳಲ್ಲ’: ಬಾಲಿವುಡ್​ ಉಳಿಸಲು ಯೋಗಿ, ಮೋದಿಗೆ ಸುನೀಲ್​ ಶೆಟ್ಟಿ ಮನವಿ

‘ತಂದೆ ಮತ್ತು ಮಕ್ಕಳ ಸಂಬಂಧ ಹೀಗೆಯೇ ಇರಬೇಕು. ನನ್ನ ತಂದೆ ಜೊತೆ ನನ್ನ ಸಂಬಂಧ ಹೀಗೆಯೇ ಇತ್ತು. ತಂದೆಗೆ ಹೆಮ್ಮೆಯ ಮಗ ನಾನು. ಯಾಕೆಂದರೆ ಅವರು 9ನೇ ವಯಸ್ಸಿನಲ್ಲಿ ಕ್ಲೀನರ್​ ಬಾಯ್​ ಆಗಿದ್ದರು. ಆ ಚಿಕ್ಕ ವಯಸ್ಸಿನಲ್ಲಿ ಅವರು ಒಂದು ಟೇಬಲ್​ ಕ್ಲೀನ್​ ಮಾಡಲು ಅದರ ನಾಲ್ಕೂ ಮೂಲೆ ಸುತ್ತುತ್ತಿದ್ದರು. ಅವರ ಕೈ ಎಟುಕುತ್ತಿರಲಿಲ್ಲ. ಇದನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನೀವು ಏನೇ ಆಗಿದ್ದರೂ ಅದು ನಿಮ್ಮ ತಂದೆ-ತಾಯಿಯ ಕಾರಣದಿಂದ ಎಂಬುದನ್ನು ಎಂದಿಗೂ ಮರೆಯಬೇಡಿ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

1992ರಿಂದಲೂ ಸುನೀಲ್​ ಶೆಟ್ಟಿ ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಅವರು ವೆಬ್​ ಸಿರೀಸ್​ ಜಗತ್ತಿಗೂ ಕಾಲಿಟ್ಟಿದ್ದಾರೆ. ಸುನೀಲ್​ ಶೆಟ್ಟಿ ನಟಿಸಿದ ‘ಧಾರಾವಿ ಬ್ಯಾಂಕ್​’ ವೆಬ್​ ಸಿರೀಸ್​ 2022ರಲ್ಲಿ ಬಿಡುಗಡೆ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:09 am, Sun, 26 March 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ