
ದೆಹಲಿಯ ಕೆಂಪು ಕೋಟೆ ಸಮೀಪವೇ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ ಕೆಲವರು ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಇದರ ಪರಿಣಾಮ ರಶ್ಮಿಕಾ ಮಂದಣ್ಣ ಸಿನಿಮಾ ಮೇಲೆ ಆಗಿದೆ. ಹೌದು, ‘ಕಾಕ್ಟೇಲ್ 2’ ಚಿತ್ರದಲ್ಲಿ ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಬೇಕಿದೆ. ಈ ಚಿತ್ರದ ದೆಹಲಿ ಶೂಟ್ ನಡೆಯಬೇಕಿತ್ತು. ಆದರೆ, ಬಾಂಬ್ ಸ್ಫೋಟದ ಕಾರಣಕ್ಕೆ ಶೂಟಿಂಗ್ ಮುಂದಕ್ಕೆ ಹೋಗಿದೆ.
ದೆಹಲಿಯಲ್ಲಿ ಇಂದಿನಿಂದ (ನವೆಂಬರ್ 12) ‘ಕಾಕ್ಟೇಲ್ 2’ ಚಿತ್ರದ ಶೂಟಿಂಗ್ ಆರಂಭ ಆಗಬೇಕಿತ್ತು. ರಶ್ಮಿಕಾ ಹೈದರಾಬಾದ್ನಿಂದ ಮುಂಬೈಗೆ ಹಾರಲು ರೆಡಿ ಆಗಿದ್ದರು. ಆದರೆ, ದೆಹಲಿಯಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ತುಂಬಾನೇ ಹದಗೆಟ್ಟಿದೆ. ಈ ಆತಂಕವು ತಂಡವನ್ನು ಕಾಡಿದೆ. ಇನ್ನು ಇತ್ತೀಚೆಗೆ ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣವೂ ಅವರ ಆತಂಕ ಹೆಚ್ಚು ಮಾಡಿದೆ.
ಶಾಹಿದ್ ಕಪೂರ್, ಕೃತಿ ಹಾಗೂ ರಶ್ಮಿಕಾ ಅವರು ಇಂದಿನಿಂದ ದೆಹಲಿಯಲ್ಲಿ ಶೂಟ್ ಆರಂಭಿಸಬೇಕಿತ್ತು. ಆದರೆ, ಈ ಎಲ್ಲಾ ಬೆಳವಣಿಗೆಗಳಿಂದ ತಂಡ ಎಚ್ಚೆತ್ತುಕೊಂಡಿದೆ. ಹೀಗಾಗಿ, ದೆಹಲಿ ಶೂಟ್ನ ಮುಂದಕ್ಕೆ ಹಾಕಿದೆಯಂತೆ. ದೆಹಲಿಯಲ್ಲಿ ಇನ್ನು ಕೆಲವು ದಿನಗಳ ಬಳಿಕ ಪರಿಸ್ಥಿತಿ ಸರಿಯಾಬಹುದು ಎಂಬ ನಿರೀಕ್ಷೆ ಇದೆ. ಆಗದಿದ್ದಲ್ಲಿ ಸೆಟ್ ಹಾಕಿ ಶೂಟ್ ಮಾಡುವ ಆಲೋಚನೆಯೂ ತಂಡಕ್ಕೆ ಬಂದಿದೆ.
ಇದನ್ನೂ ಓದಿ:ಮದುವೆ ಬಗ್ಗೆ ಸುದ್ದಿಗೋಷ್ಠಿ ನಡೆಸಲಿರುವ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಅವರು ಫೆಬ್ರವರಿಯಲ್ಲಿ ವಿವಾಹ ಆಗುತ್ತಿದ್ದಾರೆ. ಫೆಬ್ರವರಿ 26ರಂದು ಅವರ ಮದುವೆ ಉದಯಪುರದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ತಾವು ಒಪ್ಪಿಕೊಂಡ ಸಿನಿಮಾಗಳ ಕೆಲಸವನ್ನು ಅವರು ಪೂರ್ಣಗೊಳಿಸಿಕೊಳ್ಳಬೇಕಿದೆ. ಈಗ ಈ ಸಿನಿಮಾದ ಶೂಟ್ ಶೆಡ್ಯೂಲ್ ಮುಂದಕ್ಕೆ ಹೋಗಿರುವುದು ಅವರ ಚಿಂತೆಗೆ ಕಾರಣ ಆಗಿದೆ. ಏಕೆಂದರೆ, ರಶ್ಮಿಕಾ ಬ್ಯುಸಿ ನಟಿಯರಲ್ಲಿ ಒಬ್ಬರು. ಅವರು ಬೇರೆ ಬೇರೆ ಸಿನಿಮಾಗಳಿಗೆ ಬೇರೆ ಬೇರೆ ಡೇಟ್ ನೀಡುತ್ತಾರೆ. ಹೀಗಾಗಿ, ಡೇಟ್ ಅಡ್ಜಸ್ಟ್ ಮಾಡೋದು ಅವರಿಗೆ ಕಷ್ಟ ಆಗಬಹುದು.
2012ರಲ್ಲಿ ಬಂದ ‘ಕಾಕ್ಟೇಲ್’ ಚಿತ್ರ ಸೀಕ್ವೆಲ್ ಆಗಿ ‘ಕಾಕ್ಟೇಲ್ 2’ ಸಿನಿಮಾ ಮೂಡಿ ಬಂದಿದೆ. ಸೈಫ್ ಅಲಿ ಖಾನ್. ದೀಪಿಕಾ ಪಡುಕೋಣೆ, ಮೊದಲಾದವರು ನಟಿಸಿದ್ದರು. ಸದ್ಯ ‘ಕಾಕ್ಟೇಲ್ 2’ ಅಧಿಕೃತವಾಗಿ ಘೋಷಣೆ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ